ಎಲ್ಲರಿಗೂ ಮಾದರಿಯಾದ ಈ ಅಂಧ ವ್ಯಕ್ತಿ ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ ಮಾಡಿದ್ದೇನು ಗೊತ್ತಾ?

in Uncategorized/ಕನ್ನಡ ಮಾಹಿತಿ 74 views

ಲಾಕ್ ಡೌನ್ ಆದ ನಂತರ ಬಹಳಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡ ಕೆಲವರು ಮಾನಸಿಕವಾಗಿ ಕುಗ್ಗಿ ಹೋಗಿ, ಆತ್ಮಹತ್ಯೆಯ ದಾರಿ ಹಿಡಿದರೆ, ಮತ್ತೆ ಕೆಲವರು ಯಾವುದಕ್ಕೂ ಜಗ್ಗದೆ, ವಿದ್ಯಾವಂತರಾದರೂ ಬೀದಿಯಲ್ಲಿ ತರಕಾರಿ, ಹಣ್ಣುಗಳನ್ನು ಮಾರಿ ಜೀವನ ಸಾಗಿಸಿದ್ದಾರೆ. ಸಮಾಜದಲ್ಲಿ ಸೈ ಎನಿಸಿಕೊಂಡಿದ್ದಾರೆ. ಇಂದಿಲ್ಲಿ ನಾವು ಹೇಳಲು ಹೊರಟಿರುವ ವ್ಯಕ್ತಿಯ ಕಥೆಯೂ ಖಂಡಿತ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗುವುದಲ್ಲದೆ, ಸಾಧನೆಗೆ ದಾರಿಯಾಗುತ್ತದೆ.
ಕೋವಿಡ್ -19 ಹರಡುವುದನ್ನು ತಡೆಯಲು ಭಾರತ ಸರ್ಕಾರ ಮಾರ್ಚ್ನಲ್ಲಿ ಲಾಕ್ಡೌನ್ ವಿಧಿಸಿತ್ತು. ಈ ಲಾಕ್ ಡೌನ್’ನಿಂದಾಗಿ ಲಕ್ಷಾಂತರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡು ಬೀದಿಗೆ ಬಿದ್ದರು, ಅಲ್ಲದೆ ಪಟ್ಟಣಗಳನ್ನು ಬಿಟ್ಟು ತಮ್ಮ ಹಳ್ಳಿ ಮನೆಗಳಿಗೆ ಮರಳಿದರು. ಆದರೆ ಈ ಮಧ್ಯೆ ಸ್ವಾವಲಂಬಿಗಳಾದ ಅನೇಕ ಜನರಿದ್ದರು ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಅಂದಹಾಗೆ ಅಶ್ವಿನ್ ಠಕ್ಕರ್ ಎಂಬ ವ್ಯಕ್ತಿ ಅಹಮದಾಬಾದ್’ನಲ್ಲಿ ವಾಸಿಸುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಅಶ್ವಿನ್ ಠಕ್ಕರ್ ಅಂಧನಾಗಿದ್ದು, ಅಹಮದಾಬಾದ್’ನ ಹೋಟೆಲ್’ವೊಂದರಲ್ಲಿ ಟೆಲಿಫೋನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.

Advertisement

Advertisement

ಲಾಕ್ ಡೌನ್ ನಂತರ ಮೇ-ಜೂನ್ ಅವಧಿಯಲ್ಲಿ ಅಶ್ವಿನ್ ಮಾವಿನಹಣ್ಣನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಆ ನಂತರ ಅವರು ಗುಜರಾತಿ ತಿಂಡಿಗಳನ್ನು ಮಾರಾಟ ಮಾಡುವ ಬ್ಯುಸಿನೆಸ್ ಪ್ರಾರಂಭಿಸಿದರು.  “ನಾನು ಈ ಮೊದಲು ಯಾವುದೇ ಬ್ಯುಸಿನೆಸ್ ಮಾಡಿಲ್ಲ. ನನ್ನ ಈ ಬ್ಯುಸಿನೆಸ್ ಇಷ್ಟು ದಿನಗಳವರೆಗೆ ಮುಂದುವರೆಯುತ್ತದೆ ಎಂದು ನಾನು ಭಾವಿಸಿರಲಿಲ್ಲ” ಎಂದು ಅಶ್ವಿನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈಗ ನಾನು ಗುಜರಾತಿ ತಿಂಡಿಗಳನ್ನು ಮಾರಾಟ ಮಾಡುತ್ತಿದ್ದೇನೆ. ಕುರುಡನಾಗಿರುವುದರಿಂದ ಸರಕುಗಳನ್ನು ತಲುಪಿಸುವುದು ನನಗೆ ಕಷ್ಟಕರವಾಗಿತ್ತು. ಆದರೆ ಬಲವಾದ ಇಚ್ಛಾ ಶಕ್ತಿಯಿಂದ ನಾನು ವ್ಯವಹಾರದಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ಹೆಂಡತಿ ಕೂಡ ನನ್ನನ್ನು ಬೆಂಬಲಿಸುತ್ತಾಳೆ. ನಾವು ದಸರಾ ಮತ್ತು ದೀಪಾವಳಿಯಂದು ಸಿಹಿ ಅಂಗಡಿಯನ್ನು ತೆರೆಯುವ ಬಗ್ಗೆ ಯೋಚಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

Advertisement

ಅಶ್ವಿನ್ ಠಕ್ಕರ್ ಅವರು ತಮ್ಮ ಪತ್ನಿ ಗೀತಾ ಅವರೊಂದಿಗೆ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ಸಹ ಮಾರುತ್ತಾರೆ. ಈ ಸರಕುಗಳನ್ನು ಮಾರಾಟ ಮಾಡಿದ ನಂತರ ಅವರು ಪಡೆಯುವ ಹಣದಿಂದ ಕುಟುಂಬ ನಡೆಸಲು ಸುಲಭವಾಗುತ್ತಿದೆ. ಈ ರೀತಿಯಾಗಿ ಅಶ್ವಿನ್ ಮತ್ತು ಅವರ ಪತ್ನಿ ಸ್ವಾವಲಂಬಿಗಳಾಗುವ ಮೂಲಕ ಜನರಿಗೆ ಉತ್ತಮ ಉದಾಹರಣೆಯಾಗಿ ನಿಂತಿದ್ದಾರೆ.

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...