ಅಶ್ವಿನಿ ನಕ್ಷತ್ರಕ್ಕೆ ಕೂಡಿ ಬಂತು ಕಂಕಣಭಾಗ್ಯ ! ವರ ಯಾರು ಗೊತ್ತಾ?

in News/ಮನರಂಜನೆ 51 views

ಅಶ್ವಿನಿ ನಕ್ಷತ್ರ ಧಾರವಾಹಿ ಖ್ಯಾತಿಯ ಮಯೂರಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಾಲ ಸ್ನೇಹಿತನ ಜೊತೆ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಜೆ.ಪಿ ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಈ ಶುಭ ಕಾರ್ಯ ನಡೆದಿದ್ದು, ತನ್ನ ಬಹುಕಾಲದ ಸ್ನೇಹಿತನಾದ ಅರುಣ್ ಎಂಬುವವರ ಜೊತೆ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ. ಸುಮಾರು ೧೦ ವರುಷದಿಂದ ಮಯೂರಿ ಹಾಗೂ ಅರುಣ್ ಪ್ರೀತಿಸುತ್ತಿದ್ದು, ಕುಟುಂಬಸ್ಥರ ಸಮುಖದಲ್ಲಿ ವಿವಾಹವಾಗಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದು,  ‘ಹೌದು ನಾನು ಮದುವೆಯಾದೆ’ ಎಂದು ಬರೆದುಕೊಂಡು ವಿವಾಹ ಜರುಗುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೊದ ಮೊದಲು ಕಿರುತೆರೆ ಧಾರವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದ ಮಯೂರಿ, ನಂತರ ಸಿನಿಮಾಗಳನ್ನು ಮಾಡಿ ಜನಮನ್ನಣೆ ಪಡೆದಿದ್ದರು. ಶಶಾಂಕ್ ನಿರ್ದೇಶನದಲ್ಲಿ ಖ್ಯಾತ ನಟರಾದ ಅಜಯ್ ರಾವ್ ಅವರ ಜೊತೆ ಕೃಷ್ಣ ಲೀಲಾ ಎಂಬ ಸಿನಿಮಾದಲ್ಲಿ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿ ಖ್ಯಾತಿ ಪಡೆದಿದ್ದರು.

Advertisement

 

Advertisement

Advertisement

ಮಯೂರಿ ಅವರು ವಿವಾಹವಾಗಿರುವ ಅರುಣ್ ಅವರು ಐಟಿ ಉದ್ಯೋಗಿ ಆಗಿದ್ದು, ಅಮೆರಿಕದಲ್ಲಿ ಸೆಟಲ್ ಆಗಿದ್ದರು. ಸದ್ಯ ದೇಶಕ್ಕೆ ಹಿಂತಿರುಗಿದ್ದು ಬೆಂಗಳೂರು ನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಗೆಳೆಯರಾಗಿದ್ದ ಅರುಣ್ ಮತ್ತು ಮಯೂರಿ ಸುಮಾರು 10 ವರುಷದಿಂದ ಪ್ರೇಮ ಪಕ್ಷಿಯಾಗಿ ತೇಲಾಡುತ್ತಿದ್ದರು. ಇದೀಗ ತಮ್ಮ ಪ್ರೇಮ ವಿಚಾರವನ್ನು ಮನೆಯವರಿಗೆ ತಿಳಿಸಿದ್ದು, ಪೋಷಕರನ್ನು ಒಪ್ಪಿಸಿ ವಿವಾಹವಾಗಿದ್ದಾರೆ.

Advertisement

 

 

View this post on Instagram

 

Yes I am married❤️ 12/06/2020 10 years of friendship given a meaning today ❤️ Vl update more shortly

A post shared by mayuri (@mayurikyatari) on


ಇನ್ನು ಮಯೂರಿ, ಅಶ್ವಿನಿ ನಕ್ಷತ್ರ ಎಂಬ ಕಿರುತೆರೆಯ ಸೂಪರ್ ಹಿಟ್ ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿ ಅಪಾರ ಖ್ಯಾತಿ ಪಡೆದುಕೊಂಡು, ನಂತರ `ಕೃಷ್ಣ ಲೀಲಾ’ ಸಿನಿಮಾದ ಮೂಲಕ ಚಂದನವನದಲ್ಲಿ ಎರಡನೇ ಇನ್ನಿಂಗ್ಸ್ ಪ್ರಾರಂಭಿಸುತ್ತಾರೆ. `ಇಷ್ಟಕಾಮ್ಯ’, `ರುಸ್ತುಂ’ನಂತಹ ಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸಿದ ನಂತರ, ಮಯೂರಿ `ಆಟಕ್ಕುಂಟು ಲೆಕ್ಕಕ್ಕಿಲ್ಲ’, `ಮೌನಂ’ ಚಿತ್ರಗಳಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ.

Advertisement
Share this on...