ನನ್ನವನಿಗೆ ಹುಟ್ಟುಹಬ್ಬದ ಶುಭಾಶಯ ಎಂದ ಅಥಿಯಾ.‌.!

in ಮನರಂಜನೆ 17 views

ಟೀಮ್ ಇಂಡಿಯಾ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ 29 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಅಭಿಮಾನಿಗಳು ರಾಹುಲ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಆದರೆ ಈ ಮಧ್ಯೆ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಕೂಡ ರಾಹುಲ್ ಗೆ ಸ್ಪೆಷಲ್ ವಿಶ್ ಮಾಡಿದ್ದಾರೆ. ರಾಹುಲ್ ಕ್ರಿಕೆಟ್ ಬಿಟ್ಟರೆ ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿರುವುದು ತಮ್ಮ ಗೆಳತಿ ಅಥಿಯಾ ಕಾರಣಕ್ಕೆ. ರಾಹುಲ್ ಹಾಗೂ ಅಥಿಯಾ ಬಗ್ಗೆ ಸಾಕಷ್ಟು ಗಾಸಿಪ್ ಗಳು ಕೇಳಿ ಬರುತ್ತಿವೆ.

Advertisement

 

Advertisement

Advertisement

 

Advertisement

ಇತ್ತೀಚೆಗಷ್ಟೇ ಅಥಿಯಾ ಪೋಸ್ಟ್ ಗೆ ರಾಹುಲ್ ಮಾಡಿದ ಕಾಮೆಂಟ್ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ ಈಗ ಅಥಿಯಾ, ಕೆ.ಎಲ್ ರಾಹುಲ್ ಗೆ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪೋಸ್ಟ್ ಮತ್ತಷ್ಟು ಗಾಸಿಪ್ ಹುಟ್ಟಿಸಿದೆ. ಏನಪ್ಪಾ ಆ ಪೋಸ್ಟ್..? ರಾಹುಲ್ ಗೆ ಅಥಿಯಾ ಹೇಗೆ ವಿಶ್ ಮಾಡಿದ್ದಾರೆ ಅಂತೀರಾ..?

 

 

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ರಾಹುಲ್ ಗೆ ಅಥಿಯಾ ಪೋಸ್ಟ್ ಒಂದನ್ನ ಹಾಕಿ ಶುಭಾಶಯ ಕೋರಿದರು. ನನ್ನವನಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಕ್ಯಾಪ್ಷನ್ ಹಾಕಿ ಅಥಿಯಾ ತಾವು ಹಾಗೂ ರಾಹುಲ್ ಇರುವ ಫೋಟೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮೊದಲೇ ರಾಹುಲ್ ಮತ್ತು ಅಥಿಯಾ ಬಗ್ಗೆ ಸಾಕಷ್ಟು ಗಾಸಿಪ್ ಹರಿದಾಡುತ್ತಿದೆ.

 

 

View this post on Instagram

 

happy birthday, my person ? @rahulkl

A post shared by Athiya Shetty (@athiyashetty) on

 

ಈ ಮಧ್ಯೆ ಮತ್ತಷ್ಟು ಚರ್ಚೆ ಮಾಡಲು ನೆಟ್ಟಿಗರಿಗೆ ಹೊಸ ವಿಷಯ ಸಿಕ್ಕಂತಾಗಿದೆ. ಈ ಹಿಂದೆ ಅಥಿಯಾ ಶೆಟ್ಟಿ ಬಿಳಿ ಶರ್ಟ್ ಧರಿಸಿ ಸ್ಟೈಲಿಶ್ ಆಗಿ ಪೋಸ್ ನೀಡಿದ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು. ಫೋಟೋಗೆ ಗೆಳೆಯ ರಾಹುಲ್ ಒಳ್ಳೆಯ ಶರ್ಟ್ ಎಂದು ಕಮೆಂಟ್ ಮಾಡಿದ್ದರು. ಅಭಿಮಾನಿಗಳಿಗೆ ಇಷ್ಟೇ ಸಾಕಿತ್ತು ಅಥಿಯಾ, ರಾಹುಲ್ ರ ಕಾಲೆಳೆಯಲು ಆರಂಭಿಸಿದರು.

 

 

View this post on Instagram

 

Life is a blessing we can’t take for granted. So make today count, reflect, be grateful for life and your loved ones. ???

A post shared by KL Rahul? (@rahulkl) on

ಹೀಗಾಗಿ ರಾಹುಲ್ ರ ಕಾಮೆಂಟ್ ಕಾರಣಕ್ಕೆ ಅಥಿಯಾ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು. ಕೆಲವರು ಈ ಶರ್ಟ್ ಬಹುಶಃ ನಿಮ್ಮದಾಗಿರಬೇಕು ಎಂದು ರಾಹುಲ್ ಕಾಲೆಳೆದರೆ, ಶರ್ಟ್ ನಿಮಗೆ ಇಷ್ಟವಾಗಿದೆಯಾ ಎಂದು ಕೆಲವರು ಪ್ರಶ್ನಿಸಿದರು, ಇನ್ನು ಕೆಲವರಂತೂ ನಿಮ್ಮಿಬ್ಬರ ಜೋಡಿ ಫೋಟೋವನ್ನ ಹಂಚಿಕೊಳ್ಳಿ ಎಂದು ಬೇಡಿಕೆ ಇಟ್ಟಿದ್ದರು. ಅಷ್ಟಕ್ಕೂ ರಾಹುಲ್ ಕಾಮೆಂಟ್ ಜೊತೆಗೆ ಈ ಫೋಟೋ ವೈರಲ್ ಆಗುವುದಕ್ಕೆ ಮತ್ತೊಂದು ಕಾರಣವೂ ಇದೆ.

 

 

View this post on Instagram

 

à perte de vue ?

A post shared by Athiya Shetty (@athiyashetty) on


ಇಲ್ಲಿ ಅಥಿಯಾ ತನ್ನದಲ್ಲದ ಸೈಜ಼್ ಶರ್ಟ್ ಧರಿಸಿದ್ದರು. ಇದೇ ಕಾರಣಕ್ಕೆ ಕೆ.ಎಲ್ ರಾಹುಲ್ ಕಮೆಂಟ್ ಜೊತೆಗೆ ಅಭಿಮಾನಿಗಳು ತಮಾಷೆ ಮಾಡಿ ಟ್ರೋಲ್ ಮಾಡಿದರು.

– ಸುಷ್ಮಿತಾ

Advertisement
Share this on...