ಅದರ ಮೇಲಿನ ಪ್ರೀತಿಯಿಂದ ಹೇಗಿದ್ದವಳು ನಂತರ ಹೇಗಾದಳು ನೋಡಿ…!

in ಮನರಂಜನೆ 23 views

ಸೌಂದರ್ಯ ಎಂಬ ಪದ ಕೇಳಿದಾಗ ಎಲ್ಲರ ಕಣ್ಣ ಮುಂದೆ ಬರುವುದು ಹೆಣ್ಣು. ಅದಕ್ಕಾಗಿ ಕವಿಗಳು ಪ್ರಕೃತಿ, ಹಂಸ, ನದಿ ಹಾಗೂ ಇನ್ನಿತರ ವಿಚಾರಗಳನ್ನು ಹೆಣ್ಣಿಗೆ ಹೋಲಿಸುವುದು. ಪ್ರತಿ ಹೆಣ್ಣಿಗೂ ತನ್ನ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ ಇರುತ್ತದೆ. ತಲೆಕೂದಲಿಂದ ಹಿಡಿದು, ಕಾಲಿನ ಉಗುರವರೆಗೂ ಭಾರೀ ಕಾಳಜಿ ವಹಿಸುವ ಹೆಣ್ಣು ಮಕ್ಕಳು ಮಾರುಕಟ್ಟೆಯಲ್ಲಿ ಸಿಗುವ ಕಾಸ್ಮೆಟಿಕ್ಸ್​​​​​​​ ಮೊರೆ ಹೋಗುತ್ತಾರೆ.

Advertisement

 

Advertisement

Advertisement

ಎಷ್ಟೋ ಹೆಣ್ಣುಮಕ್ಕಳು ಸೌಂದರ್ಯವೃದ್ಧಿಗೆ ಮನೆಯಲ್ಲಿ ದೊರೆಯುವ ನೈಸರ್ಗಿಕ ವಸ್ತುಗಳನ್ನು ಬಳಸಿದರೆ ಕೆಲವರು ಕಾಸ್ಮೆಟಿಕ್ಸ್​​​​​​​​​​​​​​​​ ಅಥವಾ ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗುತ್ತಾರೆ. ಇನ್ನೂ ಕೆಲವರಿಗೆ ನಾವು ಸಿನಿಮಾ ನಟರಂತೆ ಕಾಣಬೇಕು ಎಂಬ ಹುಚ್ಚು. ಆದ್ದರಿಂದ ಲಕ್ಷಾಂತರ ಖರ್ಚು ಮಾಡಿ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಆದರೆ ಎಷ್ಟೋ ಬಾರಿ ಆ ಸರ್ಜರಿ ಅವರಿಗೆ ವರವಾಗುವ ಬದಲಿಗೆ ಜೀವಕ್ಕೆ ಅಪಾಯವಾಗಿರುವುದುಂಟು. ಇಂತಹ ಎಷ್ಟೋ ಉದಾಹರಣೆಗಳಿವೆ.

Advertisement

 

ಬಲ್ಗೇರಿಯಾದ 22 ವರ್ಷದ ಆಂಡ್ರಿಯಾ ಎಮಿಲೋವ ಎಂಬ ಯುವತಿ ಕೂಡಾ ಇದೇ ರೀತಿ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಕೋಟ್ಯಂತರ ಹಣ ವೆಚ್ಚ ಮಾಡಿದ್ದಾಳೆ. ಈಕೆಗೆ ತನ್ನ ತುಟಿ ದಪ್ಪಗಿರಬೇಕೆಂದು ಆಸೆಯಂತೆ. ವಿಶ್ವದಲ್ಲಿ ಅತಿ ದಪ್ಪಗಿನ ತುಟಿ ಹೊಂದಿರುವ ಯುವತಿ ಎಂಬ ಹೆಸರು ಗಳಿಸಬೇಕೆಂಬ ಆಸೆ ಹೊಂದಿದ್ಧಾಳಂತೆ. ಈ ಕಾರಣದಿಂದ ಇದುವರೆಗೂ ಬರೋಬ್ಬರಿ 20 ಬಾರಿ ಸರ್ಜರಿ ಮಾಡಿಸಿಕೊಂಡಿದ್ದಾಳೆ ಆಂಡ್ರಿಯಾ. ಆದರೆ ಇಷ್ಟಾದರೂ ಆಕೆಗೆ ಸಮಾಧಾನವಾಗಿಲ್ಲವಂತೆ. ತುಟಿ ಮತ್ತಷ್ಟು ದಪ್ಪವಾಗಬೇಕೆಂದು ಮತ್ತೆ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ.

 

ಆದರೆ ಆಂಡ್ರಿಯಾಗೆ ಸರ್ಜರಿ ಮಾಡಲು ಡಾಕ್ಟರ್​​​​ಗಳು ಹೆದರುತ್ತಿದ್ದಾರಂತೆ. ಪ್ರತಿ ಬಾರಿ ಸರ್ಜರಿ ಮಾಡಿಸಿಕೊಂಡಾಗಿ ಆಂಡ್ರಿಯಾ ಫೋಟೋಗಳನ್ನು ಇನ್ಸ್​​​ಟಾಗ್ರಾಮ್​​​ನಲ್ಲಿ ಅಪ್​​ಲೋಡ್ ಮಾಡುತ್ತಿದ್ದಾಳೆ. ಕಾಲೇಜು ಯುವತಿಯಾಗಿರುವ ಆಕೆ ಫಿಲಾಸಫಿ ಕಲಿಯುತ್ತಿದ್ದಾಳೆ. ತುಟಿಗೆ ಸೌಂದರ್ಯವರ್ಧಕ ಚಿಕಿತ್ಸೆ ಮಾಡಿಸಿಕೊಂಡ ನಂತರ ಆಂಡ್ರಿಯಾಗೆ ತಿನ್ನಲು ಹಾಗೂ ಕುಡಿಯಲು ಬಹಳ ತೊಂದರೆಯಾಗುತ್ತಿದೆಯಂತೆ. ಆದರೂ ತನ್ನ ದಪ್ಪ ತುಟಿಗಳ ಮೇಲಿನ ಪ್ರೀತಿ ಮಾತ್ರ ಈಕೆಗೆ ಕಡಿಮೆಯಾಗಿಲ್ಲ. ಇದೇ ರೀತಿ ಮುಂದುವರೆದರೆ ಈಕೆಯ ಈ ಸ್ಥಿತಿ ಎಲ್ಲಿಗೆ ಬಂದು ಮುಟ್ಟುತದೆಯೋ ನೋಡಬೇಕು.

Advertisement
Share this on...