ಕನ್ನಡದ ಬಾಲ ನಟಿ ಬೇಬಿ ಇಂದಿರಾ ಈಗ ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ ಗೊತ್ತಾ..?

in ಕನ್ನಡ ಮಾಹಿತಿ/ಸಿನಿಮಾ 604 views

ಬೇಬಿ ಇಂದಿರಾ 70-80 ರ ದಶಕದ ಕನ್ನಡ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಸಕ್ಕತ್ ಫೇಮಸ್ ಆಗಿದ್ದರು. ಮಕ್ಕಳ ಚಿತ್ರಗಳಲ್ಲಿ ಬೇಬಿ ಇಂದಿರಾ ಅಮೋಘ ಅಭಿನಯ ನೀಡುತ್ತಿದ್ದರು. ಅಂದಿನ ಕಾಲದಲ್ಲಿ ಮಕ್ಕಳ ಚಿತ್ರಗಳು ಪ್ರೇಕ್ಷಕರಿಗೆ ತುಂಬಾನೆ ಥ್ರಿಲ್ ಕೊಡುತ್ತಿದ್ದವು. ಹಲವಾರು ಮಕ್ಕಳ ಚಿತ್ರಗಳಲ್ಲಿ ಬೇಬಿ ಇಂದಿರಾ ಕಾಣಿಸಿಕೊಂಡಿದ್ದಾರೆ. ಡಾ.ರಾಜ್ ಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ರವರ ‘ಜನ್ಮರಹಸ್ಯ’ ಎಂಬ ಸಿನಿಮಾದ ಮೂಲಕ ಬಾಲ ನಟಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು ನಟಿ ಬೇಬಿ ಇಂದಿರಾ. ನಂತರದಲ್ಲಿ ಪುಟಾಣಿ ಏಜೆಂಟ್ 123, ಸಿಂಹದಮರಿ ಸೈನ್ಯ, ಮಕ್ಕಳಭಾಗ್ಯ ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಹಾಗೂ ಇನ್ನೂ ಮುಂತಾದ ಕನ್ನಡದ ಮೇರು ನಟರ ಚಿತ್ರಗಳಲ್ಲಿ ಬೇಬಿ ಇಂದಿರಾ ಬಾಲ ನಟಿಯಾಗಿ ನಟಿಸಿದ್ದಾರೆ.

Advertisement

 

Advertisement

Advertisement

 

Advertisement

ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸಿ ನಂತರ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿಯೂ ಬಾಲ ನಟಿಯಾಗಿ ನಟಿಸಿದರು ನಟಿ ಬೇಬಿ ಇಂದಿರಾ. ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಬೇಬಿ ಇಂದಿರಾ ನಟಿಸಿದ್ದಾರೆ. ಕನ್ನಡದಲ್ಲಿ 1984ರಲ್ಲಿ ತೆರೆಕಂಡ ಅರ್ಜುನ್ ಸರ್ಜಾ ನಾಯಕರಾಗಿ ನಟಿಸಿದ ‘ಮಳೆ ಬಂತು ಮಳೆ’ ಚಿತ್ರದಲ್ಲಿ ಬೇಬಿ ಇಂದಿರಾ ನಾಯಕಿಯಾಗಿ ನಟಿಸಿದ್ದರು. ಬೇಬಿ ಇಂದಿರಾರವರು ತಮಿಳಿನ ಬಾಲ ನಟನಾಗಿ ಮಿಂಚಿದ ಮಾಸ್ಟರ್ ಶ್ರೀಧರ್ ಎಂಬುವವರನ್ನು ಮದುವೆಯಾದರು. ಈ ದಂಪತಿಗಳಿಗೆ ಪ್ರಶಾಂತ್ ಹಾಗೂ ರಕ್ಷಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಬೇಬಿ ಇಂದಿರಾ ಅವರ ಪತಿ ಮಾಸ್ಟರ್ ಶ್ರೀಧರ್ ರವರು 2013 ರಲ್ಲಿ ತಮ್ಮ 60 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಸುಮಾರು 50 ವರ್ಷ ದಾಟಿರುವ ಬೇಬಿ ಇಂದಿರಾ ತಮ್ಮ ಮಕ್ಕಳೊಂದಿಗೆ ಚೆನ್ನೈನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಬಾಲ ನಟಿಯಾಗಿ ಮಿಂಚಿದ ಬೇಬಿ ಇಂದಿರಾ ನಾಯಕಿಯಾಗಿ ಅಷ್ಟೇನೂ ಯಶಸ್ಸು ಕಾಣಲಿಲ್ಲ.

– ಸುಷ್ಮಿತಾ

Advertisement
Share this on...