ಬಾಲನಟಿಯಾಗಿ ಹೆಸರು ಮಾಡಿದ್ದ ಶಾಮಿಲಿ ಈಗ ಹೇಗಿದ್ದಾರೆ…ಏನು ಮಾಡುತ್ತಿದ್ದಾರೆ…?

in ಮನರಂಜನೆ/ಸಿನಿಮಾ 430 views

‘ಮತ್ತೆ ಹಾಡಿತು ಕೋಗಿಲೆ’ ಚಿತ್ರದಲ್ಲಿ ನವ ವಸಂತದ ಗಾಳಿ ಬೀಸಲು ಮಾವು ಚಿಗುರಿತು ಆಗಲೇ ಎಂಬ ಹಾಡಿಗೆ ಮುದ್ದು ಮುದ್ದಾಗಿ ನಟಿಸುತ್ತಾ ಕನ್ನಡಿಗರ ಹೃದಯ ಕದ್ದ ಪುಟ್ಟ ಕಂದ ಬೇಬಿ ಶಾಮಿಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಡಾ. ವಿಷ್ಣುವರ್ಧನ್ ದತ್ತು ಪುತ್ರಿ ಪಲ್ಲವಿ ಆಗಿ 3 ವರ್ಷ ವಯಸ್ಸಿನಲ್ಲೇ ಎಲ್ಲರ ಮನ ಮುಟ್ಟುವ ಹಾಗೆ ನಟಿಸಿದ ಶಾಮಿಲಿ ಆಗ ಬೇಬಿ ಶಾಮಿಲಿ ಎಂದೇ ಫೇಮಸ್. ಬೇಬಿ ಶಾಮಿಲಿ ಸಿನಿಮಾ ಟಿವಿಯಲ್ಲಿ ಬರುತ್ತದೆ ಎಂದರೆ ಸಾಕು. ಆ ದಿನ ಎಲ್ಲರೂ ಟಿವಿ ಮುಂದೆ ತಪ್ಪದೆ ಹಾಜರಾಗುತ್ತಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಬಾಲನಟಿಯಾಗಿ ದೊಡ್ಡ ಹೆಸರು ಮಾಡಿದ್ದರು ಶಾಮಿಲಿ. ಮತ್ತೆ ಹಾಡಿತು ಕೋಗಿಲೆ ಚಿತ್ರಕ್ಕಾಗಿ ಅವರು ಬೆಸ್ಟ್​​​​​​​​​​​​​​​​​ ಚೈಲ್ಡ್ ಆರ್ಟಿಸ್ಟ್ ರಾಜ್ಯ ಪ್ರಶಸ್ತಿ ಕೂಡಾ ಪಡೆದಿದ್ದರು. 2 ವರ್ಷ ವಯಸ್ಸಿಗೆ ‘ರಾಜನದೈ’ ತಮಿಳು ಚಿತ್ರದ ಮೂಲಕ ಶಾಮಿಲಿ ಚಿತ್ರರಂಗ ಪ್ರವೇಶಿಸಿದರು. ಶಾಮಿಲಿ ಅಕ್ಕ ಶಾಲಿನಿ ಹಾಗೂ ಅಣ್ಣ ರಿಚರ್ಡ್ ರಿಶಿ ಕೂಡಾ ನಟರು. ಶಾಲಿನಿ, ತಮಿಳು ಖ್ಯಾತ ನಟ ಅಜಿತ್ ಪತ್ನಿ. ಹೀಗೆ ಕಲಾವಿದರ ಕುಟುಂಬದಲ್ಲಿ ಬೆಳೆದವರು ಶಾಮಿಲಿ.

Advertisement

Advertisement

ಶಾಮಿಲಿ ತಂದೆ ಬಾಬು ಹಾಗೂ ತಾಯಿ ಅಲಿಸ್​​. ನಟನಾಗುವ ಆಸೆಯಿಂದ ಶಾಮಿಲಿ ತಂದೆ ಚೆನ್ನೈಗೆ ಹೋಗಿ ಸೆಟಲ್ ಆದರು. ತಾವು ಅಂದುಕೊಂಡಂತೆ ಅವರು ಚಿತ್ರರಂಗದಲ್ಲಿ ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಆ ಕನಸನ್ನು ತಮ್ಮ ಮಕ್ಕಳ ಮೂಲಕ ನನಸು ಮಾಡಿಕೊಂಡರು. ಶಾಮಿಲಿಗೆ ಒಳ್ಳೆ ಹೆಸರು ತಂದುಕೊಟ್ಟದ್ದು ಮಣಿರತ್ನಂ ನಿರ್ದೇಶನದ ಅಂಜಲಿ ಧಾರಾವಾಹಿ. ಈ ಚಿತ್ರದಲ್ಲಿ ಶಾಮಿಲಿ ವಿಶೇಷ ಚೇತನ ಮಗುವಾಗಿ ನಟಿಸಿದ್ದರು. ಈ ಚಿತ್ರಕ್ಕೆ ಮೊದಲ ಬಾರಿಗೆ ಉತ್ತಮ ಬಾಲನಟ ರಾಷ್ಟ್ರಪ್ರಶಸ್ತಿ ಪಡೆದರು ಶಾಮಿಲಿ. ಶಾಮಿಲಿ ಬೆಳೆಯುತ್ತಿದ್ದಂತೆ ಅವರು ಸಿನಿಮಾಗಳಿಂದ ದೂರವಾಗಿ ವಿದ್ಯಾಭ್ಯಾಸದತ್ತ ಗಮನ ಹರಿಸಿದರು. ಉನ್ನತ ಶಿಕ್ಷಣಕ್ಕಾಗಿ ಅಮೆರಿಕ ತೆರಳಿದ ಅವರು ಕೆಲವು ವರ್ಷಗಳ ಕಾಲ ಅಲ್ಲಿ ನೆಲೆಸಿ ನಂತರ ಭಾರತಕ್ಕೆ ವಾಪಸಾದರು.

Advertisement

2009 ರಲ್ಲಿ ಸಿದ್ದಾರ್ಥ್ ಜೊತೆ ‘ಓಯ್’ ಎಂಬ ಚಿತ್ರದಲ್ಲಿ ಶಾಮಿಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದರು. ಆದರೆ ಈ ಚಿತ್ರ ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲ. ನಂತರ ಮಲಯಾಳಂನ ‘ವಲ್ಯಮ್ ತೆಟ್ಟಿ ಪುಲ್ಲಿಯುಂ ತೆಟ್ಟಿ’, ತಮಿಳಿನ ‘ವೀರ ಶಿವಾಜಿ’ ಹಾಗೂ ತೆಲುಗಿನಲ್ಲಿ ‘ಅಮ್ಮಮ್ಮಗಾರಿಲ್ಲು’ ಎಂಬ ಚಿತ್ರದಲ್ಲಿ ಶಾಮಿಲಿ ನಟಿಸಿದರು. ಆದರೆ ಬಾಲನಟಿಯಾಗಿ ಶಾಮಿಲಿಗೆ ಒಲಿದಿದ್ದ ಯಶಸ್ಸು ಪೂರ್ಣ ಪ್ರಮಾಣದ ನಾಯಕಿಯಾಗಿ ಒಲಿಯಲಿಲ್ಲ. ಸದ್ಯಕ್ಕೆ ಶಾಮಿಲಿ ಚೆನ್ನೈನಲ್ಲಿ ತಂದೆ ತಾಯಿಯೊಂದಿಗೆ ವಾಸವಿದ್ದಾರೆ. ಆದರೆ ಈಗ ಅವರು ಪೇಂಟಿಂಗ್ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಜೊತೆಗೆ ಆಗ್ಗಾಗ್ಗೆ ಫೋಟೋಶೂಟ್ ಮಾಡಿಸಿ ಇನ್ಸ್ಟಾಗ್ರಾಮ್​​ನಲ್ಲಿ ಅಪ್​​ಲೋಡ್ ಮಾಡುತ್ತಿರುತ್ತಾರೆ. ಪೇಂಟಿಂಗ್ ತರಬೇತಿ ಪಡೆದಿರುವ ಶಾಮಿಲಿ ಕೆಲವೊಂದು ಪೇಂಟಿಂಗ್​ಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿಕೊಂಡಿದ್ದಾರೆ. ಶಾಮಿಲಿ ಪೇಂಟಿಂಗ್​​ಗೆ ನೆಟಿಜನ್ಸ್ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Advertisement

ಕನ್ನಡದಲ್ಲಿ ಮತ್ತೆ ಹಾಡಿತು ಕೋಗಿಲೆ, ಭೈರವಿ, ದಾಕ್ಷಾಯಣಿ, ಕಾದಂಬರಿ, ಶ್ವೇತಾಗ್ನಿ, ಪೊಲೀಸ್ ಲಾಕಪ್, ಶಾಂಭವಿ, ಮಕ್ಕಳ ಸಾಕ್ಷಿ, ಚಿನ್ನ ನೀ ನಗುತಿರು, ಕರುಳಿನ ಕುಡಿ, ಭುವನೇಶ್ವರಿ, ಹೂವು ಹಣ್ಣು, ಜಗದೀಶ್ವರಿ ಚಿತ್ರಗಳಲ್ಲಿ ಶಾಮಿಲಿ ನಟಿಸಿದ್ದಾರೆ.

Advertisement
Share this on...