ಬೇಬಿ ಸಿಂಧು ಈಗ ಶ್ರೀಮತಿ ಸಿಂಧು ರಾವ್​​​​​​​​​​​​​​​​​​​​​​​​​​​​​​..ಆಕೆಯ ಪತಿ, ಮಗು ಹೇಗಿದ್ದಾರೆ ಗೊತ್ತಾ..?

in ಮನರಂಜನೆ 401 views

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು, ಬಾಲನಟರಾಗಿ ಖ್ಯಾತಿ ಗಳಿಸಿದವರು ಈಗ ಎಲ್ಲೂ ಕಾಣಿಸಿಕೊಳ್ಳುವುದೇ ಇಲ್ಲ. ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಟಿವಿಯಲ್ಲಿ ಅವರ ಸಿನಿಮಾ ನೋಡಿದಾಗ ಇವರನ್ನು ಸಿನಿಮಾದಲ್ಲಿ ನೋಡಿ ಬಹಳ ದಿನಗಳಾಯ್ತಲ್ವಾ ಈಗ ಹೇಗಿರಬಹುದು ಎಂದು ಖಂಡಿತ ನಿಮಗೆ ಅನಿಸದೆ ಇರದು.ಈ ಫೋಟೋದಲ್ಲಿರುವ ನಟಿಯನ್ನು ಖಂಡಿತ ನೀವು ನೋಡಿರುತ್ತೀರ. ಆದರೆ ಈಕೆ ಹೆಸರು ಬಹುತೇಕ ಜನರಿಗೆ ತಿಳಿದಿಲ್ಲ. ಬಾಲನಟಿಯಾಗಿ ಸಿನಿಕರಿಯರ್ ಆರಂಭಿಸಿದ ಇವರ ಹೆಸರು ಸಿಂಧು ರಾವ್. ಸಿಂಧು ಬಾಲನಟಿಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್, ಅಂಬರೀಶ್, ರಮೇಶ್ ಅರವಿಂದ್, ಶಿವರಾಜ್​ಕುಮಾರ್ ಸೇರಿದಂತೆ ಅನೇಕ ನಟರೊಂದಿಗೆ ಸಿಂಧು ನಟಿಸಿದ್ದಾರೆ. ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ‘ವರ್ಷ’ ಚಿತ್ರದಲ್ಲಿ ಕೂಡಾ ಸಿಂಧು ನಟಿಸಿದ್ದಾರೆ. ಐವರು ತಂಗಿಯರಲ್ಲಿ ಸಿಂಧು ಕೊನೆಯ ತಂಗಿಯಾಗಿ ಕಾಣಿಸಿಕೊಂಡಿದ್ದರು.

Advertisement

 

Advertisement

Advertisement

ತಮ್ಮ ಮುದ್ದು ಮುಖ , ಕ್ಯೂಟ್ ಮಾತುಗಳಿಂದಲೇ ಸಿಂಧು ಗಮನ ಸೆಳೆದಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಿಂಧು ನಟಿಸಿದ್ದಾರೆ. ಸಿಂಧು ಚಿಕ್ಕವಯಸ್ಸಿನಲ್ಲಿ ಹುಡುಗನ ಪಾತ್ರ ಕೂಡಾ ಮಾಡಿದ್ದರು. ಕೆಲವು ದಿನಗಳ ಕಾಲ ನಟನೆಯಿಂದ ದೂರವಿದ್ದ ಸಿಂಧು ನಂತರ ಕಿರುತೆರೆಯಲ್ಲಿ ಕೂಡಾ ನಟಿಸಿದ್ದರು. ಈಗ ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ‘ಗುಬ್ಬಿಮರಿ’ ಎಂಬ ಸಿನಿಮಾದಲ್ಲಿ ಸಿಂಧು ನಟಿಸುತ್ತಿದ್ದಾರೆ.

Advertisement

 

ಸಿಂಧು ಈಗ ಗೃಹಿಣಿ. ಅವರ ಪತಿ ಮಹೇಶ್ ರಾಮಕೃಷ್ಣಯ್ಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ ಒಂದು ಮುದ್ದಾದ ಗಂಡು ಮಗು ಕೂಡಾ ಇದೆ. ಒಳ್ಳೆಯ ಸ್ಕ್ರಿಪ್ಟ್ ನೋಡಿ ಸಿನಿಮಾಗಳಿಗೆ ಒಪ್ಪಿಗೆ ನೀಡುವ ಸಿಂಧು, ತಮ್ಮ ಹಾಗೂ ಮುದ್ದು ಮಗುವಿನೊಂದಿಗೆ ಬೆಂಗಳೂರಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

Advertisement
Share this on...