ವಿಡಿಯೋ ವೈರಲ್ : ಈ ಬಾಳೆಹಣ್ಣಿನ ಗಿಡ ಇಡೀ ಊರಿನವರ ಹೊಟ್ಟೆ ತುಂಬಿಸಬಲ್ಲದು !

in ಕನ್ನಡ ಮಾಹಿತಿ 39 views

ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಎರಡು ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. ಯಾಕೆ ಅಂತೀರಾ?. ನೀವು ಈ ವಿಡಿಯೋ ನೋಡಿ…ನಿಮಗೆ ಮೊದಲನೇ ವಿಡಿಯೋದಲ್ಲಿ ಒಂದು ಅದ್ಭುತ ಕಾಣಸಿಗುತ್ತದೆ. ಹೌದು, ಈ ವಿಡಿಯೋದಲ್ಲಿ ಇಷ್ಟುದ್ದ ಇರುವುದನ್ನು ನೋಡಿ ಇದೇನಿದು ಎಂದು ಬೆರಗಾಗಬೇಡಿ. ಇದು ಬಾಳೆ ಗಿಡ. ಈ ಬಾಳೆ ಗಿಡವು ಎಣಿಕೆಗೆ ಸಿಗದಷ್ಟು ಅಸಂಖ್ಯಾತ ಬಾಳೆಹಣ್ಣುಗಳನ್ನು ನೀಡಿದ್ದು, ಈ ಹಣ್ಣುಗಳನ್ನು ಈ ಹಳ್ಳಿಯಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರು ತಿನ್ನಬಹುದೇನೋ. ನಾವ್ಯಾಕೆ ಹೀಗೆ ಹೇಳುತ್ತಿದ್ದೇವೆ ಎಂಬುದು ಈ ವಿಡಿಯೋ ನೋಡಿದರೆ ನಿಮಗೆ ಸ್ಪಷ್ಟವಾಗಿ ಕಂಡುಬರುತ್ತದೆ. ಈ ಬಾಳೆ ಗಿಡದಲ್ಲಿ ಹೂವುಗಳು ನಿರಂತರವಾಗಿ ಅರಳುತ್ತಿರುವಂತೆ. ಇದರಿಂದಾಗಿ ಬಾಳೆ ಹಣ್ಣುಗಳ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ.

Advertisement

 

Advertisement

Advertisement

ಬಾಳೆಹಣ್ಣುಗಳ ಹೆಚ್ಚಳದಿಂದ ಇದು ನೆಲವನ್ನು ಮುಟ್ಟುವ ಪರಿಸ್ಥಿತಿ ಉದ್ಭವಿಸಿದ್ದು, ಇದನ್ನು ನೋಡಿದ ಮನೆಯವರು 2-3 ಅಡಿ ಭೂಮಿ ಅಗೆದಿದ್ದಾರೆ. ಇದರಿಂದ ಅದು ಮತ್ತಷ್ಟು ಬೆಳೆಯುತ್ತದೆಯಂತೆ. ಬಾಳೆ ಹೂವನ್ನು ನೋಡಿದರೆ, ಅದರ ಹಣ್ಣು ಮತ್ತಷ್ಟು ಹೆಚ್ಚಾಗಲಿದೆ ಎಂದು ತೋರುತ್ತದೆ. ಒಟ್ಟಿನಲ್ಲಿ ಪ್ರಕೃತಿಯ ಈ ಅದ್ಭುತವನ್ನು ನೋಡಲು ಜನರ ಗುಂಪು ತಂಡೋಪತಂಡವಾಗಿ ಹರಿದುಬರುತ್ತಿದೆ. ಇದೇ ರೀತಿಯ ಮತ್ತೊಂದು ಅದ್ಭುತವಾದ ವಿಡಿಯೋ ನೆಟ್ಟಿಗರಿಂದ ಪ್ರಶಂಸೆ ಗಳಿಸಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮನುಷ್ಯರಂತೆ ಪ್ರಾಣಿಗಳು ಬಿಸಿಲಿನ ಸಮಯದಲ್ಲಿ ತಂಪಾದ ವಾತವರಣ ಬಯಸುತ್ತವೆ.

Advertisement

ನಾವಾದರೆ ಮನೆಯಲ್ಲಿ ಏರ್ ಕೂಲರ್’ಗಳನ್ನು ಹೊಂದಿದ್ದೇವೆ. ಸೆಕೆಯಾದರೆ ದಿನಕ್ಕೆ ಎರಡು ಅಥವಾ ಮೂರು ಬಾರಿ ಸ್ನಾನ ಮಾಡುತ್ತೇವೆ. ಆದರೆ ಆನೆಗಳು ಏನು ಮಾಡುತ್ತವೆ. ಈಗ್ಯಾಕೆ ಆ ವಿಷಯ ಅಂತೀರಾ, ನಾವು ಮೇಲೆ ಹೇಳಿದಂತೆ ವಿಡಿಯೋ ವೈರಲ್ ಆಗಿರುವುದು ಇದೇ ಆನೆಯ ಬಗ್ಗೆ. ಆನೆ ಸ್ನಾನ ಮಾಡುವ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದ ನಂತರ ನಿಮಗೇ ಬಿಸಿಲಿನ ಝಳದಿಂದ ನಿರಾಳವಾದಂತಾಗುತ್ತದೆ.

 

ಈ ವಿಡಿಯೋವನ್ನು ಸುಶಾಂತ ನಂದ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಆನೆಗಳಿಗೆ ಬೇಸಿಗೆಯಲ್ಲಿ ತಮ್ಮನ್ನು ಹೇಗೆ ತಂಪಾಗಿರಿಸಿಕೊಳ್ಳಬೇಕೆಂದು ತಿಳಿದಿದೆ. ಈ ವಿಡಿಯೊದಲ್ಲಿ, ಆನೆ ನಿಜವಾಗಿ ನೀರಿಗೆ ಇಳಿದಿದೆ. ಹಾಗೆಯೇ ಕ್ಯಾಮೆರಾ ನೀರೊಳಗಿದೆ. ಆನೆಯ ಪಾದಗಳು ನೀರಿನ ಕೆಳಗೆ ಕಂಡುಬರುವುದನ್ನು ನೀವು ನೋಡಬಹುದು. ನೀರಿನ ಅಡಿಯಲ್ಲಿ ಅವುಗಳು ಹೇಗೆ ಸಂತೋಷವಾಗಿ ಆಡುತ್ತಿವೆ ಎಂಬುದು ಮನದಟ್ಟಾಗುತ್ತದೆ” ಎಂದು ಸುಶಾಂತ ನಂದ ಬರೆದುಕೊಂಡಿದ್ದಾರೆ. ಅಂದಹಾಗೆ ಈ ವಿಡಿಯೋ ಅಪ್ ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

Advertisement
Share this on...