ಒಂದು ಬಾಳೆಕಾಯಿ ಸೇವನೆಯಿಂದ ಅನೇಕ ಕಾಯಿಲೆಗಳು ದೂರ

in ಕನ್ನಡ ಆರೋಗ್ಯ 165 views

ನಮಗೆಲ್ಲಾ ಮಾಗಿದ ಹಳದಿ ಬಾಳೆಹಣ್ಣುಗಳನ್ನು ತಿಂದು ರೂಢಿ. ಇನ್ನು ಬಲಿಯದ ಹಸಿರು ಬಾಳೆಯೆಂದರೆ ಚಿಪ್ಸ್, ಪಲ್ಯ ಹೀಗೆ ಮುಂತಾದ ತಿನಿಸುಗಳಿಗೆ ಉಪಯೋಗಿಸುತ್ತೇವೆ. ಅಂದಹಾಗೆ ಬಾಳೆಹಣ್ಣಿನಲ್ಲಿ ಎಷ್ಟೆಲ್ಲಾ ಪೌಷ್ಠಿಕಾಂಶವಿದೆ ಎಂಬುದನ್ನು ನೀವು ತಿಳಿದಿರುತ್ತೀರಿ . ಹಾಗೆಯೇ ಬಾಳೆ ಕಾಯಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಬಾಳೆಕಾಯಿಯಲ್ಲಿ ನಿರೋಧಕ ಪಿಷ್ಟ ಮತ್ತು ನಾರಿನಂಶವಿದ್ದು, ಮಧುಮೇಹ ಅಥವಾ ಅಧಿಕ ತೂಕ ಹೊಂದಿರುವವರು ಬಾಳೆ ಹಣ್ಣಿಗೆ ಪರ್ಯಾಯವಾಗಿ ಬಾಳೆ ಕಾಯಿಯನ್ನು ಬಳಸಬಹುದು.

Advertisement

 

Advertisement

Advertisement

 

Advertisement

 

ಮಲಬದ್ಧತೆ ನಿವಾರಿಸುತ್ತದೆ
ಬಾಳೆಕಾಯಿಯಲ್ಲಿ ನಾರಿನಂಶ ಹೆಚ್ಚಿದ್ದು, ಮಲಬದ್ಧತೆ, ಐಬಿಎಸ್ ಮತ್ತು ಇತರ ಜಠರಗರುಳಿನ ರೋಗಗಳನ್ನು ನಿವಾರಿಸುತ್ತದೆ. ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಬಾಳೆ ಕಾಯಿ ಮಲಬದ್ಧತೆ ಮತ್ತು ಅತಿಸಾರ ಎರಡಕ್ಕೂ ಒಳ್ಳೆಯದು.

 

 

ಮಧುಮೇಹ ರೋಗಿಗಳಿಗೆ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಬಾಳೆ ಕಾಯಿ ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ಇರುವವರಿಗೆ ಮಾಗಿದ ಹಳದಿ ಬಾಳೆಹಣ್ಣಿಗಿಂತ ಬಲಿಯದ ಹಸಿರು ಬಾಳೆ ಕಾಯಿಯನ್ನು ತಿನ್ನಲು ಸೂಚಿಸಲಾಗುತ್ತದೆ.

 

 

ಹಸಿವು ಕಡಿಮೆ ಮಾಡುತ್ತದೆ
ಬಾಳೆ ಕಾಯಿಯಲ್ಲಿ ಫೈಬರ್ ಮತ್ತು ನಿರೋಧಕ ಪಿಷ್ಟ ಹೆಚ್ಚಿದೆ. ಆದ್ದರಿಂದ ಹಸಿವನ್ನು ಕಡಿಮೆ ಮಾಡಲು ಬಾಳೆಕಾಯಿಯನ್ನು ತಿನ್ನಲು ಹೇಳಲಾಗುತ್ತದೆ.

 

 

ರಕ್ತದೊತ್ತಡ ಕಡಿಮೆ ಮಾಡುತ್ತದೆ
ಬಾಳೆಕಾಯಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ಇರುವವರಿಗೆ ಇವು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ದೇಹದಲ್ಲಿನ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

 

ಅಡ್ಡಪರಿಣಾಮ ಇದೆಯಾ?
ಬಾಳೆಕಾಯಿ ಸಾಮಾನ್ಯವಾಗಿ ಸೇವನೆಗೆ ಸುರಕ್ಷಿತವೆಂದು ಹೇಳಲಾಗುತ್ತದೆ. ಆದರೂ ಸೂಕ್ಷ್ಮ ಹೊಟ್ಟೆಯನ್ನು ಹೊಂದಿರುವವರಿಗೆ ಅಥವಾ ಅಲರ್ಜಿ ಇರುವ ವ್ಯಕ್ತಿಗಳಿಗೆ ಸ್ವಲ್ಪ ಅಸ್ವಸ್ಥತೆ ಉಂಟಾಗಬಹುದು. ಉದಾಹರಣೆಗೆ ಹೊಟ್ಟೆ ಉಬ್ಬುವುದು. ಆದ್ದರಿಂದ ಇದನ್ನು ಸರಿಯಾದ ರೀತಿಯಲ್ಲಿ ಸೇವಿಸುವುದರಿಂದ ಈ ಅಡ್ಡಪರಿಣಾಮಗಳ ಅಪಾಯವನ್ನು ಕಡಿಮೆ ಮಾಡಬಹುದು.

 

ಹೇಗೆ ಸೇವಿಸಬೇಕು? ಬಾಳೆ ಕಾಯಿ ಸಿಪ್ಪೆ ಸುಲಿಯಲು ಸ್ವಲ್ಪ ಕಷ್ಟವಾಗಬಹುದು ಅಷ್ಟೇ, ಆದರೆ ಇದರಲ್ಲಿ ಉತ್ತಮವಾದ ತಿಂಡಿಯನ್ನು ತಯಾರಿಸಬಹುದು. ಇದನ್ನು ಜ್ಯೂಸ್, ಮಿಲ್ಕ್ ಶೇಕ್ ಮಾಡಿಕೊಂಡು ಕುಡಿಯಬಹುದು ಅಥವಾ ಮೊಸರಿನಲ್ಲಿ ಹಾಕಿ ಸೇವಿಸಬಹುದು. ಕೆಲವರು ಪಾಸ್ತಾ ತಯಾರಿಸಲು ಸಹ ಬಾಳೆಕಾಯಿಯನ್ನು ಬಳಸುತ್ತಾರೆ. ಒಟ್ಟಿನಲ್ಲಿ ಮಾಗಿದ ಬಾಳೆಹಣ್ಣನ್ನು ತಿಂದು ಬೋರೆನಿಸಿದಾಗ ನೀವು ಈ ಬಾಳೆಕಾಯಿಯನ್ನು ಟ್ರೈ ಮಾಡಬಹುದು

Advertisement
Share this on...