ಈ ಬಾಂಗ್ಲಾದೇಶ ಕ್ರಿಕೇಟಿಗನ ಹೆಂಡತಿ ಮುಂದೆ ಯಾವ ಐಶ್ವರ್ಯನೂ ಇಲ್ಲ ಯಾವ ಕರೀನನೂ ಇಲ್ಲ ?

in ಕನ್ನಡ ಮಾಹಿತಿ/ಕ್ರೀಡೆ 48 views

ಇತ್ತೀಚೆಗೆ ಬಾಂಗ್ಲಾದೇಶದ ಕ್ರಿಕೇಟ್ ತಂಡ ಬಲಿಷ್ಠವಾಗಿದ್ದು,ಯಾವ ತಂಡ ಎದುರಾಳಿಯಾದರು ಎದೆಗುಂದದೆ ಸೆಣಸಾಡುತ್ತಾರೆ. ಒಂದು ಕಾಲದಲ್ಲಿ ಬಾಂಗ್ಲಾದೇಶ ತಂಡ ಎಂದರೆ ಮಕ್ಕಳು ಎಂದು ಆಡಿಕೊ ಳ್ಳುತ್ತಿದ್ದವರು, ಇದೀಗ ಯಂಗ್ ಅಂಡ್ ಎನರ್ಜಿಟಿಕ್ ಹುಲಿಗಳು ಎಂದು ಶ್ಲಾಘಿಸುತ್ತಿದ್ದಾರೆ. ತಂಡ ಇಷ್ಟೊಂದು ಬಲಿಷ್ಠವಾಗಲು ಭಾರತದ ಮಾಜಿ ಕ್ರಿಕೇಟಿಗ ಸುನೀಲ್ ಜೋಷಿ ಅವರು ಬಾಂಗ್ಲಾದೇಶ ತಂಡ ಕೋಚ್ ಆಗಿರುವುದರಿಂದ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಬಾಂಗ್ಲಾದೇಶದ ಕ್ರಿಕೆಟಿಗರು ಎಂದಕೂಡಲೇ ಕೆಲವೇ ಕೆಲವು ಹೆಸರುಗಳು ಮಾತ್ರ ನಮಗೆಲ್ಲರಿಗು ನೆನಪಿಗೆ ಬರುತ್ತವೆ. ಅದರಲ್ಲಿ ಪ್ರತಿಯೊಬ್ಬರೂ ನೆನಪಿಸಿಕೊಳ್ಳುವಂತಹ ಹೆಸರೇ ಶಕೀಬ್ ಅಲ್ ಹಸನ್ . ಶಕೀಬ್ ಬಾಂಗ್ಲಾದೇಶದ ಅತ್ಯುತ್ತಮ ಆಲ್‌ರೌಂಡರ್ ಆಟಗಾರ. ಬಾಂಗ್ಲಾದೇಶದ ಕೆಲವೇ ಅನುಭವಿ ಆಟಗಾರರಲ್ಲಿ ಇವರು ಪ್ರಮುಖರು. ಶಕೀಬ್ ಅವರ ಹೆಂಡತಿಯ ಸೌಂದರ್ಯದ ಬಗ್ಗೆ ಆಸಕ್ತಿದಾಯಕ ಚರ್ಚೆಗಳಿವೆ, ಏಕೆಂದರೆ ಅವರು ಕಾಣಲು ಅಷ್ಟೊಂದು ಸುಂದರವಾಗಿದ್ದಾರೆ.

Advertisement

Advertisement

ಬಾಂಗ್ಲಾದೇಶ ತಂಡದ ಹೆಮ್ಮೆಯ ಆಟಗಾರ ಶಕೀಬ್ ಅಲ್ ಹಾಸನ್ ಅವರ ಮಡದಿಯ ಹೆಸರು ಉಮ್ಮಿ ಅಹ್ಮದ್ ಶಿಶಿರ್ ಎಂದು. ಬಾಂಗ್ಲಾದೇಶ ಮೂಲದವರಾದ ಇವರು, ಅಮೇರಿಕಾದ ನಿವಾಸಿಯಾಗಿದ್ದಾರೆ. ಶಿಶಿರ್ ಅವರು ಹತ್ತು ವರುಷದವರಾಗಿದ್ದಾಗ ಆಕೆಯನ್ನು, ಅವರ ತಂದೆ-ತಾಯಿಯರು ಕರೆದುಕೊಂಡು ಹೋಗಿ ಅಮೇರಿಕಾದಲ್ಲಿ ನೆಲೆಯಾದರು. ಇನ್ನು ಶಿಶಿರ್ ಅವರು ಯುನೈಟೆಡ್ ಸ್ಟೇಟ್ಸ್ನಲ್ಲಿ ಶಿಕ್ಷಣ ಪಡೆದಿದ್ದು, ವೃತ್ತಿಯಲ್ಲಿ ಎಂಜಿನಿಯರ್ ಮತ್ತು ಮಾಡೆಲಿಂಗ್ ಮಾಡುತ್ತಾರೆ.ಇನ್ನು ಕೆಲವರು ಹೇಳುವ ಪ್ರಕಾರ ಕ್ರಿಕೆಟ್ ಆಟಗಾರರಿಗೆ ಅಂತಹ ಸುಂದರವಾದ ಹೆಂಡತಿ ಸಿಗುವುದಿಲ್ಲ, ಇದರ ಹಿಂದೆ ಕೆಲವು ಆಸಕ್ತಿದಾಯಕ ಘಟನೆಗಳು ನಡೆದಿರುತ್ತವೆ ಎಂಬ ಮಾತಿದೆ.

Advertisement

 

Advertisement

ಆದರೆ ಅದೇ ರೀತಿಯಾ ಆಸಕ್ತಿದಾಯಕ ವಿಷಯವೊಂದು ಶಕೀಬ್‌ ಜೀವನದಲ್ಲಿ ಸಂಭವಿಸಿದೆ. ಶಿಶಿರ್ ಅವರು ತಮ್ಮ ರಜೆ ದಿನವನ್ನು ಕಳೆಯಲು ಇಂಗ್ಲೆಂಡ್‌ಗೆ ಹೋಗಿರುತ್ತಾರೆ. ಅದೇ ಸಮಯದಲ್ಲಿ ಕೌಂಟಿ ಕ್ರಿಕೆಟ್ ಆಡುವ ಸಲುವಾಗಿ ಶಕೀಬ್ ಅವರು ಕೂಡ ಇಂಗ್ಲೆಂಡ್ ಗೆ ತೆರಳಿರುತ್ತಾರೆ. ಅಂತೆಯೇ ಇಬ್ಬರೂ ಕೂಡ ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿರುತ್ತಾರೆ. ದಿನಕಳೆದಂತೆ ಅಲ್ಲಿಯೇ ಒಬ್ಬರಿಗೊಬ್ಬರು ಪರಿಚಯವಾಗುತ್ತಾರೆ. ಶಕೀಬ್ ಆ ಸಮಯದಲ್ಲಿಯೂ ಬಾಂಗ್ಲಾದೇಶ ಕ್ರಿಕೇಟದ ಉತ್ತಮ ಆಟಗಾರರಾಗಿದ್ದು, ಎಲ್ಲರೂ ಅವರನ್ನು ಗುರುತಿಸುತ್ತಿದ್ದರು.

ಇವರಿಬ್ಬರ ಈ ಭೇಟಿಯು ಮೊದಲು ಸ್ನೇಹದಲ್ಲಿತ್ತು, ತದನಂತರ ಪ್ರೀತಿಯಾಗಿ ರೂಪಾಂತರವಾಯಿತು. ಶಕೀಬ್ ಮತ್ತು ಉಮ್ಮಿಯವರ ಜೀವನದಲ್ಲಿ ಪ್ರೀತಿಯ ಹೂ ಅರಳಿತು. ಒಬ್ಬರಿಗೊಬ್ಬರು ತುಂಬಾ ಇಷ್ಟ ಪಡುತ್ತಿದ್ದರಿಂದ ಅವರು ಮದುವೆಯಾಗಲು ನಿರ್ಧರಿಸಿದರು. ಅವರಿಬ್ಬರು ದಿನಾಂಕ 12-12-12 ರಂದು ವಿವಾಹ ವಾದರು. ಇಬ್ಬರು ಇನ್ನೂ ಪರಸ್ಪರ ನಿಷ್ಠೆಯಿಂದ ಇದ್ದಾರೆ. ಈಗ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.

Advertisement
Share this on...