ಬರಿಗಾಲಲ್ಲಿ ನಡೆಯುವುದರಿಂದ ಇದೆ ಹತ್ತಾರು ಲಾಭಗಳು

in ಕನ್ನಡ ಆರೋಗ್ಯ 190 views

ಹೊರಗೆ ಹೋಗುವಾಗ ನಾವೇನು ಮರೆತರು ಚಪ್ಪಲಿ ಧರಿಸಿ ಹೊರಡುವುದನ್ನು ಮಾತ್ರ ಮರೆಯುವುದಿಲ್ಲ. ಚಪ್ಪಲಿ ಧರಿಸುವುದು ಸಹ ಒಂದು ಪ್ರತಿಷ್ಠೆಯ ಸಂಕೇತವೂ ಆಗಿವೆ ಎನ್ನಿ. ಚಪ್ಪಲಿ ಧರಿಸದೆ ಹೋದರೆ ಎಲ್ಲರೂ ನಿಮ್ಮನೇ ನೋಡುತ್ತ ಇರುತ್ತಾರೆ. ಅಲ್ಲದೇ ಏಕೆ ಚಪ್ಪಲಿ ಹಾಕೊಂಡಿಲ್ಲ ಎಂದು ಅಹ ಕೇಳುತ್ತಾರೆ. ಆದರೆ ಬರಿಗಾಲಿನಲ್ಲಿ ನಡೆಯುವುದರಿಂದ ಆಗುವ ಪ್ರಯೋಜನ ಮಾತ್ರ ಅನೇಕ.

Advertisement

 

Advertisement

Advertisement

 

Advertisement

ಸಾಮಾನ್ಯವಾಗಿ ನಾವು ಪೂಜೆ, ಯೋಗಾಭ್ಯಾಸ, ಸಮರ ಕಲೆಗಳನ್ನು ಮಾಡುವಾಗ ಚಪ್ಪಲಿ ಧರಿಸುವುದಿಲ್ಲ. ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ನಾವು ಆರೋಗ್ಯವಂತರಾಗಿರಬೇಕೆಂದು ಹಾಗೆಯೇ ಪಾಸಿಟಿವ್ ಯೋಚನೆ ಬರುತ್ತದೆಂದು ಅಲ್ಲದೇ ಬುದ್ಧಿ ಚುರುಕಾಗಿ ಮಾನಸಿಕ ಸ್ಥಿಮಿತ ಹೆಚ್ಚುವ ಕಾರಣ ಚಪ್ಪಲಿ ಧರಿಸುವುದಿಲ್ಲ.

 

 

ಸರಿಯೆನಿಸಿದ ಚಪ್ಪಲಿ ಧರಿಸುವುದರಿಂದ ನಮ್ಮ ಪಾದದ ರಚನೆ, ಫ್ಲೆಕ್ಸಿಬಿಲಿಟಿ ಮತ್ತು ಸಾಮರ್ಥ್ಯ ಕಡಿಮೆಯಾಗುತ್ತದೆ. ಪಾದ ದುರ್ಬಲವಾದಾಗ ನಮ್ಮ ಭಂಗಿಗಳೂ ದುರ್ಬಲಗೊಳ್ಳುತ್ತದೆ.. ಇದು ಕತ್ತು, ಬೆನ್ನು, ಸೊಂಟ, ಮಂಡಿ ನೋವು ಬರುತ್ತದೆ.

 

 

ಸಾಮಾನ್ಯವಾಗಿ ನಾವು ಗಮನಿಸಿದಾಗ ಚಪ್ಪಲಿ ಇಲ್ಲದೆ ನಡೆಯುವಾಗ ಪ್ರತಿ ಹೆಜ್ಜೆ ಮತ್ತು ಒಟ್ಟಾರೆ ನಡೆ ಬುದ್ಧಿವಂತಿಕೆಯಿಂದ ಇರುತ್ತದೆ‌. ಬರಿಗಾಲಲ್ಲಿ ನಡೆದರೆ ರಕ್ತ ಸಂಚಾರ ತೀವ್ರಗೊಳ್ಳಲಾರಂಭಿಸುತ್ತದೆ. ಇದರ ಪರಿಣಾಮವಾಗಿ ಇಡೀ ದೇಹದ ನರನಾಡಿಗಳಲ್ಲಿ ಹೊಸ ಚೈತನ್ಯ ತುಂಬಿಕೊಂಡು ಹೃದಯ ಸಂಬಂಧಿ ರೋಗ ಬರುವ ಪ್ರಮಾಣ ಕುಂಠಿತವಾಗುತ್ತದೆ‌. ಅಲ್ಲದೇ ನಮ್ಮ ಮೂಳೆ ಮತ್ತು ಮಾಂಸಖಂಡಗಳ ಶಕ್ತಿ ವೃದ್ಧಿಯಾಗುತ್ತದೆ. ಎಳೆಬಿಸಿಲಿನಲ್ಲಿ ಬರಿಗಾಲಲ್ಲಿ ನಡೆದರೆ ಮೂಳೆಗಳ ಕ್ಯಾಲ್ಸಿಯಂ ಪ್ರಮಾಣ ಹೆಚ್ಚುತ್ತದೆ. ಹಾಗಾದರೆ ಇನ್ನೇಕೆ ತಡ ಬರಿಗಾಲಲ್ಲಿ ನಡೆದು ಆರೋಗ್ಯ ವೃದ್ಧಿಸೋಣ.

Advertisement
Share this on...