ವಿಜಯ್​​​​​​​ ಮುಂಬರುವ ಚಿತ್ರಕ್ಕೆ ಡಾ. ವಿಷ್ಣುವರ್ಧನ್​​​ರ ಆ ಸಿನಿಮಾ ಸ್ಫೂರ್ತಿನಾ…ಟ್ರೇಲರ್​ ನೋಡಿದವರು ಹೇಳಿದ್ದೇನು…?

in ಸಿನಿಮಾ 77 views

ಒಂದು ಭಾಷೆಯ ಸಿನಿಮಾಗಳು ಮತ್ತೊಂದು ಭಾಷೆಗೆ ರೀಮೇಕ್ ಆಗುವುದು ಸಾಮಾನ್ಯ. ಸಿನಿಮಾ ಚಿತ್ರೀಕರಣದ ಸಮಯದಲ್ಲೇ ಚಿತ್ರತಂಡ, ಇದು ರೀಮೇಕ್ ಸಿನಿಮಾ ಎಂದು ಘೋಷಿಸುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ರೀಮೇಕ್ ವಿಚಾರವನ್ನು ರಿವೀಲ್ ಮಾಡುವುದಿಲ್ಲ. ಆದರೆ ಇನ್ನೂ ಕೆಲವೊಂದು ಸಿನಿಮಾಗಳು ಬೇರೆ ಭಾಷೆಯ ಸಿನಿಮಾದಿಂದ ಸ್ಫೂರ್ತಿ ಪಡೆದ ಸಿನಿಮಾಗಳಾಗಿರುತ್ತವೆ. ಈ ಗುಟ್ಟನ್ನು ಚಿತ್ರತಂಡ ಎಲ್ಲೂ ಬಿಟ್ಟುಕೊಡುವುದಿಲ್ಲ. ಆದರೆ ಟ್ರೇಲರ್ ಬಿಡುಗಡೆ ವೇಳೆ ಅಭಿಮಾನಿಗಳಿಗೆ ಸಿನಿಮಾ ಕಥೆ ಬಗ್ಗೆ ಸ್ವಲ್ಪವಾದರೂ ಕ್ಲಾರಿಟಿ ದೊರೆಯುತ್ತದೆ. ತಮಿಳು ನಟ ದಳಪತಿ ವಿಜಯ್ ಮುಂಬರುವ ಸಿನಿಮಾ ‘ಬೀಸ್ಟ್’ ವಿಚಾರದಲ್ಲಿ ಕೂಡಾ ಆಗಿರುವುದು ಇದೇ. ಬೀಸ್ಟ್ ಸಿನಿಮಾ ಏಪ್ರಿಲ್ 13 ರಂದು ತೆರೆ ಕಾಣುತ್ತಿದೆ. 2 ದಿನಗಳ ಹಿಂದೆ ‘ಬೀಸ್ಟ್’​ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿತ್ತು. ಇದನ್ನು ನೋಡುತ್ತಿದ್ದಂತೆ ಸಿನಿಪ್ರಿಯರಿಗೆ ಅನ್ನಿಸಿದ್ದು, ಅರೆ, ಇದು ಡಾ. ವಿಷ್ಣುವರ್ಧನ್ ಅವರ ಆ ಸಿನಿಮಾ ದೃಶ್ಯಗಳಂತೆ ಇದೆ ಅಲ್ವಾ…?

Advertisement

ಬೀಸ್ಟ್ ಟ್ರೇಲರ್ ನೋಡಿದವರು ಅದನ್ನು ಹೋಲಿಸಿದ್ದು 1993 ರಲ್ಲಿ ಬಿಡುಗಡೆಯಾದ, ಸೂಪರ್ ಹಿಟ್ ‘ನಿಷ್ಕರ್ಷ’ ಚಿತ್ರಕ್ಕೆ. ಟ್ರೇಲರ್​​​​ನಲ್ಲಿರುವ ದೃಶ್ಯಗಳನ್ನು ನೋಡಿದರೆ ಇದು ‘ನಿಷ್ಕರ್ಷ’ ಚಿತ್ರದಿಂದ ಸ್ಫೂರ್ತಿ ಪಡೆದು ಮಾಡಿರುವ ಸಿನಿಮಾ ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ‘ನಿಷ್ಕರ್ಷ’ ಚಿತ್ರದಲ್ಲಿ ಬ್ಯಾಂಕ್ ದೋಚಲು ಬರುವ ದರೋಡೆಕೋರರು ಅಲ್ಲಿರುವವರನ್ನು ಒತ್ತೆಯಾಳಾಗಿ ಇರಿಸಿಕೊಳ್ಳುತ್ತಾರೆ. ಎಲ್ಲರನ್ನೂ ಕಾಪಾಡಲು ಆ್ಯಂಟಿ ಟೆರರಿಸ್ಟ್​ ಕಮಾಂಡೋ ಅಜಯ್​​ (ವಿಷ್ಣುವರ್ಧನ್) ಎಂಟ್ರಿ ಕೊಡುತ್ತಾರೆ. ‘ಬೀಸ್ಟ್’​ ಟ್ರೇಲರ್​​​​​ನಲ್ಲಿ ಮಾಲ್​​​​ವೊಂದನ್ನು ತಮ್ಮ ವಶಕ್ಕೆ ಪಡೆಯುವ ಉಗ್ರರನ್ನು ಸದೆಬಡಿಯಲು ವೀರ ರಾಘವನ್​​ (ವಿಜಯ್​​) ಬರುತ್ತಾರೆ.

Advertisement

Advertisement

ಬೀಸ್ಟ್​ ಚಿತ್ರತಂಡ ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಅರೆಬಿಕ್ ಕುತು ಹಾಗೂ ಇತ್ತೀಚೆಗೆ ರಿಲೀಸ್ ಮಾಡಿದ್ದ ಹಾಡುಗಳು ಸಿನಿಪ್ರಿಯರಿಗೆ ಬಹಳ ಇಷ್ಟವಾಗಿತ್ತು. ಆದರೆ ಹಾಡುಗಳಂತೆ ಟ್ರೇಲರ್ ಮಾತ್ರ ಅಂದುಕೊಂಡಂತೆ ಅಭಿಮಾನಿಗಳಿಗೆ ರೀಚ್ ಆಗಿಲ್ಲ. 29 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ನಿಷ್ಕರ್ಷ’ ಚಿತ್ರವನ್ನು ಬಿ.ಸಿ. ಪಾಟೀಲ್ ನಿರ್ಮಿಸಿ, ಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದರು. ಚಿತ್ರದಲ್ಲಿ ಡಾ. ವಿಷ್ಣುವರ್ಧನ್, ಅನಂತ್ ನಾಗ್​, ಬಿ.ಸಿ. ಪಾಟೀಲ್, ಸುಮನ್ ನಗರ್​​​​ಕರ್​​​​, ಅವಿನಾಶ್, ರಮೇಶ್ ಭಟ್ ಹಾಗೂ ಇನ್ನಿತರರು ನಟಿಸಿದ್ದರು. 2 ವರ್ಷಗಳ ಹಿಂದೆ ವಿಷ್ಣುವರ್ಧನ್​ ಜನ್ಮದಿನದ ವಿಶೇಷವಾಗಿ ಈ ಚಿತ್ರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ರೀ ರಿಲೀಸ್ ಮಾಡಲಾಗಿತ್ತು.

Advertisement

‘ಬೀಸ್ಟ್​’ ಚಿತ್ರವನ್ನು ಸನ್​ ಪಿಕ್ಚರ್ಸ್ ಸಂಸ್ಥೆ ನಿರ್ಮಿಸಿದ್ದು ನೆಲ್ಸನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ವಿಜಯ್ ಜೊತೆಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಬಿಡುಗಡೆಯಾದಾಗ ಸಿನಿಮಾದ ಕಥೆ ಬಗ್ಗೆ ಸಂಪೂರ್ಣ ಚಿತ್ರಣ ದೊರೆಯಲಿದೆ.
-ರಕ್ಷಿತ ಕೆ.ಆರ್​​​.ಎಸ್

Advertisement
Share this on...