ನಿಮಗಿದು ಗೊತ್ತೇ…? ಚರ್ಮದ ಸೌಂದರ್ಯಕ್ಕೆ ಅಪಾಯಕಾರಿಯಾಗಿವೆ ನಾವು ಸೇವಿಸುವ ಈ ಆಹಾರಗಳು….

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 226 views

ಸೌಂದರ್ಯ ಹಾಗೂ ಚರ್ಮ ಒಂದಕ್ಕೊಂದು ಪೂರಕ. ಸೌಂದರ್ಯ ಎಂಬುದು ಚರ್ಮದಲ್ಲಿ ಅಡಗಿದೆ ಎಂಬುದು ಅಕ್ಷರಶ: ಸತ್ಯ. ಡ್ರೈ ಫ್ರೂಟ್ಸ್, ವಿವಿಧ ರೀತಿಯ ಹಣ್ಣು, ತರಕಾರಿ, ಆಹಾರ ಪದ್ಧತಿ ಹೇಗೆ ನಮ್ಮ ದೈಹಿಕ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡಲು, ಆರೋಗ್ಯವನ್ನು ಹೆಚ್ಚಿಸಲು ಸಹಾಯಕಾರಿಯಾಗುತ್ತೋ ಹಾಗೆಯೇ ನಾವು ಸೇವಿಸುವ ಹಲವು ಆಹಾರಗಳು ನಮ್ಮ ಅನಾರೋಗ್ಯಕ್ಕೆ ಹಾಗೂ ಚರ್ಮದ ಸೌಂದರ್ಯವನ್ನು ಹಾಳುಮಾಡಬಲ್ಲದು. ಚರ್ಮಕ್ಕೆ ಮಾರಕವಾದ, ಚರ್ಮದ ಕಾಂತಿಯನ್ನು ಕಡಿಮೆಮಾಡುವ ಕೆಲ ಅಪಾಯಕಾರಿ ಆಹಾರದ ಬಗ್ಗೆ ಮಾಹಿತಿ ಇಲ್ಲಿದೆ. ಚರ್ಮದ ಆರೈಕೆಯಲ್ಲಿ ಅತ್ಯಂತ ಪ್ರಮುಖ ಪೋಷಕಾಂಶಗಳೆಂದರೆ ವಿಟಮಿನ್ ಇ ಮತ್ತು ವಿಟಮಿನ್ ಡಿ. ಆಹಾರ ಸೇವನೆ ಮೂಲಕ ದೇಹವನ್ನು ಪೋಷಿಸುವ ವಿಧಾನ ಕೂಡ ನಮ್ಮ ಚರ್ಮದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ದೈಹಿಕವಾದ ಅನಾರೋಗ್ಯ ಸ್ಕಿನ್ ಸಮಸ್ಯೆಗೆ ಕಾರಣವಾಗುತ್ತದೆ. ನಾವು ಸೇವಿಸುವ ಹಲವು ಆಹಾರಗಳು ನಮ್ಮ ಚರ್ಮದ ಕಾಂತಿ ಕಳೆದುಕೊಳ್ಳುವಂತೆ ಮಾಡುತ್ತದೆ.

Advertisement

Advertisement

 

Advertisement

ಇದರಿಂದಾಗಿ ಕೂದಲು ಉದುರುವ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಮಹಿಳೆಯರಲ್ಲಿನ ಪಿಸಿಒಡಿ ಸಮಸ್ಯೆಗೂ ರಹದಾರಿಯಾಗುತ್ತದೆ. ಅಂತಹ ಅಪಾಯಕಾರಿ ಕೆಲ ಆಹಾರಗಳೆಂದರೆ ಸಕ್ಕರೆ, ಬೇಕರಿ ಫುಡ್, ಐಸ್ ಕ್ರೀಂ, ರಿಫೈಂಡ್ ಗ್ರೇನ್ಸ್, ರಿಫೈಂಡ್ ಆಯಿಲ್ ಮೊದಲಾದವು. ನಾವು ಅತಿಯಾಗಿ ಸೇವಿಸುವ ಸಕ್ಕರೆ ನಮ್ಮ ಚರ್ಮಕ್ಕೆ ಡೇಂಜರಸ್. ಸಕ್ಕರೆ ಒಂದು ರೀತಿಯ ಬಿಳಿ ವಿಷವಿದ್ದಂತೆ. ಸಾಮಾನ್ಯವಾಗಿ ನಾವು ಸೇವಿಸುವ ಬಹುತೇಕ ಆಹಾರದಲ್ಲಿ ಸಕ್ಕರೆ ಇದ್ದೇ ಇರುತ್ತದೆ. ಇದು ನಮ್ಮ ಚರ್ಮ ಮಾತ್ರವಲ್ಲ ಆರೋಗ್ಯದ ಮೇಲೆ ಹಲವು ರೀತಿಯ ಅಡ್ಡ ಪರಿಣಾಮ ಬೀರುತ್ತದೆ. ಸಕ್ಕರೆಯ ಬದಲು ಆರ್ಗನಿಕ್ ಬೆಲ್ಲವನ್ನು ಸೇವಿಸುವುದು ಉತ್ತಮ ಎಂಬುದು ವೈದ್ಯರ ಸಲಹೆ ಕೂಡ ಹೌದು.

Advertisement

ಬೇಕರಿ ಫುಡ್ ಇದು ನಮ್ಮ ಚರ್ಮದ ಕಾಂತಿ ಕಡಿಮೆ ಮಾಡುತ್ತದೆ. ಇಂದು ಬೇಕರಿ ಫುಡ್ ತಿನ್ನದವರೇ ಇಲ್ಲ. ಹಲವರು ಇಂದು ಮನೆ ಅಡುಗೆಯನ್ನು ಬಿಟ್ಟು ಬೇಕರಿ ಫುಡ್ ಸೇವಿಸುವವರೇ ಹೆಚ್ಚು. ಬೇಕರಿ ಫುಡ್ ನಲ್ಲಿ ಮೈದಾ, ಡಾಲ್ಡಾ, ಸಕ್ಕರೆ ಹಾಗೂ ಕೆಲ ರಾಸಾಯನಿಕ ಮಿಶ್ರಣಗಳು ಇರುವುದರಿಂದ ರುಚಿ ಹೆಚ್ಚುವಂತೆ ಮಾಡಲಾಗುತ್ತದೆ. ಆದರೆ ಅತಿಯಾದ ಬೇಕರಿ ಫುಡ್ ತಿನ್ನುವುದು ಕೂಡ ಬೊಜ್ಜು ಹೆಚ್ಚಲು, ಚರ್ಮದಲ್ಲಿ ಮೊಡವೆಯಂತಹ ಸಮಸ್ಯೆ ಎದುರಾಗಲು, ಚರ್ಮದ ಕಾಂತಿ ನಿಸ್ತೇಜವಾಗಲು ಕಾರಣವಾಗುತ್ತದೆ. ಸೌಂದರ್ಯ ಪ್ರಜ್ನೆ ಇರುವವರು, ಬೇಕರಿ ಫುಡ್ ಅವಾಯ್ಡ್ ಮಾಡುವುದು ಒಳ್ಳೆಯದು.

ಫ್ರೈಯ್ಡ್ ಫುಡ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ಮುದುಕರವರೆಗೂ ಇಂದು ಫ್ರೈಡ್ ಫುಡ್ ಸೇವಿಸುವರೇ ಹೆಚ್ಚು. ದೇಹಕ್ಕೆ ಯಾವುದೇ ವ್ಯಾಯಾಮವಿಲ್ಲದೇ ಮನೆಯಲ್ಲಿಯೇ ಕುಳಿತು ಇಂದು ಫ್ರೈಡ್ ಆಹಾರಗಳ ಮೊರೆಹೋಗುವವರೇ ಹೆಚ್ಚು. ಇದರಿಂದ ಬೊಜ್ಜು ಹೆಚ್ಚುತ್ತದೆ. ಫ್ಯಾಟಿ ಲಿವರ್ ಬದಲಾಗುತ್ತಿದೆ. ಇಂದು ಬಹುತೇಕ ಹೆಣ್ಣುಮಕ್ಕಳು ಪಿಸಿಒಡಿ ಸಮಸ್ಯೆ, ಇರ್ರೆಗ್ಯುಲರ್ ಪೀರಿಯಡ್ಸ್, ಹೇರ್ ಫಾಲ್, ಚರ್ಮದ ಮೇಲೆ ಗುಳ್ಳೆಗಳು, ಮುಖದಲ್ಲಿ ಮೊಡವೆ ಇಂತಹ ಹಲವು ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಕಾಣಬಹುದು. ಇಂತಹ ಸಮಸ್ಯೆ ಇರುವವರು ಫ್ರೈಡ್ ಫುಡ್, ಜಂಕ್ ಫುಡ್ ಗಳ ಸೇವನೆ ಕಡಿಮೆ ಮಾಡುವುದು ಒಳಿತು.

ರಿಫೈಂಡ್ ಗ್ರೇನ್ಸ್ ಹಾಗೂ ರಿಫೈಂಡ್ ಆಯಿಲ್ಸ್. ಇವುಗಳು ಇಲ್ಲದಿದ್ದರೆ ಊಹಿಸಿಕೊಳ್ಳುವುದು ಅಸಾಧ್ಯ ಎನ್ನುವಂತಾಗಿದೆ. ಅತಿಯಾಗಿ ಪಾಲೀಶ್ ಮಾಡಿರುವ ವೈಟ್ ರೈಸ್, ಮೈದಾ ಇವುಗಳು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಕ್ರಮೇಣ ಚರ್ಮದ ಸಮಸ್ಯೆಗೂ ಕಾರಣವಾಗುತ್ತದೆ. ರಿಫೈಂಡ್ ಆಯಿಲ್ ಕೊಲೆಸ್ಟ್ರಾಲ್ ಸಮಸ್ಯೆ ಕಡಿಮೆ ಮಾಡುತ್ತದೆ ಎಂಬ ಹಲವು ರೀತಿಯ ತಪ್ಪು ಕಲ್ಪನೆಯಲ್ಲಿದ್ದೆವೆ. ಆದರೆ ರಿಫೈಂನ್ಡ್ ಆಯಿಲ್ ಆರೋಗ್ಯಕ್ಕೆ ಬಹಳ ಅಪಾಯಕಾರಿ. ಇದು ಆಕ್ಸಿಡೈಸ್ಡ್ ಎಲ್ ಡಿಯನ್ನು ಹೆಚ್ಚಿಸುತ್ತದೆ. ಇದರಿಂದ ಹಾರ್ಟ್ ಅಟ್ಯಾಕ್ ನಂತಹ ಸಮಸ್ಯೆ ಹೆಚ್ಚುತದೆ ಮಾತ್ರವಲ್ಲ, ಚರ್ಮದ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ. ಇನ್ನು ಎಲ್ಲರಿಗೂ ಇಷ್ಟವಾಗುವ ಐಸ್ ಕ್ರೀಮ್ ಕೂಡ ಚರ್ಮದ ಆರೋಗ್ಯವನ್ನು ಹಾಳು ಮಾಡಬಲ್ಲದು. ಐಸ್ ಕ್ರೀಮ್ ನಲ್ಲಿರುವ ಸಕ್ಕರೆ ಅಂಶ ಅಪಾಯಕಾರಿಯಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಆಹಾರಗಳು ನಮ್ಮ ದೇಹದ ಹಾಗೂ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮಾತ್ರವಲ್ಲ, ಪಿಸಿಒಡಿ, ಹೃದಯ ರೋಗ, ಮಧುಮೇಹ, ಥೈರಾಯ್ಡ್ ನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ಇರುವವರು, ಸೌಂದರ್ಯ ಪ್ರಜ್ನೆ ಇರುವವರು ಇಂತಹ ಆರೋಗ್ಯ ಸೇವನೆ ಕಡಿಮೆ ಮಾಡುವುದು ಉತ್ತಮ.

Advertisement
Share this on...