ನೂರಾರು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಕೆಯಾಗುವ ಈ ಎಣ್ಣೆ ಈ ಸಮಸ್ಯೆಗೂ ಅತ್ಯುತ್ತಮ ಮದ್ದು !

in ಕನ್ನಡ ಆರೋಗ್ಯ 53 views

ಇಂದು ಅನಾರೋಗ್ಯಕರ ಜೀವನಶೈಲಿ, ಮಾಲಿನ್ಯ, ಒತ್ತಡ ಇತ್ಯಾದಿಗಳಿಂದಾಗಿ ಕಲೆ, ಮೊಡವೆ ಮುಕ್ತ ತ್ವಚೆ ಪಡೆಯುವುದು ಕನಸಿನ ಮಾತಾಗಿದೆ. ಆದರೆ ಕೆಲವು ಮನೆಮದ್ದುಗಳು ಮೊಡವೆಗಳನ್ನು ಹೋಗಲಾಡಿಸಿ, ಕಲೆ ತೆಗೆಯಲು ಸಹಾಯ ಮಾಡುತ್ತವೆ. ಹರಳೆಣ್ಣೆ ಸಹ ತ್ವಚೆ ಅಂದವಾಗಿಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ವಿಶ್ವದಾದ್ಯಂತ ನೂರಾರು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಈ ಹರಳಣ್ಣೆಯನ್ನು ಬಳಸಲಾಗುತ್ತದೆ. ರಿಕಿನೊಲಿಕ್ ಆಮ್ಲ, ವಿಟಮಿನ್ ಇ, ಒಮೆಗಾ 6 ಮತ್ತು 9 ಹಾಗೂ ಪ್ರೋಟೀನುಗಳು ಸಮೃದ್ಧವಾಗಿರುವುದರಿಂದ ಹರಳೆಣ್ಣೆ ಮೊಡವೆ ಮತ್ತು ಇತರ ಕಲೆಗಳನ್ನು ಸುಲಭವಾಗಿ ನಿವಾರಿಸಲು ಸಹಾಯ ಮಾಡುತ್ತದೆ. ಅಂದಹಾಗೆ ಹರಳೆಣ್ಣೆಯನ್ನು ಯಾವ ರೀತಿ ಉಪಯೋಗಿಸುವುದರಿಂದ ಮೊಡವೆಗಳನ್ನು ಹೋಗಲಾಡಿಸಬಹುದು? ನೋಡೋಣ ಬನ್ನಿ.

Advertisement

 

Advertisement

Advertisement

ಹರಳೆಣ್ಣೆ ಮಸಾಜ್
ಹರಳೆಣ್ಣೆಯಿಂದ ಚರ್ಮವನ್ನು ಮಸಾಜ್ ಮಾಡುವುದರಿಂದ ಮೊಡವೆಗಳನ್ನು ಹೋಗಲಾಡಿಸಬಹುದು.
ಮಸಾಜ್ ಮಾಡುವುದು ಹೇಗೆ?
ಕ್ಲೆನ್ಸರ್’ನಿಂದ ನಿಮ್ಮ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಮುಖವನ್ನು ಒಣಗಿಸಿ.
ಶುದ್ಧ ಸಾವಯವ ಹರಳೆಣ್ಣೆಯನ್ನು ಬೆಚ್ಚಗಾಗುವವರೆಗೆ ಬಿಸಿ ಮಾಡಿ.
ನಂತರ ಮೃದುವಾದ ಹತ್ತಿ ಚೆಂಡು ತೆಗೆದುಕೊಂಡು ಹರಳೆಣ್ಣೆಯಲ್ಲಿ ಅದ್ದಿ ಕಲೆ ಅಥವಾ ಮೊಡವೆಯಾಗಿರುವ ಜಾಗದಲ್ಲಿ ಹಚ್ಚಿ.
ಕನಿಷ್ಠ 10 ನಿಮಿಷಗಳ ಕಾಲ ವೃತ್ತಾಕಾರವಾಗಿ ಮಸಾಜ್ ಮಾಡಿ, ಒಂದು ಗಂಟೆ ಬಿಡಿ.
ಬೆಚ್ಚಗಿನ ನೀರಿನಲ್ಲಿ, ಕ್ಲೆನ್ಸರ್’ನಿಂದ ಮುಖ ತೊಳೆಯಿರಿ, ನಂತರ ಮೊಯಿಶ್ಚರೈಸರ್ ಹಚ್ಚಿ.
ವಾರಕ್ಕೆ ಮೂರು ಬಾರಿ ಹೀಗೆ ಮಾಡಿ.

Advertisement

 

ಹರಳೆಣ್ಣೆ ಮತ್ತು ಅರಿಶಿನ ಪ್ಯಾಕ್
ಅರಿಶಿನವನ್ನು ಹಲವಾರು ಶತಮಾನಗಳಿಂದಲೂ ಮುಖಕ್ಕೆ ಹಚ್ಚಲಾಗುತ್ತದೆ. ಅರಿಶಿನ ಮೊಡವೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇದು ಉರಿಯೂತ ನಿವಾರಕವಾಗಿದೆ. ಆದ್ದರಿಂದ ಇದನ್ನು ಹರಳೆಣ್ಣೆಯ ಜೊತೆ ಬಳಸಲಾಗುತ್ತದೆ.
ಬಳಸುವುದು ಹೇಗೆ?
ಒಂದು ಟೀ ಚಮಚ ಅರಿಶಿನ ಪುಡಿ ಮತ್ತು ಎರಡು ಟೀಸ್ಪೂನ್ ಶುದ್ಧ ಹರಳೆಣ್ಣೆ ತೆಗೆದಿಟ್ಟುಕೊಳ್ಳಿ.
ಕ್ಲೆನ್ಸರ್’ನಿಂದ ನಿಮ್ಮ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಮುಖವನ್ನು ಒಣಗಿಸಿ.
ಹರಳೆಣ್ಣೆ ಮತ್ತು ಅರಿಶಿನವನ್ನು ಬೆರೆಸಿ ಮೃದುವಾದ ಪೇಸ್ಟ್ ಮಾಡಿ.
ನಂತರ ಮೃದುವಾದ ಹತ್ತಿ ಚೆಂಡು ತೆಗೆದುಕೊಂಡು ಮಿಶ್ರಣದಲ್ಲಿ ಹತ್ತಿಯನ್ನು ಅದ್ದಿ ಮುಖಕ್ಕೆ ಹಚ್ಚಿ. ವೃತ್ತಾಕಾರವಾಗಿ, ನಿಧಾನವಾಗಿ ಮಸಾಜ್ ಮಾಡಿ 30 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಮುಖವನ್ನು ಚೆನ್ನಾಗಿ ಒರೆಸಿ, ಮಾಯಿಶ್ಚರೈಸರ್ ಹಚ್ಚಿ, ಮೊಡವೆಗಳು ನಿವಾರಣೆಯಾಗುವವರೆಗೂ ಪ್ರತಿದಿನ ಈ ಪ್ಯಾಕ್ ಬಳಸಿ.

Advertisement
Share this on...