ರೀಲಿಸ್ ಗೂ ಮುನ್ನವೇ ಕೋಟಿಗೊಬ್ಬ-3 ದಾಖಲೆ…!

in ಸಿನಿಮಾ 43 views

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ಕುರಿತು ಅಚ್ಚರಿಯ ಮಾಹಿತಿ ಹರಿದಾಡುತ್ತಿದ್ದು ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. ಅರೇ ಇದೇನಪ್ಪ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿದಕ್ಕೆ ಬೇಸರವಾಗಿದೆ ಅಂದುಕೊಂಡರೆ ಸಂತಸದ ಸುದ್ದಿ ಅಂತೀರಾ..?

Advertisement

 

Advertisement

Advertisement

 

Advertisement

ಕೋರೋನಾ ಮಹಾಮಾರಿ ದೇಶಕ್ಕೆ ವಕ್ಕರಿಸಿ ಅವಾಂತರ ಸೃಷ್ಟಿಸದಿದ್ದರೆ ಮೇ 1ರಂದು ಕಾರ್ಮಿಕ ದಿನದಂದು ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡಿದೆ. ಆದರೆ ಇದೀಗ ಅದೇ ಅಭಿಮಾನಿಗಳ ಟ್ವೀಟರ್ ಖಾತೆಯಿಂದ ಕೋಟಿಗೊಬ್ಬ-3 ಸಿನಿಮಾ ಕುರಿತು ಸಂತಸದ ಸುದ್ದಿಯೊಂದು ಹೊರಬಿದ್ದಿದೆ.

 

 

ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಬಿಡುಗಡೆಯ ಹೊಸ್ತಿಲಲ್ಲಿದೆ. ಚಿತ್ರದ ಬಿಡುಗಡೆಗೆ ಕೆಲ ಫೈನಲ್ ಕೆಲಸಗಳಷ್ಟೆ ಬಾಕಿ ಇದ್ದು ಲಾಕ್ ಡೌನ್ ನಿಂದಾಗಿ ಸಿನಿಮಾದ ಕೆಲಸಗಳು ಸ್ಥಗಿತಗೊಂಡಿದೆ. ಇದರ ಮಧ್ಯೆ ಇದೀಗ ಸಿನಿಮಾದ ಕುರಿತು ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಅದು ಸಹ ಸಿನಿಮಾದ ಟಿವಿ ರೈಟ್ಸ್ ಕುರಿತು.

 

 

ಹೌದು, ಖಾಸಗಿ ವಾಹಿನಿಯೊಂದು ದಾಖಲೆಯ ಮೊತ್ತಕ್ಕೆ ಕೋಟಿಗೊಬ್ಬ-3 ಸಿನಿಮಾವನ್ನ ಖರೀದಿಸಿದೆಯಂತೆ. ಬರೋಬ್ಬರಿ 9 ಕೋಟಿ ರೂಪಾಯಿಗಳಿಗೆ ವಾಹಿನಿಗೆ ಟಿವಿ ರೈಟ್ಸ್ ಮಾರಾಟವಾಗಿದೆಯಂತ ಕಿಚ್ಚ ಸುದೀಪ್ ಅಭಿಮಾನಿಗಳ ಟ್ವಿಟರ್ ಖಾತೆಯಲ್ಲಿ ಹಂಚಿಕೊಕೊಳ್ಳಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ ಆದರೆ ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಇದನ್ನ ಹಂಚಿಕೊಂಡು ಸಂತಸವನ್ನ ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ನಾಯಕರಾಗಿ ನಟಿಸುತ್ತಿರುವಂತ ಈ ಚಿತ್ರದಲ್ಲಿ ಮಡೋನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್ ಹಾಗೂ ರವಿಶಂಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಲಾಕ್ ಡೌನ್ ನಿಂದಾಗಿ ಕೋಟಿಗೊಬ್ಬ-3 ಮಾತ್ರವಲ್ಲ ರಾಬರ್ಟ್, ಯುವರತ್ನ ಸೇರಿದಂತೆ ನಿರ್ಮಾಣ ಹಂತದಲ್ಲಿದ್ದ 100 ಕ್ಕೂ ಹೆಚ್ಚು ಸಿನಿಮಾಗಳಿಗೆ ಹೊಡೆತ ಬಿದ್ದಿದೆ. ಇದರಿಂದಾಗಿ ನೂರಾರು ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಕೋರೋನೋ ಮಹಾಮಾರಿಯಿಂದಾಗಿ ಇಡೀ ದೇಶವೇ ಸ್ಥಬ್ದವಾಗಿದ್ದು ಸಿನಿಮಾ ಇಂಡಸ್ಟ್ರಿ ಸಂಪೂರ್ಣ ಬಂದ್ ಆಗಿದೆ.

– ಸುಷ್ಮಿತಾ

Advertisement
Share this on...