ಹಿಂದಿಯಲ್ಲಿ ರೆಡಿಯಾಗುತ್ತಿದೆಯಾ ಬೆಲ್ ಬಾಟಂ !

in ಮನರಂಜನೆ/ಸಿನಿಮಾ 48 views

ನಟ ನಿರ್ದೇಶಕ “ರಿಷಬ್ ಶೆಟ್ಟಿ” ಡಿಟೆಕ್ಟಿವ್ ದಿವಾಕರ್ ಆಗಿ ನಟಿಸಿದ್ದ “ಬೆಲ್ ಬಾಟಂ”  ಚಿತ್ರ ಕಳೆದ ವರುಷ ಬಿಡುಗಡೆಯಾಗಿ ರಾಜ್ಯಾದ್ಯಂತ ದೊಡ್ಡದಾಗಿ ಯಶಸ್ವಿ ಪ್ರದರ್ಶನ ಕಂಡು ಶತದಿನೋತ್ಸವ ಆಚರಿಸಿತ್ತು. ಈ ಚಿತ್ರ ೮೦ರ ದಶಕದ ಪತ್ತೇದಾರಿ ಕಥೆಯಾಗಿದ್ದು, ಚಿತ್ರದಲ್ಲಿ ನಟ ರಿಷಬ್ ಶೆಟ್ಟಿ ರೆಟ್ರೊ  ಲುಕ್ ಮತ್ತು ಕಾಮಿಡಿ ಮಿಶ್ರಿತ ಪಂಚಿಂಗ್ ಡೈಲಾಗ್ಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ಚಿತ್ರತಂಡ ಸದ್ದಿಲ್ಲದೆ “ಬೆಲ್ ಬಾಟಂ 2” ಗಾಗಿ ತಯಾರಿ ನಡೆಸಿದ್ದು, ಈಗಾಗಲೇ ಚಿತ್ರದ ಕುರಿತು ಮಾತುಕತೆ ನಡೆದಿದ್ದು , ಬೆಲ್ ಬಾಟಂ ಸಿನಿಮಾದ ಮುಂದುವರಿದ ಭಾಗವಾಗಲಿದ್ದು ಹೊಸ ಕೇಸ್ ನೊಂದಿಗೆ “ಡಿಟೆಕ್ಟಿವ್ ದಿವಾಕರ್” ಮತ್ತೆ ಎಂಟ್ರಿ ಕೊಡಲಿದ್ದಾರೆ. ಚಿತ್ರದಲ್ಲಿ ಮತ್ತಷ್ಟು ಹೊಸ ಮುಖಗಳು ಸೇರ್ಪಡೆಯಾಗುವ ನಿರೀಕ್ಷೆಯೂ ಇದೆ. ಇದೀಗ ಈ ಸಿನಿಮಾ ಬೇರೆ ಭಾಷೆಗೂ ಕೂಡ ಡಬ್ ಆಗುತ್ತಿದ್ದು, ಪ್ರತಿಯೊಬ್ಬ ಕನ್ನಡ ಸಿನಿ ಪ್ರಿಯರಿಗೂ ಹೆಮ್ಮೆ ತರುವಂತಹ ವಿಚಾರ ಇದಾಗಿದೆ.

Advertisement

Advertisement

ಇದೀಗ ಇದೆ ಬೆಲ್ ಬಾಟಂ ಹೆಸರಿನಲ್ಲಿ ಬಾಲಿವುಡ್ ನಲ್ಲಿಯೂ ಕೂಡ ಸಿನಿಮಾ ಸೆಟ್ಟೇರುತ್ತಿದ್ದು, ಅಕ್ಷಯ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೆ  ಈ ಚಿತ್ರದ ಕುರಿತು ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದು,  ಕನ್ನಡದಲ್ಲಿ ರಿಷಬ್ ಶೆಟ್ಟಿ ಅಭಿನಯಿಸಿದ್ದ ಸಿನಿಮಾದ ರಿಮೇಕ್ ಎನ್ನುವ ವಾದ ಕೂಡ  ಜೋರಾಗಿಯೇ ಕೇಳಿ ಬಂದಿತ್ತು. ಈ ವಾದ ದೊಡ್ಡದಾಗುತ್ತಿದ್ದಂತೆ  ಇದರ  ಬಗ್ಗೆ ಸ್ವತಃ  ಅಕ್ಷಯ್ ಕುಮಾರ್ ಅವರೇ ಸ್ಪಷ್ಟನೆ ನೀಡಿದ್ದು, ಇದು ಯಾವ ಭಾಷೆಯ ಸಿನಿಮಾದ ರಿಮೇಕ್ ಆಲ್ಲ ಎಂದು ವಂದಂತಿಗಳಿಗೆ ತೆರೆ ಎಳಿದಿದ್ದಾರೆ. ಸದ್ಯ ಚಿತ್ರ ಮತ್ತೆ ಸದ್ದು ಮಾಡುತ್ತಿದ್ದು ನಾಯಕಿ ಯಾರೆಂಬುದು ಕುತೂಹಲವಾಗಿದೆ.

Advertisement

 

Advertisement

ಸದ್ಯ ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಚಿತ್ರ  ಬೆಲ್ ಬಾಟಂ ಗೆ ನಾಯಕಿ ಫಿಕ್ಸ್ ಆಗಿದ್ದು, ಬಾಲಿವುಡ್ ನ ಖ್ಯಾತ ನಟಿ ವಾಣಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಕ್ಷಯ್ ಕುಮಾರ್ ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿರುವ ಇವರು, ಈ ಬಗ್ಗೆ ನಟಿ ವಾಣಿ ಕಪೂರ್  ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಅಕ್ಷಯ್  ಕುಮಾರ್ ಹಾಗೂ  ವಾಣಿ ಕಪೂರ್  ಇಬ್ಬರು ಕೂಡ ಕಪ್ಪು ಬಣ್ಣದ ಬಟ್ಟೆ ಧರಿಸಿರುವ ಫೋಟೋವನ್ನು ವಾಣಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು,ಸಖತ್ ಎಕ್ಸೈಟ್  ಆಗಿ “ತುಂಬಾ ರೋಮಾಂಚನವಾಗುತ್ತಿದೆ ಮತ್ತು ಉತ್ಸುಕಳಾಗಿದ್ದೇನೆ. ಅಕ್ಷಯ್ ಕುಮಾರ್ ಜೊತೆ ನಟಿಸುತ್ತಿದ್ದೇನೆ. ಕಾಯಲು ಸಾಧ್ಯವಿಲ್ಲ. ಪ್ರಾರಂಭಿಸೋಣ” ಎಂದು ಬರೆದುಕೊಂಡಿದ್ದಾರೆ.

ಅಂದ್ಹಾಗೆ ಬೆಲ್ ಬಾಟಮ್ ಮುಂದಿನ ವರ್ಷ ತೆರೆಗೆ ಬರುತ್ತಿದೆ. ಈ ಮೊದಲು ಸಿನಿಮಾತಂಡ ಅನೌನ್ಸ್ ಮಾಡಿದ ಹಾಗೆ ಮುಂದಿನ ವರ್ಷ ಏಪ್ರಿಲ್ 2 ರಂದು ಸಿನಿಮಾ ರಿಲೀಸ್ ಆಗುವುದಾಗಿ ಹೇಳಿದ್ದಾರೆ. ಅಕ್ಷಯ್ ಕುಮಾರ್ ಬಳಿ ಈಗಾಗಲೆ ಸಾಕಷ್ಟು ಸಿನಿಮಾಗಳಿವೆ. ಸದ್ಯ ಲಕ್ಷ್ಮಿ ಬಾಂಬ್ ರಿಲೀಸ್ ಗೆ ರೆಡಿಯಾಗಿದೆ. ಅಲ್ಲದೆ ಸೂರ್ಯವಂಶಿ ಮತ್ತು ಪೃಥ್ವಿರಾಜ್ ಸಿನಿಮಾ ಶೂಟಿಂಗ್ ಹಂತದಲ್ಲಿದೆ.

Advertisement
Share this on...