ಧಾರಾಕಾರ ಮಳೆಗೆ ಬೆಂಗಳೂರು ಮಂದಿ ಸುಸ್ತೋ ಸುಸ್ತ್…

in ಕನ್ನಡ ಮಾಹಿತಿ/ಮನರಂಜನೆ 1,633 views

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದಿರುವ ಪರಿಣಾಮ ರಾಜ್ಯದಲ್ಲೂ ಮಳೆಯಾಗುತ್ತಿದ್ದು, ಮುಂದಿನ ಎರಡು ದಿನಗಳವರೆಗೂ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಮಳೆ ಮುಂದುವರೆಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಕಳೆದೆರಡು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಕೊಂಚ ಬಿಡುವು ನೀಡಿದ್ದ ಮಳೆ, ನಿನ್ನೆ ಮತ್ತೆ ಅಬ್ಬರಿಸುತ್ತಿದ್ದು, ಸಂಜೆಯಿಂದ ನಗರದಲ್ಲಿ ವರುಣನ ಆರ್ಭಟ ಜೋರಾಗಿದೆ. ಧಾರಾಕಾರ ಮಳೆ ಹಿನ್ನಲೆಯಲ್ಲಿ ನಗರದಲ್ಲಿ ಭಾರಿ ಅವಾಂತರ ಸೃಷ್ಟಿಯಾಹಿದೆ. ನಾಗರಬಾವಿಯಲ್ಲಿ ರಸ್ತೆಗಳು ಮಳೆ ನೀರಿನಿಂದ ತುಂಬಿದ ಪರಿಣಾಮ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯ್ತು ಹಾಗೂ ಬೆಂಗಳೂರಿನ ಆರ್.ಆರ್. ನಗರದ ಕಲ್ಯಾಣ ಮಂದಿರಕ್ಕೆ ನುಗ್ಗಿದ ಮಳೆ ನೀರು ಮದುವೆ ಸಂಭ್ರಮದಲ್ಲಿದ್ದವರಿಗೆ ಮಳೆಯಿಂದಾಗಿ ಕಿರಿಕಿರಿಯಾಗಿದೆ. ಸಂಜೆ ಕಲ್ಯಾಣ ಮಂಟಪದಲ್ಲಿ ಮದುವೆ ರಿಸೆಪ್ಷನ್ ನಡೆಯುತ್ತಿತ್ತು. ಆದ್ರೆ ಧಾರಾಕಾರವಾಗಿ ಸುರಿದ ಮಳೆಗೆ ಊಟದ ಹಾಲ್, ಮಂಟಪದ ಮುಂಭಾಗ ಪೂರ್ತಿ ಜಾಲಾವೃತವಾಗಿದೆ.

Advertisement

ಇನ್ನು ಕೋರಮಂಗಲದ ಬಹುತೇಕ ರಸ್ತೆಗಳು ಜಲಾವೃತವಾಗಿದೆ. ಕೋರಮಂಗಲದ ನೀಲಸಂದ್ರ ಮುಖ್ಯ ರಸ್ತೆಯಲ್ಲಿ ನಾಲ್ಕು ಅಡಿಗೂ ಹೆಚ್ಚು ಮಳೆ ನೀರು ನಿಂತಿದ್ದು ವಾಹನ ಸವಾರರು ಪರದಾಟ ಮುಂದುವರೆದಿತ್ತು.ಕೋರಮಂಗಲ ಸೋನಿ ವರ್ಲ್ಡ್ ಸಿಗ್ನಲ್ ಸಮೀಪ,4 ನೇ ಬ್ಲಾಕ್ ನ ಮುಖ್ಯ ರಸ್ತೆ ಜಲಾವೃತವಾಗಿದ್ದು, ದ್ವಿಚಕ್ರ ವಾಹನಗಳನ್ನ ತಳ್ಳುತ್ತಾ ಕೆಲವರು ಬಂದಿದ್ದಾರೆ.ಹಾಗೆ ರಸ್ತೆಯಲ್ಲಿ ಸಾಲಾಗಿ ಆಟೋ, ಕಾರು ನೀರಲ್ಲಿ ಇದ್ದು, ವೆಹಿಕಲ್ ಹೊರತರಲಾಗದೆ ಚಾಲಕರ ಪರದಾಟ ಯಾರಿಗೂ ಬೇಡ ಅನಿಸುವಂತಿತ್ತು.

Advertisement

Advertisement

ಇನ್ನೂ ಕೆಲವೆಡೆ ದ್ವಿಚಕ್ರ ವಾಹನ ಸವಾರನ‌ ಮೇಲೆ ಬೃಹತ್ ಮರ ಬಿದ್ದರು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ತಡರಾತ್ರಿಯಾದರೂ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಯನಗರ, ಜೆಪಿ ನಗರ ಮತ್ತು ಬನಶಂಕರಿ ೩ ನೇ ಹಂತದಲ್ಲಿ ಮರಗಳ ರೆಂಬೆಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ದ್ವಿಚಕ್ರವಾಹನ ಸವಾರರು ಪರದಾಟ ಮಾಡಿದ್ದರು.

Advertisement

ಶಾಂತಿನಗರದ ಕರ್ಲಿ ಸ್ರ್ಟೀಟ್ ನಲ್ಲಿ ತಡರಾತ್ರಿ 12 ಗಂಟೆ ಸುಮಾರಿಗೆ ಮರ ಮತ್ತು ವಿದ್ಯುತ್ ಕಂಬಗಳು ಬಿದ್ದು, ಸ್ಥಳೀಯರಿಗೆ ತೊಂದರೆಯಾಗಿದೆ. ಸಾಕಷ್ಟು ಬಾರಿ ಸ್ಥಳೀಯರು ವಿದ್ಯುತ್ ಇಲಾಖೆ ಮತ್ತು ಬಿಬಿಎಂಪಿ ಸಿಬ್ಬಂದಿಗೆ ಕರೆ ಮಾಡಿದಾಗ ಕ್ಯಾರೆ ಅನ್ನದೇ ಇರುವ ಕಾರಣ ಆಕ್ರೋಶ ಹೊರಹಾಕಿದ್ದಾರೆ.

Advertisement
Share this on...