ಚಂದನವನ ನಟರ ಜೀವಿತಾವಧಿಯ ಬೆಸ್ಟ್ ಪಾತ್ರಗಳು ಮಾಡಿದ ಮೋಡಿ ನೋಡಿ ?

in Uncategorized 83 views

ಬಂಗಾರದ ಮನುಷ್ಯ ಮತ್ತು ಕಸ್ತೂರಿ ನಿವಾಸದಲ್ಲಿ ಡಾ.ರಾಜ್ : ಪೌರಾಣಿಕ ಸಾಮಾಜಿಕ ಮತ್ತು ಐತಿಹಾಸಿಕ ಸೇರಿದಂತೆ ಆಧುನಿಕ ಶೈಲಿಯ ಚಿತ್ರಗಳು ಸೇರಿದಂತೆ ಎಲ್ಲಾ ತರಹದ ಪಾತ್ರಗಳಲ್ಲಿಯೂ ಮಿಂಚಿದ್ದಾರೆ ನಮ್ಮ ನಿಮ್ಮ ನೆಚ್ಚಿನ ಅಭಿಮಾನಿಗಳ ಆರಾಧ್ಯದೈವ ಡಾ.ರಾಜ್ ಅವರು. ಮಾಡಿರುವ ಎಲ್ಲ ಪಾತ್ರಗಳಲ್ಲಿಯೂ ಪರಕಾಯ ಪ್ರವೇಶ ಮಾಡುತ್ತಿದ್ದವರು ಈ ನಟಸಾರ್ವಭೌಮ . ಬಂಗಾರದ ಮನು‍ಷ್ಯ ಮತ್ತು ಕಸ್ತೂರಿ ನಿವಾಸ ಚಿತ್ರಗಳಲ್ಲಿನ ರಾಜ್ ಪಾತ್ರಗಳು ಇಂದಿಗೂ ಅಮರ, ಯುಗಯುಗ ಕಳೆದರು ಈ ಪಾತ್ರಗಳನ್ನು ಅಭಿಮಾನಿಗಳು ಮರೆಯುವುದಿಲ್ಲ.

Advertisement

Advertisement

ರಾಮಚಾರಿ ಮತ್ತು ಯಜಮಾನದಲ್ಲಿ ವಿಷ್ಣುವರ್ಧನ್ : ಸಂಪತ್ ಕುಮಾರ್ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಪುಟ್ಟಣ್ಣ  ಅವರ ನಿರ್ದೇಶನದಲ್ಲಿ ನಾಯಕನಾಗಿ ನಟಿಸಿ ಮೊದಲ ಚಿತ್ರದಲ್ಲಿನ ರಾಮಾಚಾರಿ ಪಾತ್ರ ವಿಷ್ಣುವರ್ಧನ್ ಅವರಿಗೆ ಆ್ಯಂಗ್ರಿ ಯಂಗ್ ಮ್ಯಾನ್ ಇಮೇಜ್ ನೀಡಿತು. ಚಿತ್ರದುರ್ಗದ ಐತಿಹಾಸಿಕ ಕೋಟೆಯಲ್ಲಿ ರಾಮಚಾರಿ ಸೃಷ್ಟಿಸಿದ ಮೋಡಿ ಇಂದಿಗೂ ಜೀವಂತ ಮತ್ತು ಅಮರ. ಸಹೋದರ ಬಾಂಧವ್ಯದ ಮೇಲೆ ಬೆಳಕು ಚೆಲ್ಲಿದ ಯಜಮಾನದಲ್ಲಿನ ವಿಷ್ಣು ಪಾತ್ರಗಳು ಕೂಡ ಪ್ರಭಾವ ಬೀರಿವೆ. ಈಗೀನ ಪೀಳಿಗೆಗಳು ಕೂಡ ಈ ಎರಡು ಸಿನಿಮಾಗಳನ್ನು ಮರೆಯುವುದಿಲ್ಲ. ಈ ಪಾತ್ರಗಳು ಅಭಿಮಾನಿಗಳಿಗೆ ಹುಚ್ಚೆಬ್ಬಿಸಿಬಿಟ್ಟಿವೆ.

Advertisement

Advertisement

ಒಂದಾನೊಂದು ಕಾಲದಲ್ಲಿ ಸಾಂಗ್ಲಿಯಾನಾದ ಶಂಕ್ರಣ್ಣ:  ಕೇವಲ 12 ವರ್ಷ ಚಿತ್ರರಂಗದಲ್ಕಿ ಸಕ್ರಿಯವಾಗಿದ್ದರು ಶಂಕ್ರಣ್ಣನವರು, ಕನ್ನಡ ಸಿನಿರಂಗದಲ್ಲಿ ಮತ್ತು ಕನ್ನಡಿಗರಲ್ಲಿ ಶಂಕರನಾಗ್ ಅವರು ಅಚ್ಚಳಿಯದ ಮುದ್ರೆಯನ್ನೊತ್ತಿ ಹೋಗಿದ್ದಾರೆ. ಒಂದಾನೊಂದು ಕಾಲದಲ್ಲಿ ಮತ್ತು ಸಾಂಗ್ಲಿಯಾನ ಚಿತ್ರಗಳು ಶಂಕರ್ ನಾಗ್ ರ ಅದ್ಭುತ ಅಭಿನಯಕ್ಕೆ ಹಿಡಿದ ಕನ್ನಡಿ.

ಅಂತ ಮತ್ತು ಅಂಬಿ ನಿಂಗ್ ವಯ್ಯಸ್ಸಾಯ್ತೋ : ಕರುನಾಡ ಕರ್ಣ ಅಂಬರೀಶ್ ಅಣ್ಣನವರು ದ್ವಿಪಾತ್ರದಲ್ಲಿ ನಟಿಸಿದ ಅಂತ ಚಿತ್ರ ಅಂಬಿಗೆ ಆ್ಯಂಗ್ರಿ ಯಂಗ್ ಮ್ಯಾನ್ ಇಮೇಜ್ ತಂದು ಕೊಟ್ಟಿತು. ಇನ್ನು ಅಂಬಿ ಅವರಿಗೆ ಈ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಪಡೆಯಿತು. ಅಂಬಿ ನಟಿಸಿದ ಕೊನೆಯ ಚಿತ್ರ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಪ್ರಬುದ್ಧ ಅಭಿನಯ ನೀಡಿದರು.

ಲಂಭೋದರ ಮತ್ತು ಗಣೇಶ ಸರಣಿಯ ಪಾತ್ರದಲ್ಲಿ ಅಂನತ್ ನಾಗ್ : ನಟ ಅನಂತ್ ನಾಗ್ ಅವರು ತಮ್ಮ ಸಹಜ ನಟನೆಯಿಂದ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ವಿಶಿಷ್ಠ ಸ್ಥಾನ ಪಡೆದಿರುವ ಅವರು, ಹಿಂದಿಯಲ್ಲಿ ನಟಿಸಿದ್ದ ಅಂಕುರ್ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಬೆಂಕಿಯಲ್ಲಿ ಅರಳಿದ ಹೂವು ಚಿತ್ರದ ಬಡ ಶಿಕ್ಷಕನ ಪಾತ್ರ ಮತ್ತು ಗಣೇಶ್ ಸರಣಿ ಚಿತ್ರಗಳ ಪಾತ್ರಗಳು ಗಮನ ಸೆಳೆದಿವೆ.

ರಣದೀರ ಹಾಗೂ ರಾಮಾಚಾರಿ ಈ ಕ್ರೇಜಿ ಸ್ಟಾರ್ : ಚಂದನವನದಲ್ಲಿ ನಾಯಕನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಹೆಸರು ಮಾಡಿರುವವರು ಈ ಕನಸುಗಾರ. ಅವರ ಕನಸಿನಲ್ಲಿ ಬಂದ ಕಥೆಗಳೆಷ್ಟೋ, ಹೂಡಿದ ಬಂಡವಾಳಗಳೆಷ್ಟೋ. ಹಲವಾರು ಸುಂದರ ಪಾತ್ರಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ರಣಧೀರ ಮತ್ತು ರಾಮಚಾರಿ ಪಾತ್ರಗಳು ಸ್ಮರಣೀಯವಾಗಿದೆ.

 

ಓಂ ಮತ್ತು ಜನಮುದ ಜೋಡಿಯಲ್ಲಿ ಶಿವಣ್ಣ: ನೂರು ಚಿತ್ರಗಳ ಸರದಾರ ಈ ಕರುನಾಡ ಚಕ್ರವರ್ತಿ, ವಯ್ಯಸ್ಸು ೫೦ ದಾಟಿದರು ಅದೇ ಏನರ್ಜಿ, ಅದೇ ನಟನೆ. ಇಂದಿಗೂ ಕೂಡ ಯುವ ನಾಯಕರಿಗೆ ಸ್ಪರ್ಧೆ ನೀಡುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ರ ಜನುಮದ ಜೋಡಿ ಚಿತ್ರದ ಹಳ್ಳಿ ಯುವ ಪ್ರೇಮಿಯ ಪಾತ್ರ ಮತ್ತು ಓಂ ಚಿತ್ರದ ಸತ್ಯ ಪಾತ್ರಗಳು ಕನ್ನಡ ಚಿತ್ರರಂಗದ ಮೇಲೆ ಅವಿಸ್ಮರಣೀಯ ಛಾಪನ್ನು ಮೂಡಿಸಿವೆ.

ಮಠ ಮತ್ತು ನೀರದೋಸೆ ಯಲ್ಲಿ ನವರಸ ನಾಯಕ ನವರಸಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಜಗ್ಗೇಶ್ ರವರು ಖಳನಟನಾಗಿ ಸಿನಿ ಜರ್ನಿ ಆರಂಭಿಸಿ ನಂತರ ನಾಯಕನಟನಾಗಿ ಹಲವಾರು ಪಾತ್ರಗಳ ಮೂಲಕ ಸಿನಿರಸಿಕರಿಗೆ ಕಚಗುಳಿಯಿಟ್ಟಿದ್ದಾರೆ. ನೀರದೋಸೆ ಮತ್ತು ಮಠ ಚಿತ್ರದ ಪಾತ್ರಗಳು ಹಾಸ್ಯದ ಮೇರೆ ಮೀರಿ ಪ್ರೇಕ್ಷಕರಿಗೆ ಅಪ್ಯಾಯಮಾನವಾಗಿವೆ.

Advertisement
Share this on...