ಭಾನುಪ್ರಿಯ ಅವರ ಸಹೋದರಿ ಯಾರು ಗೊತ್ತಾ..? ಈಕೆ ಕೂಡ ನಟಿ..!

in ಮನರಂಜನೆ/ಸಿನಿಮಾ 204 views

‘ರಸಿಕ’ ಚಿತ್ರದ ಮೂಲಕ ಕನ್ನಡ ಚಿತ್ರ ರಸಿಕರಿಗೆ ಪರಿಚಯವಾದ ನಟಿ ಭಾನುಪ್ರಿಯ. ರವಿಚಂದ್ರನ್ ರವರ ಜೊತೆ ರಸಿಕ ಚಿತ್ರದಲ್ಲಿ ರೋಮ್ಯಾನ್ಸ್ ಮಾಡಿದ ಭಾನುಪ್ರಿಯ ಅವರನ್ನು ಇಂದಿಗೂ ಕನ್ನಡ ಸಿನಿ ಪ್ರೇಕ್ಷಕರು ಮರೆತಿಲ್ಲ. 80-90 ರ ದಶಕದಲ್ಲಿ ಮಿಂಚುತ್ತಿದ್ದ ಟಾಪ್ ನಟಿಯರಲ್ಲಿ ನಟಿ ಭಾನುಪ್ರಿಯ ಕೂಡ ಒಬ್ಬರು. ನಟಿ ಭಾನುಪ್ರಿಯ ಆಂಧ್ರಪ್ರದೇಶದ ರಾಜಮಹೇಂದ್ರವರಂ ಎಂಬಲ್ಲಿ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ 1967 ರ, ಜನವರಿ 17 ರಂದು ಜನಿಸಿದರು. ಚಿಕ್ಕಂದಿನಲ್ಲೇ ಕಲೆಯತ್ತ ವಾಲಿದ ಭಾನುಪ್ರಿಯ ಕುಚುಪುಡಿ, ಭರತನಾಟ್ಯವನ್ನು ಕಲಿತಿದ್ದರು. 1984 ರಲ್ಲಿ ತೆರೆಕಂಡ ‘ಸಿತಾರ’ ಎಂಬ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಪೂರ್ಣ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ, ಶೋಬನ್ ಬಾಬು, ವೆಂಕಟೇಶ್, ಕೃಷ್ಣ, ಸುಮನ್, ಕೃಷ್ಣಂ ರಾಜು, ನಾಗಾರ್ಜುನ ಇನ್ನು ಮುಂತಾದ ತೆಲುಗು ಟಾಪ್ ನಟರ ಜೊತೆ ನಟಿ ಭಾನುಪ್ರಿಯ ನಟಿಸಿದ್ದಾರೆ.

Advertisement


ನಂದಮೂರಿ ಬಾಲಕೃಷ್ಣ ಹಾಗೂ ಭಾನುಪ್ರಿಯ ಕಾಂಬಿನೇಷನ್ ಆಗಿನ ಕಾಲದಲ್ಲಿ ತುಂಬಾ ವರ್ಕೌಟ್ ಆಗಿತ್ತು. ಇವರಿಬ್ಬರ ಜೊತೆಗಿನ ಹಲವಾರು ಸಿನಿಮಾಗಳು ಬ್ಲಾಕ್ ಬಾಸ್ಟರ್ ಸಿನಿಮಾಗಳಾಗಿ ಗೆದ್ದವು. ಭಾನುಪ್ರಿಯ ಸುಮಾರು 110 ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಪ್ರೇಕ್ಷಕರು ಭಾನುಪ್ರಿಯ ಅವರನ್ನು ಅಂದಿನ ಕಾಲದಲ್ಲಿ ಮತ್ತೊಬ್ಬ ಶ್ರೀದೇವಿ ಎಂದು ಗುರುತಿಸುತ್ತಿದ್ದರು. ಭಾನುಪ್ರಿಯರವರು 1998 ರಲ್ಲಿ ಅಮೆರಿಕಾದಲ್ಲಿ ನೆಲೆಸಿದ ಫೋಟೋಗ್ರಾಫರ್ ಆದರ್ಶ ಕೌಶಲ್ ಎಂಬುವವರನ್ನು ಮದುವೆಯಾಗಿ ಅಮೇರಿಕಾಗೆ ಹಾರಿದರು. ಭಾನುಪ್ರಿಯ ಅವರು ಹಲವು ಕಾರಣಗಳಿಂದ 2005 ರಲ್ಲಿ ತಮ್ಮ ಪತಿ ಆದರ್ಶ ಕೌಶಲ್ ಅವರಿಗೆ ವಿಚ್ಛೇದನ ನೀಡಿದರು. ಕಳೆದ ಕೆಲವು ವರ್ಷಗಳ ಹಿಂದೆ ಭಾನುಪ್ರಿಯರವರ ಪತಿ ಕೂಡ ಸಾವನ್ನಪ್ಪಿದ್ದರು.

Advertisement

Advertisement

ಭಾನುಪ್ರಿಯ ಅವರು ಪ್ರಸ್ತುತ ಮಗಳೊಂದಿಗೆ ಅಮೆರಿಕಾದಲ್ಲಿ ನೆಲ್ಲಿಸಿದ್ದು ದಕ್ಷಿಣ ಭಾರತದ ಶಾಸ್ತ್ರೀಯ ನೃತ್ಯವಾದ ಕುಚುಪುಡಿ, ಭರತನಾಟ್ಯವನ್ನು ಅಲ್ಲಿನ ಭಾರತೀಯ ಮಕ್ಕಳಿಗೆ ಕಲಿಸಿಕೊಡುತ್ತಿದ್ದಾರೆ. ಭಾನುಪ್ರಿಯರವರು ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ರವಿಚಂದ್ರನ್, ವಿಷ್ಣುವರ್ಧನ್, ಶಿವರಾಜ್ ಕುಮಾರ್ ರಂತಹ ಟಾಪ್ ನಟರ ಜೊತೆ ನಟಿಸಿದ್ದಾರೆ. ಇನ್ನೂ ಭಾನುಪ್ರಿಯರವರಿಗೆ ಶಾಂತಿಪ್ರಿಯ ಎಂಬ ಸಹೋದರಿ ಇದ್ದಾರೆ. ಶಾಂತಿಪ್ರಿಯರವರು ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ತೆರೆಕಂಡಿದ್ದ ‘ಅಂತಿಂಥ ಗಂಡು ನಾನಲ್ಲ’ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಜೊತೆಯಲ್ಲಿ ನಟಿ ಶಾಂತಿಪ್ರಿಯ ನಾಯಕಿಯಾಗಿ ನಟಿಸಿದ್ದಾರೆ.

Advertisement

– ಸುಷ್ಮಿತಾ

Advertisement
Share this on...