ಇದೀಗ ತನ್ನ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ ಭಾವನಾ ಮೆನನ್ !

in ಮನರಂಜನೆ/ಸಿನಿಮಾ 216 views

ಎರಡು ಜಡೆಯನ್ನು ಬಿಟ್ಟುಕೊಂಡು, ಸದಾ ನಿನ್ನ ಕಣ್ಣಲ್ಲಿ ಎಂದು ಅಭಿಮಾನಿಗಳ ನಿದ್ದೆಗೆಡೆಸುತ್ತಾ, ಕನ್ನಡಿಗರ ಮನಸ್ಸಿನಲ್ಲಿ ಆಲೋಚನೆ ಆಲಾಪನೆ ಮಾಡಿ, ಕನ್ನಡ ಸಿನಿರಂಗದ ಜಾನೂ ಆಗಿರುವವರು ನಟಿ ಭಾವನಾ ಮೆನನ್ ಅವರು. ಇದೀಗ ಅವರು ತಮ್ನ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದ್ದು, ಈ ಮಲಯಾಳಂನ ಹಾಲ್ಗೆನ್ನೆ ಸುಂದರಿ ಕನ್ನಡದ ನಟ ಮತ್ತು ನಿರ್ಮಾಪಕ ನವೀನ್ ಅವರನ್ನು ಪ್ರೀತಿಸಿ ವರಿಸಿದ್ದಾರೆ. ಭಾವನ ಮತ್ತು ನವೀನ್ ಇಬ್ಬರು ೨೦೧೮ ರಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಇವರಿಬ್ಬರ ಪ್ರೀತಿ ಅನೇಕ ವರ್ಷಗಳದ್ದು. ಭಾವನಾ ಅವರು ಕನ್ನಡದ ಹುಡುಗನನ್ನು ಪ್ರೀತಿಸಿದ್ದು, ವಿವಾಹವಾಗುತ್ತಿದ್ದಾರೆ ಎನ್ನುವ ವಿಚಾರ ಎಲ್ಲಾ ಕನ್ನಡ ಅಭಿಮಾನಿಗಳಿಗೆ ಬಹಳ ಅಚ್ಚರಿ ಮೂಡಿಸಿತ್ತು. ಇನ್ನು ನಟಿ ಭಾವನಾ ಅವರು ಮೂಲತಃ ಮಲಯಾಳಂ ನವರಾಗಿದ್ದು, ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾದಲ್ಲಿಯೂ ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಸದ್ಯ ನವೀನ್ ಜೊತೆ ಬೆಂಗಳೂರಿನಲ್ಲಿ ನೆಲೆಸಿರುವ ಭಾವನಾ ತಮ್ಮ ಪ್ರೇಮ ವಿಚಾರವನ್ನು ಇದೀಗ ಬಹಿರಂಗಪಡಿಸಿದ್ದಾರೆ.

Advertisement

Advertisement

ತಮಗೆಲ್ಲರಿಗು ತಿಳಿದಿರುವ ಹಾಗೆ ಭಾವನ ಅವರು ಸುಕ್ಕಾ ಸೂರಿ ಅವರ ನಿರ್ದೇಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಅಭಿನಯದ ಜಾಕಿ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟು ಅಪಾರ ಜನಮನ್ನಣೆ ಪಡೆದುಕೊಂಡರು. ಇದೀಗ ಅವರು ಕನ್ನಡದ ಹುಡುಗನ್ನು ಪ್ರೀತಿಸಿ, ವಿವಾಹವಾಗಿ ನಮ್ಮ ಕನ್ನಡದ ಸೊಸೆಯಾಗಿ ಬಿಟ್ಟಿದ್ದಾರೆ. ಅಂದ್ಹಾಗೆ ಭಾವನಾ ಮತ್ತು ನವೀನ್ ಅವರ ಪ್ರೇಮ ಕಥೆ ಪ್ರಾರಂಭವಾಗಿದ್ದು ರೋಮಿಯೋ ಸಿನಿಮಾ ಸಮಯದಲ್ಲಂತೆ. 2011ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗೆ ನಾಯಕಿಯಾಗಿ ಭಾವನಾ ತೆರೆ ಹಂಚಿಕೊಂಡಿದ್ದರು.

Advertisement

Advertisement

ಇನ್ನು ಈ ರೋಮಿಯೋ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಇದೇ ನವೀನ್ ಅವರು. ಈ ಸಿನಿಮಾ ಸಮಯದಲ್ಲಿ ಪ್ರಾರಂಭವಾದ ಪ್ರೀತಿಯ ಬಗ್ಗೆ ಭಾವನಾ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, “ರೋಮಿಯೋ ಸಿನಿಮಾಗೆ 8 ವರ್ಷ. ನಮ್ಮ ಪ್ರೀತಿಗೆ 9 ವರ್ಷ. ಈ ಸಿನಿಮಾ ನನಗೆ ನನ್ನ ರೋಮಿಯೋವನ್ನು ನೀಡಿದೆ. ನಾವು ಹೇಗೆ ಭೇಟಿ ಆದೆವು, ಪ್ರೀತಿಯಲ್ಲಿ ಬಿದ್ದೆವು ಎನ್ನುವುದು ಮ್ಯಾಜಿಕ್. ನನ್ನ ಜೀವನಕ್ಕೆ  ಬಂದಿದ್ದಕ್ಕಾಗಿ ಮತ್ತು ನಿಮ್ಮ ಪ್ರೀತಿಯಲ್ಲಿ ಬಿದ್ದಿದ್ದಕ್ಕೆ ಧನ್ಯವಾದಗಳು. 9 ವರ್ಷ ಜೊತೆಗಿದ್ದೀವಿ” ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಭಾವನಾ ಅವರು ತಮ್ಮ ಪತಿಯ ಜೊತೆ ಇರುವ ಸುಂದರ ಫೋಟೋಗಳನ್ನು ಕೂಡ ಶೇರ್ ಮಾಡಿ ಕೊಂಡಿದ್ದಾರೆ. ಭಾವನಾ ಮತ್ತು ನವೀನ 2018ರಲ್ಲಿ ಕೇರಳದ ತ್ರಿಶೂರ್ ನ ತಿರುವಂಬಾಡಿ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾದರು. ಇಬ್ಬರ ಮದುವೆಗೆ ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.

Advertisement
Share this on...