ತಮ್ಮ ನಟನೆಯ ಮೂಲಕ ಮಿಂಚಿದ ಭವ್ಯ ಈಗ ಏನು ಮಾಡ್ತಾ ಇದ್ದಾರೆ ಗೊತ್ತಾ?

in ಮನರಂಜನೆ/ಸಿನಿಮಾ 235 views

80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಮಿಂಚಿದ ಭವ್ಯ ಅವರು ಅಂದಿನ ಕಾಲದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ನಟಿ. ಇವರ ಪೂರ್ಣ ಹೆಸರು ಭಾರತಿ ಇವರು 12 ಜನವರಿ 1966 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರು ಅಂದಿನ ಕಾಲದಲ್ಲಿ ಎಲ್ಲಾ ತರಹದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಅದಲ್ಲದೆ ಅನೇಕ ದಿಗ್ಗಜ ನಾಯಕರ ಜೊತೆ ನಟಿಸಿದ್ದರು. ಇವರು ವಿಷ್ಣುವರ್ದನ್ ಅವರ ಜೊತೆ ಅನೇಕ ಚಿತ್ರಗಳನ್ನು ಮಾಡಿ ಎಲ್ಲಾ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತವೆ ಅವರ ಜೊತೆಗಿನ ಹಿಟ್ ಚಿತ್ರಗಳು ಎಂದರೆ ನೀ ಬರೆದ ಕಾದಂಬರಿ, ಮತ್ತೆ ಹಾಡಿತು ಕೋಗಿಲೆ, ಜನ ನಾಯಕ, ಕೃಷ್ಣ ನೀ ಬೇಗನೇ ಬಾರೋ ಅಂದಿನ ಹಿಟ್ ಚಿತ್ರಗಳು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ. ಅಂದಹಾಗೆ ಇವರು ಕರಾಟೆ ಕಿಂಗ್ ಶಂಕರ್ ನಾಗ್ ಅವರ ಜೊತೆಗೂ ಅಭಿನಯಿಸಿದ್ದಾರೆ ಅವರ ಜೊತೆ ನಟಿಸಿದ ಎಸ್.ಪಿ ಸಾಂಗ್ಲಿಯಾನ ಚಿತ್ರವು ಅಂದಿಗೂ ಇಂದಿಗೂ ಎಂದೆಂದಿಗೂ ಜನರ ಮನಸ್ಸಲ್ಲಿ ನೆಲೆಯೂರಿದೆ,ಈ ಚಿತ್ರದಲ್ಲಿ ಇವರ ನಟನೆಯನ್ನು ಯಾರು ಮರೆಯುವಂತೆ ಇಲ್ಲ.

Advertisement

Advertisement

ಇವರು 1983 ರಲ್ಲಿ ತಮ್ಮ ನಟನೆಯನ್ನು ಪ್ರೇಮ ಪರ್ವ ಚಿತ್ರದ ಮೂಲಕ ಆರಂಭಿಸುತ್ತಾರೆ, ಇವರು ಅಂದಿನ ಕಾಲದಲ್ಲಿ ಎಲ್ಲಾ ದಿಗ್ಗಜ ನಾಯಕರ ಜೊತೆ ನಟಿಸಿದ್ದರು ವಿಷ್ಣುವರ್ದನ್, ಅಂಬರೀಷ್, ಶಂಕರ್ ನಾಗ್, ರವಿ ಚಂದ್ರನ್, ಶಶಿ ಕುಮರ್ ರಾಮ್ ಕುಮಾರ್. ಇವರು ರವಿ ಚಂದ್ರನ್ ಅವರ ಜೊತೆ ಗ್ಲಾಮರ್ ಬೊಂಬೆ ಆಗಿ ಅಭಿನಯಿಸುತ್ತಾರೆ ಅಂದಿನ ಕಾಲದಲ್ಲಿ ಇವರು ಎಲ್ಲಾ ಸಿನಿ ರಸಿಕರ ನಿದ್ದೆ ಕೆಡಿಸಿದ್ದು ಉಂಟು . ಇವರು ಅಂದಿನ ಕಾಲದಲ್ಲಿ ಎಲ್ಲಾ ತರಹದ ಪಾತ್ರದಲ್ಲಿ ಅಭಿನಯಿಸಿ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಅನ್ನು ಪಡೆದು ಕೊಂಡಿರುತ್ತಾರೆ.

Advertisement

ಇವರು ಬರೀ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದೆ ತಮಿಳು ತೆಲಗಿನಲ್ಲೂ ನಟಿಸಿದ್ದರು. ಅದಲ್ಲದೆ ಅಂದಿನ ಕಾಲದಲ್ಲಿ ನಾಯಕಿ ಆಗಿ ಅಭಿನಯಿಸಿ ಇತ್ತೀಚಿನ ದಿನಗಳಲ್ಲಿ ಅನೇಕ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಅಭಿನಯಿಸುತ್ತಾ ಸಹ ಇದ್ದಾರೆ , ಹಾಗೆ ಇವರು ಹೊಸ ನಾಯಕ ನಟರಿಗೆ ತಾಯಿಯ ಪಾತ್ರವನ್ನು ಮಾಡಿದ್ದಾರೆ ಅಮೃತದಾರೆ, ನನ್ನ ಪ್ರೀತಿಯ ಹುಡುಗಿ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಕ್ಷೇತ್ರದಲ್ಲಿ ಅವಕಾಶಗಳು ಕಮ್ಮಿ ಆಗಿ ಇವರು ಕಿರುತೆರೆಯಲ್ಲಿ ಅನೇಕ ಪಾತ್ರಗಳನ್ನು ಮಾಡಿದ್ದಾರೆ.

Advertisement

ಇನ್ನು ಇವರ ಕುಟುಂಬದ ಬಗ್ಗೆ ಹೇಳುವುದಾದರೆ ಇವರ ಗಂಡ ಮುಖೇಶ್ ಪಾಟೀಲ್ ಅಂತ ಇವರು ಮುಂಬೈ ನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಾ ಇದ್ದಾರೆ. ಇವರಿಗೆ ಒಬ್ಬಳು ಹೆಣ್ಣು ಮಗಳು ಇದ್ದಾರೆ ಅವರನ್ನು ಸಿನಿಮಾ ರಂಗದಿಂದ ಸದ್ಯಕ್ಕೆ ದೂರ ಇಟ್ಟು ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಕಳಿಸಿದ್ದಾರೆ.ಇಷ್ಟೆಲ್ಲಾ ಮಾಡಿರುವ ಇವರು ಸದ್ಯಕ್ಕೆ ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಇವರು ಪ್ರಸ್ತುತ ಆಗಿ ಕಿರುತೆರೆ ಬೆಳ್ಳಿತೆರೆ ಅಲ್ಲಿ ಕಾಣಿಸಿ ಕೊಳ್ಳುವುದರ ಜೊತೆಗೆ ಇವರು ತಮ್ಮದೇ ಆದ ಫಿಲ್ಮಿಗೋ ಸೆಲೆಬ್ರಿಟಿಸ್ ವರ್ಲ್ಡ್ ಎಂಬ ನಟನ ತರಬೇತಿಯನ್ನು ನೆಡೆಸುತ್ತಿದ್ದಾರೆ ಇದರಲ್ಲಿ ಇವರೇ ಪ್ರಿನ್ಸಿಪಾಲ್ ಕೂಡ ಆಗಿದ್ದಾರೆ. ಇಷ್ಟೆಲ್ಲಾ ಮಾಡುತ್ತಾ ಇರುವ ಇವರು ಇನ್ನೂ ಅನೇಕ ಚಿತ್ರಗಳನ್ನು ಮಾಡಿ ಕನ್ನಡಿಗರಿಗೆ ಮನರಂಜನೆ ನೀಡಲಿ ಎಂದು ಹಾರೈಸೋಣ ಅದರ ಜೊತೆಗೆ ತಮ್ಮ ನಟನೆಯ ತರಬೇತಿಯಲ್ಲಿ ಅನೇಕ ಯುವ ಪೀಳಿಗೆಗೆ ಚೆನ್ನಾಗಿ ತರಬೇತಿ ನೀಡಿ ಸಿನಿಮಾ ರಂಗಕ್ಕೆ ಕಳಿಸಲಿ ಎಂದು ಆಶಿಸೋಣ.

Advertisement
Share this on...