ಗಗನಸಖಿಯಾಗಿ ಹಾರಬೇಕೆಂಬ ಈಕೆ ನಟಿಯಾಗಿ ಬಣ್ಣದ ಲೋಕಕ್ಕೆ ಬಂದಿದ್ದು ಏಕೆ ಗೊತ್ತೇ?

in ಮನರಂಜನೆ/ಸಿನಿಮಾ 152 views

ಅವಳಿಗೆ ಗಗನಸಖಿಯಾಗಿ ಆಗಸದಲ್ಲಿ ಹಾರಾಡುವ ಬಯಕೆ. ಅಪ್ಪ ಅಮ್ಮನಿಗೆ ಮಗಳನ್ನು ಪರದೆ ಮೇಲೆ ನೋಡುವ ಕನಸು.. ಎರಡನ್ನು ಅಳೆದು ತೂಗಿದ ನಂತರ ಆಕೆ ಆಯ್ದು ಕೊಂಡದ್ದು ಅಪ್ಪ ಅಮ್ಮನ ಕನಸನ್ನು. ತನ್ನ ಪ್ರೀತಿಯ ಹೆತ್ತವರ ಕನಸನ್ನು ನನಸು ಮಾಡುವುದಕ್ಕಾಗಿಯೇ ನಟನಾ ಲೋಕಕ್ಕೆ ಬಂದಿರುವ ಚೆಂದುಳ್ಳಿ ಚೆಲುವೆಯ ಹೆಸರು ಭವ್ಯಾ ಗೌಡ! ಭವ್ಯಾ ಗೌಡ ಕಿರುತೆರೆ ವೀಕ್ಷಕರಿಗೆ ಕೊಂಚ ಅಪರಿಚಿತ ಹೆಸರೂ ಹೌದು. ಯಾಕೆಂದರೆ ಬಣ್ಣದ ಲೋಕದಲ್ಲಿ ಆಕೆ ಗುರುತಿಸಿಕೊಂಡಿರುವುದು ಗೀತಾಳಾಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ನಾಯಕಿ ಗೀತಾಳಾಗಿ ನಟಿಸುತ್ತಿರುವ ಭವ್ಯಾ ಗೌಡ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ. ಬಣ್ಣದ ಲೋಕದ ಕನಸು ಕಾಣದಿದ್ದ ಭವ್ಯಾ ಇಂದು ಗೀತಾಳಾಗಿ ಬದಲಾಗಿದ್ದಾರೆ ಎಂದರೆ ಅದಕ್ಕೆ ಹೆತ್ತವರ ಕನಸೇ ಕಾರಣ.ಧಾರಾವಾಹಿ, ಸಿನಿಮಾ ನಟಿಯರನ್ನು ಕಂಡಾಗ ಭವ್ಯಾ ಅಪ್ಪ ಅಮ್ಮ ಹೇಳುತ್ತಿದ್ದ ಮಾತು ಒಂದೇ. ನೀನು ಕೂಡಾ ನಟಿಯಾಗಿ ಕಾಣಿಸಿಕೊಳ್ಳಬೇಕು, ನೀನು ಬಣ್ಣದ ಲೋಕದಲ್ಲಿ ಕಂಗೊಳಿಸುವುದನ್ನು ನಾವು ನೋಡಬೇಕು. ನಿನ್ನಿಂದ ಅದು ಸಾಧ್ಯ ಎಂದು ಹೇಳುತ್ತಿದ್ದರು. ಇದೀಗ ಅವರ ಆಸೆಯಂತೆಯೇ ಭವ್ಯಾ ಅವರು ನಟಿಯಾಗಿ ಅಭಿನಯಿಸುತ್ತಿದ್ದಾರೆ.

Advertisement

Advertisement

ಗೀತಾ ಧಾರಾವಾಹಿಯ ಗೀತಾಳಾಗಿ ನಟಿಸುವ ಮೊದಲು ಭವ್ಯಾ ಅವರು ನೆಟಿಜನ್ಸ್ ಮನ ಸೆಳೆದಿದ್ದಾರೆ. ನಟಿಯಾಗಿ ಗುರುತಿಸಿಕೊಳ್ಳುವ ಮೊದಲು ಟಿಕ್ ಟಾಕ್ ಸ್ಟಾರ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವ ಭವ್ಯಾ ಸದ್ಯ ಗೀತಾ ಆಗಿ ಚಿರಪರಿಚಿತ. “ನಾನು ಟಿಕ್ ಟಾಕ್ ಮಾಡುತ್ತಿದ್ದೆ ನಿಜ. ಆದರೆ ಟಿಕ್ ಟಾಕ್ ಹಾಗೂ ಧಾರಾವಾಹಿ ಇದೆರಡು ಬೇರೆ. ಹಾಗೇ ನೋಡಿದರೆ ಟಿಕ್ ಟಾಕ್ ಮಾಡುವುದು ಕೊಂಚ ಸುಲಭ. ಅದರಲ್ಲಿ ಬೇರೆಯವರ ದನಿಗೆ ಡಬ್ ಮಾಡಿದರೆ ಆಯಿತು. ಆದರೆ ನಟನೆ ಎಂಬುದು ಹಾಗಲ್ಲ. ನಾವೇ ನಟಿಸಬೇಕು. ಎಲ್ಲದಕ್ಕಿಂತಲೂ ಮುಖ್ಯವಾಗಿ ಧಾರಾವಾಹಿಯಲ್ಲಿ ಪ್ರತಿದಿನವೂ ಕಲಿಯಬೇಕಾಗುತ್ತದೆ. ಜೊತೆಗೆ ಧಾರಾವಾಹಿಗೆ ಬಂದ ಬಳಿಕವೇ ನಟನೆಯ ರೀತಿ ನೀತಿಗಳನ್ನು ಕಲಿತೆ” ಎನ್ನುತ್ತಾರೆ ಭವ್ಯಾ ಗೌಡ.

Advertisement

Advertisement

ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯ ಪಾತ್ರ ದೊರೆಯುತ್ತಿರುವುದಕ್ಕೆ ನಿಜವಾಗಿಯೂ ಸಂತಸವಾಗುತ್ತಿದೆ ಎಂದು ಹೇಳುವ ಭವ್ಯಾ ಇಂದು ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ನಿರ್ದೇಶಕ ರಾಮ್ ಜೀ ಅವರೇ ಮೂಲ ಕಾರಣ.
“ನಾನಿಂದು ನಟನೆಯ ರೀತಿ ನೀತಿಗಳನ್ನು ಕಲಿತಿದ್ದೇನೆ. ನಟಿಯಾಗಿ ಛಾಪು ಮೂಡಿಸುತ್ತಿದ್ದೇನೆ ಎಂದರೆ ರಾಮ್ ಜೀ ಅವರೆ ಕಾರಣ. ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ” ಎಂದಿದ್ದಾರೆ ಭವ್ಯಾ.

– ಅಹಲ್ಯಾ

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...