‘ಇಕ್ಕಟ್’​​​​​ನಲ್ಲಿ ಸಿಲುಕಿದ ಬಿಗ್​ಬಾಸ್​ ಖ್ಯಾತಿಯ ಭೂಮಿಶೆಟ್ಟಿ…!

in ಮನರಂಜನೆ/ಸಿನಿಮಾ 304 views

ರಾಯಲ್ ಶೆಟ್ಟಿ ಅಲಿಯಾಸ್ ಭೂಮಿ ಶೆಟ್ಟಿ ‘ಕಿನ್ನರಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿಯಲ್ಲಿ ಮೊದಲು ಪುಟಾಣಿ ದಿಶಾ ರಾಮ್ ಮಣಿ ಆಗಿ ನಟಿಸಿದ್ದರು. ಮಣಿ ಬೆಳೆದು ದೊಡ್ಡವಳಾದ ಪಾತ್ರಕ್ಕೆ ಈ ಭೂಮಿಶೆಟ್ಟಿಯನ್ನು ಕರೆತರಲಾಯ್ತು. ಭೂಮಿಯನ್ನು ನೋಡಿ ಎಲ್ಲರೂ ಆಶ್ಚರ್ಯಗೊಂಡಿದ್ದಂತೂ ನಿಜ. ಏಕೆಂದರೆ ಭೂಮಿಶೆಟ್ಟಿ ಹಾಗೂ ಪುಟಾಣಿ ದಿಶಾ ರಾಮ್​ ಇಬ್ಬರಿಗೂ ಅಷ್ಟು ಹೋಲಿಕೆ ಇತ್ತು. ನೋಡಿದ ಕೂಡಲೇ ಆ ಪುಟ್ಟ ದಿಶಾಳೇ ಇಷ್ಟು ದೊಡ್ಡವಳಾದ್ಲಾ ಎನ್ನುವಷ್ಟರ ಮಟ್ಟಿಗೆ ಇಬ್ಬರಿಗೂ ಹೋಲಿಕೆ ಇತ್ತು. ಮುಖಚಹರೆ, ಬಣ್ಣ ಎಲ್ಲಾ. ಒಟ್ಟಿನಲ್ಲಿ ಕುಂದಾಪುರದ ಭೂಮಿಶೆಟ್ಟಿ ಈ ಧಾರಾವಾಹಿ ಮೂಲಕ ಧಾರಾವಾಹಿಪ್ರಿಯರಿಗೆ ಪರಿಚಯವಾದರು. ಬಹಳ ದಿನಗಳ ಗ್ಯಾಪ್ ನಂತರ ಭೂಮಿಶೆಟ್ಟಿ ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ. ಆದರೆ ಅವರು ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಇದೇ ಮೊದಲ ಬಾರಿಗೆ ಭೂಮಿಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹೆಸರು ‘ಇಕ್ಕಟ್’​. ಇಶಾಂ ಖಾನ್ ಹಾಗೂ ಹಸೀನ್ ಖಾನ್ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಶೇಷ ಎಂದರೆ ಈಗಾಗಲೇ ಚಿತ್ರದ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಂಕಷ್ಟಕರ ಗಣಪತಿ, ಫ್ರೆಂಚ್ ಬಿರಿಯಾನಿ, ಒಂದಲ್ಲಾ ಎರಡಲ್ಲಾ ಚಿತ್ರದಲ್ಲಿ ನಟಿಸಿದ್ದ ನಾಗಶೇಖರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.

Advertisement

Advertisement

ಇದೊಂದು ಕಾಮಿಡಿ ಚಿತ್ರ ಎನ್ನಲಾಗಿದೆ. ಹೊಂದಾಣಿಕೆ ಆಗದ ದಂಪತಿ ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನ ಪಡೆಯಲು ಮುಂದಾಗುತ್ತಾರೆ. ಆದರೆ ಕೊರೊನಾ ಲಾಕ್​ಡೌನ್​​ ಕಾರಣದಿಂದ ಕೋರ್ಟ್, ಸಾರಿಗೆ ಎಲ್ಲಾ ಬಂದ್ ಆಗುವುದರಿಂದ ಇಬ್ಬರೂ ಮತ್ತೆ ಒಟ್ಟಿಗೆ ಇರಬೇಕಾಗುತ್ತದೆ. ಈ ಸಮಯದಲ್ಲೇ ಏನೆಲ್ಲಾ ಘಟನೆಗಳು ಜರುಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹಾಸ್ಯರೂಪದಲ್ಲಿ ತೋರಿಸಲಾಗಿದೆ. ಚಿತ್ರದ ಸ್ಕ್ರಿಪ್ಟ್ ಬಹಳ ಇಷ್ಟ ಆಯ್ತು, ಆದ್ದರಿಂದ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎನ್ನುತ್ತಾರೆ ಭೂಮಿಶೆಟ್ಟಿ.

Advertisement

Advertisement

ಭೂಮಿಶೆಟ್ಟಿ ಕಿನ್ನರಿ ಧಾರಾವಾಹಿ ನಂತರ ಬಿಗ್​​​ಬಾಸ್​​​​​​​ ಸ್ಪರ್ಧಿಯಾಗಿ ಕೂಡಾ ಭಾಗವಹಿಸಿದ್ದರು. ಟಾಪ್​​​ 5 ವರೆಗೂ ಇದ್ದ ಭೂಮಿಶೆಟ್ಟಿ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಮಹಿಳಾ ದಿನಾಚರಣೆಯ ಸಂದೇಶವಾಗಿ ‘ಬ್ರೇಕ್​ ದಿ ಸ್ತ್ರಿಯೋಟೈಪ್’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದರು. ಅಷ್ಟರಲ್ಲಿ ಲಾಕ್​​ಡೌನ್ ಆರಂಭವಾದ ಕಾರಣ ಸ್ವಂತ ಊರು ಕುಂದಾಪುರಕ್ಕೆ ತೆರಳಿ ಅಪ್ಪ, ಅಪ್ಪನೊಂದಿಗೆ ಗದ್ದೆಯಲ್ಲಿ ಕೆಲಸ ಮಾಡಿದ್ದರು. ಈ ವಿಡಿಯೋ ಕೂಡಾ ಬಹಳ ವೈರಲ್ ಆಗಿತ್ತು. ಇದೀಗ ಅವರು ನಟಿಸುತ್ತಿರುವ ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಪ್ರಿಯರನ್ನು ಈ ಸಿನಿಮಾ ಹೇಗೆ ರಂಜಿಸಲಿದೆ ಕಾದು ನೋಡಬೇಕು.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...