ಮತ್ತೆ ಅನಾರೋಗ್ಯಕ್ಕೀಡಾಗಿದ್ದಾರಾ ಬಿಗ್ ಬಿ…? ಅಮಿತಾಬ್ ಬರೆದುಕೊಂಡಿರುವ ಆ ಒಂದು ಸಾಲಿನಲ್ಲಿ ಹೇಳಿದ್ದೇನು…?

in ಮನರಂಜನೆ/ಸಿನಿಮಾ 509 views

78ರ ಇಳಿವಯಸ್ಸಿನಲ್ಲೂ ಬಾಲಿವುಡ್ ಚಿತ್ರರಂಗದಲ್ಲಿ ಬ್ಯೂಸಿ ನಟನಾಗಿರುವ ಬಿಗ್ ಬಿ ಅಮಿತಾಬ್ ಬಚ್ಚನ್, ತಮ್ಮ ಬಿಡುವಿಲ್ಲದ ನಟನೆಯ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಈ ಮೂಲಕ ಅಭಿಮಾನಿಗಳ ಜೊತೆ ನಿಕಟ ಸಂಪರ್ಕದಲ್ಲಿರುವ ಬಿಗ್ ಬಿ ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರು. ಕೋವಿಡ್ ನಿಂದ ಚೇತರಿಸಿಕೊಂಡ ಬಳಿಕ ಮತ್ತೆ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಚಿತ್ರದ ಶೂಟಿಂಗ್, ಹೊಸ ಚಿತ್ರ ಹೀಗೆ ಎಲ್ಲದರ ಬಗ್ಗೆಯೂ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ ಡೇಟ್ ನೀಡುವ ಬಿಗ್ ಬಿ ಇದೀಗ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹೌದು. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತೆ ಅನಾರೋಗ್ಯಕ್ಕೀಡಾಗಿದ್ದಾರೆ. ಈ ಬಗ್ಗೆ ಸ್ವತ: ಅಮಿತಾಬ್ ಸುಳಿವು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವತ: ಬರೆದುಕೊಂಡಿರುವ ಬಿಗ್ ಬಿ ಅಮಿತಾಬ್ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ…ಸರ್ಜರಿ..ಈಗೇನೂ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಒಂದೇ ಲೈನ್ ನಲ್ಲಿ ಚಿಕ್ಕದಾಗಿ ಹೇಳಿದ್ದಾರೆ. ತಮ್ಮ ಆರೋಗ್ಯದ ಬಗ್ಗೆಯಾಗಲಿ, ಮುಂದಿನ ಚಿತ್ರದ ಬಗ್ಗೆಯಾಗಲಿ ಸದಾ ವಿಸ್ತಾರವಾಗಿ ಮಾಹಿತಿ ನೀಡುವ ಅಮಿತಾಬ್ ಈಗ ಏಕಾಏಕಿ ಕೇವಲ ಒಂದೇ ಒಂದು ಲೈನ್ ನಲ್ಲಿ ಮಾಹಿತಿ ನೀಡಿರುವುದು ಅಭಿಮಾನಿಗಳಲ್ಲಿ ಆತಂಕವನ್ನುಂಟುಮಾಡಿದೆ. ಬಿಗ್ ಬಿ ಕಾಡುತ್ತಿರುವ ಅನಾರೋಗ್ಯವೇನು? ಅವರು ಯಾವ ಸರ್ಜರಿಗೆ ಒಳಗಾಗಿದ್ದಾರೆ ಎಂಬ ಬಗ್ಗೆ ಏನೊಂದರ ಬಗ್ಗೆಯೂ ಹೆಚ್ಚಿನ ವಿವರ ನೀಡಿಲ್ಲ.

Advertisement

Advertisement

ಕಳೆದ ವರ್ಷ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅಮಿತಾಬ್, ಅದರಿಂದ ಗುಣಮುಖರಾದ ಬಳಿಕ ತಮ್ಮ ಕೋವಿಡ್ ಜರ್ನಿ ಹೇಗಿತ್ತು ಎಂಬ ಬಗ್ಗೆ ಬರೆದುಕೊಂಡಿದ್ದರು. 2019ರಲ್ಲಿ ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. 1982ರಿಂದಲೂ ಬಿಗ್ ಬಿಗೆ ಲಿವರ್ ಸಮಸ್ಯೆಯಿದ್ದು, ಕೂಲಿ ಚಿತ್ರದ ಶೂಟಿಂಗ್ ವೇಳೆ ನಡೆದಿದ್ದ ಅಪಘಾತದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅಮಿತಾಬ್ ಗೆ ರಕ್ತದ ಅಗತ್ಯವಿತ್ತು. ಅಂದು ಅಮಿತಾಬ್ ಗೆ ವ್ಯಕ್ತಿಯೊಬ್ಬರ ರಕ್ತ ಪಡೆದು ಸೇರಿಸಲಾಗಿತ್ತು. ಆತನಿಗೆ ಹೆಪಟೈಟಿಸ್ ಬಿ ಇದ್ದ ಕಾರಣ ಆ ಸೋಂಕು ಅಮಿತಾಬ್ ಗೂ ತಗುಲಿತ್ತು. ಇದರಿಂದಾಗಿ ಅವರ ಲಿವರ್ ಗೆ ತುಂಬಾ ಹಾನಿಯಾಗಿತ್ತು ಎನ್ನಲಾಗಿದೆ.

Advertisement

ಈ ಎಲ್ಲಾ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಅಮಿತಾಬ್ ಇದೀಗ ದಿಢೀರ್ ಆಗಿ ಒಂದು ಸಾಲಿನಲ್ಲಿ ಅನಾರೋಗ್ಯ…ಸರ್ಜರಿ…ಹಾಗಾಗಿ ಬರೆಯಲು ಸಾಧ್ಯವಾಗುತ್ತಿಲ್ಲ ಎಂದಷ್ಟೇ ಹೇಳಿರುವುದು ಅಭಿಮಾನಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಬಿಗ್ ಬಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆಯೇ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆಯೇ? ಯಾವ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ? ಎಂಬ ಹಲವು ಪ್ರಶ್ನೆ ಮೂಡುತ್ತಿದೆ. ಇದೆಲ್ಲದರ ನಡುವೆ ಅಭಿಮಾನಿಗಳು ಬಿಗ್ ಬಿ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

Advertisement

ಅಂದಹಾಗೇ ಬಿಗ್ ಬಿ ಅಮಿತಾಬ್ ಬಚ್ಚನ್ ಅಜಯ್ ದೇವಗನ್ ಅಭಿನಯದ ಮೇ ಡೇ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಚಿತ್ರದ ಶೂಟಿಂಗ್ ಸೆಟ್ ನ ಕೆಲ ಫೋಟೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಅಲ್ಲದೇ ತಮ್ಮ ಮುಂದಿನ ಚಿತ್ರಗಳಾದ ಚಹ್ರೆ ಮತ್ತು ಝಂಡ್ ಚಿತ್ರಗಳ ಬಿಡುಗಡೆ ದಿನಾಂಕಗಳನ್ನೂ ತಿಳಿಸಿದ್ದರು.

Advertisement