ಒಂದು ವರ್ಷದ ನಂತರ ಪ್ರೇಕ್ಷಕರಿಗೆ ‘ ಹೂಮಳೆ ‘ ಸುರಿಸಲಿದ್ದಾರೆ ಬಿಗ್ ಬಾಸ್ ಸ್ಪರ್ಧಿ ಚಂದನ ಅನಂತಕೃಷ್ಣ!

in ಮನರಂಜನೆ/ಸಿನಿಮಾ 664 views

ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಮುದ್ದಾದ ಮಾತು,ನಡವಳಿಕೆ,ಹಾಡಿನಿಂದ,ಗಮನ ಸೆಳೆದಿದ್ದ ನಟಿ ಚಂದನ ಅನಂತಕೃಷ್ಣ.ಬಿಗ್ ಬಾಸ್ ನಂತರ ಅವರು ಹೊಸ ಹೊಸ ಪ್ರಾಜೆಕ್ಟಗಳಲ್ಲಿ ಬ್ಯುಸಿಯಾಗಿದ್ದಾರೆ.ಹಾಗೆ ನಟಿ ಚಂದನ ಅನಂತಕೃಷ್ಣ ಅವರು ಈಗ ಧಾರವಾಹಿಗೆ ಮತ್ತೆ ಮರಳಿ ಬಂದಿದ್ದಾರೆ.ಈ ಹಿಂದೆ ‘ ರಾಜ – ರಾಣಿ ‘ಧಾರಾವಾಹಿಯಲ್ಲಿ ಚುಕ್ಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಂದನ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ ನಂತರ ‘ ಹಾಡು ಕರ್ನಾಟಕ ‘ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಬಡ್ತಿ ಪಡೆದರು.ಈಗ ಅವರು ಒಂದು ವರ್ಷದ ನಂತರದಲ್ಲಿ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.ನಿಮಗೆಲ್ಲರಿಗೂ ಕೂತುಹಲಗಳಿರಬಹುದು ಯಾವುದು ಆ ಧಾರಾವಾಹಿ ಎಂದು.
ಚಂದನ ಅವರು “ಹೂಮಳೆ” ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.ಇವರು ಈ ಧಾರಾವಾಹಿಯಲ್ಲಿ ಲಹರಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ.ಇದರಲ್ಲಿ ಇವರದ್ದು ಚುಕ್ಕಿ ಪಾತ್ರಕ್ಕಿಂತ ವಿಭಿನ್ನವಾದ ಪಾತ್ರ.ಇದು ಫ್ಯಾಮಿಲಿ ಆಧಾರಿತ ಧಾರಾವಾಹಿಯಾಗಿದೆ.ಈ ಧಾರಾವಾಹಿಯಲ್ಲಿ ಮನೆ ತುಂಬಾ ಜನರಿರುತ್ತಾರೆ.ಇವರ ಜೊತೆಯಾಗಿ ನಟ ಯಶವಂತ್ ಯದುವೀರ್ ಪಾತ್ರವನ್ನು ಮಾಡುತ್ತಿದ್ದಾರೆ.ಇದಕ್ಕೂ ಮೊದಲು ಇವರು ‘ ಇವಳು ಸುಜಾತ ‘ ಎಂಬ ಧಾರಾವಾಹಿಯಲ್ಲಿ ನಟಿಸಿದ್ದಾರೆ.ಬಿಗ್ ಬಾಸ್ ಸೀಸನ್ 7 ರ ಖ್ಯಾತಿಯ ಸುಜಾತ ಅವರು ಈ ಧಾರಾವಾಹಿಯಲ್ಲಿ ಚಂದನ ಅವರ ತಾಯಿಯ ಪಾತ್ರವನ್ನು ಮಾಡುತ್ತಿದ್ದಾರೆ.ಈ ಧಾರಾವಾಹಿಯಲ್ಲಿ ಹೆಚ್ಚಾಗಿ ಹೊಸ ಪ್ರತಿಭೆಗಳ ತಾರ ಬಳಗವಿದೆ.

Advertisement


ಇವರು ಸಿನಿಮಾದಲ್ಲಿ ಆಸಕ್ತಿ ಇದೆಯಂತೆ ಸಾಕಷ್ಟು ಸಿನಿಮಾ ಆಫರ್ಗಳು ಬಂದರೂ ಕೊರೋನಾ ಟೈಮ್ ಅಲ್ಲಿ ಸಿನಿಮಾ ಮಾಡೋದು ಬೇಡ ಅಂತ ಸುಮ್ಮನೆ ಆದ್ರಂತೆ.ಸಿನಿಮಾ ಮಾಡಬೇಕು ಅಂತ ನಾನು ಸಿನಿಮಾ ಮಾಡುವಂತಾಗ ಬಾರದು ನಮ್ಮ ಸಿನಿಮಾವನ್ನು ಜನರು ಬಂದು ನೋಡ ಬೇಕು ಮತ್ತು ಹೊಸ ಪ್ರತಿಭೆಯನ್ನು ಪ್ರೋತ್ಸಾಹಿಸುವಂತಿರಬೇಕು ಎಂದು ಚಂದನ ಅವರು ಹೇಳುತ್ತಾರೆ.ಹೊಸಬರ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇದೆ ಎಂದಿದ್ದಾರೆ.

Advertisement

ಹೊಸಬರ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇದೆ ಎಂದಿದ್ದಾರೆ.ಮುಂದಿನ ವರ್ಷ ಖಂಡಿತವಾಗಿಯೂ ನಾನು ಸಿನಿಮಾವನ್ನು ಮಾಡುತ್ತೇನೆಂದು ಹೇಳಿದ್ದಾರೆ.ಇದರ ಜೊತೆಗೆ ತಮಿಳು ಪ್ರೊಜೆಕ್ಟ್ ಒಂದನ್ನು ಒಪ್ಪಿಕೊಂಡಿದ್ದಾರಂತೆ. ಆದರೆ ಇದರ ಕೆಲಸಗಳು ಬಾಕಿಯಿದೆ.ಸದ್ಯ ಸೀರಿಯಲ್ ಕಡೆಗೆ ಗಮನ ಕೊಡುತ್ತಾರಂತೆ.ಮುದ್ದು ಮುದ್ದಾದ ನಟನೆಯ ಮೂಲಕ ಎಲ್ಲರ ಗಮನ ಸೆಳೆಯುವ ಈ ನಟಿ ನೋಡಲು ಕೂಡಾ ಅಷ್ಟೆ ಮುದ್ದಾಗಿದ್ದಾರೆ.ವಯಸ್ಸಿನಲ್ಲಿ ಚಿಕ್ಕವರದರೂ ಆಸೆ ಎಂಬ ನದಿಗೆ ಯಾವುದೇ ಮಿತಿಯಿಲ್ಲದ ರೀತಿ ಇವರ ಆಸಕ್ತಿ ಮತ್ತು ಆಸೆಗಳು ಇವೆ.ಇವರ ಸಿನೆಮಾ ರಂಗದ ಕನಸು ಬಹುಬೇಗ ನೆರವೇರಲಿ.

Advertisement

Advertisement

ಇದಲ್ಲದೇ ಒಂದೆರಡು ಸಿನಿಮಾಗಳಿಗೆ ಹಾಡುವ ಅವಕಾಶ ಬಂದಿದೆ ಡಾನ್ಸ್ ಪರ್ಫಾರ್ಮೆನ್ಸ್ ನೀಡಲು ಕೂಡಾ ಅವರಿಗೆ ಆಫರ್ ಬರುತ್ತಿದಿಯಂತೆ.ನಟನೆಯ ಜೊತೆಗೆ ನೃತ್ಯ ಹಾಗೂ ಸಂಗೀತ ಅವರ ಹವ್ಯಾಸಗಳಾಗಿವೆ .ಇವರ ಮ್ಯೂಸಿಕ್ ವಿಡಿಯೋಗಳು,ಫೋಟೋ ಶೂಟ್ಗಳು ನಡೆಯುತ್ತಿವೆ.ಒಟ್ಟಾರೆಯಾಗಿ ಬ್ಯುಸಿಯಾಗಿದ್ದಾರೆ.ಈಗಾಗಲೇ ” ಹೂ ಮಳೆ” ಧಾರಾವಾಹಿಯ ಪ್ರೋಮೋ ರಿಲೀಜ್ ಆಗಿದ್ದು,ನೋಡುಗರಲ್ಲಿ ಕುತೂಹಲ ಮೂಡಿಸಿದೆ. ಎಪಿಸೋಡ್ಗಳ ಶೂಟಿಂಗ್ ಕೂಡಾ ಆಗಿದ್ದು, ಯಾವಾಗಿನಿಂದ ಈ ಧಾರಾವಾಹಿ ಪ್ರಸಾರವಾಗಲಿದೆ ಎಂದು ಕಾದುನೋಡಬೇಕಾಗಿದೆ…..

Advertisement
Share this on...