ಕಡೆಗೂ ಔಟ್ ಆಯ್ತು ಬಿಗ್ ಬಾಸ್ ಸಿಸನ್ -9 ಸ್ಪರ್ಧಿಗಳ ಲಿಸ್ಟ್ ; ಯಾರ‍್ಯಾರು ದೊಡ್ಮನೆ ಸೇರಲಿದ್ದಾರೆ ಗೊತ್ತಾ?

in ಮನರಂಜನೆ 131 views

ವಾಹಿನಿಗಳಿಗೆ ಟಿಆರ್‌ಪಿ ಮಾನದಂಡ ಆರಂಭವಾದ ದಿನದಿಂದ ಪೈಪೋಟಿಯೂ ಆರಂಭಗೊಂಡಿದೆ. ಹಾಗಾಗಿ ಒಂದು ವಾಹಿನಿಗಿಂತ ಇನ್ನೊಂದು ವಾಹಿನಿ ವಿಭಿನ್ನ ರಿಯಾಲಿಟಿ ಶೋಗಳನ್ನು ಆರಂಭಿಸುತ್ತಿವೆ. ಕೆಲವೊಂದು ರಿಯಾಲಿಟಿ ಶೋ ಹಿಟ್ ಆದರೆ ಇನ್ನು ಕೆಲವೊಂದು ರಿಯಾಲಿಟಿ ಶೋಗಳು ಕೈಕೊಟ್ಟಿವೆ. ಹೀಗೆ ಹಿಟ್ ಆದ ರಿಯಾಲಿಟಿ ಶೋಗಳನ್ನು ಬೇರೆ ಬೇರೆ ಸಿಸನ್ ಹೆಸರಿನಲ್ಲಿ ಪ್ರತಿ ವರ್ಷ ಕಾರ‍್ಯಕ್ರಮ ನಡೆಸುತ್ತಿವೆ. ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ, ಕಾಮಿಡಿ ಕಿಲಾಡಿಗಳು ಹಿಟ್ ಆಗಿವೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕಿಸ್, ಬಿಗ್ ಬಾಸ್ ಕಾರ‍್ಯಕ್ರಮಗಳು ವಾಹಿನಿಗೆ ಉತ್ತಮ ಟಿಆರ್‌ಪಿ ತಂದುಕೊಟ್ಟಿವೆ. ಅದರಲ್ಲೂ ಬಿಗ್ ಬಾಸ್ ಕಾರ‍್ಯಕ್ರಮ ಬಹಳ ವಿಭಿನ್ನ ಕಾನ್ಸೆಪ್ಟ್ ಇರುವುದರಿಂದ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಆಗಿ ಹೊರಹೊಮ್ಮಿದೆ.

Advertisement


ಬಿಗ್ ಬಾಸ್ ರಿಯಾಲಿಟಿ ಶೊ ದೊಡ್ಡ ಬಜೆಟ್ ಬಯಸುವ ರಿಯಾಲಿಟಿ ಶೋ. ೧೮ ಜನ ಸ್ಪರ್ಧಿಗಳು ೧೦೦ ದಿನಗಳ ಕಾಲ ಒಂದೇ ಮನೆಯಲ್ಲಿ ಇರಬೇಕಾಗುತ್ತದೆ. ಅವರಿಗೆ ಆಯೋಜಕರು ವಿವಿಧ ರೀತಿಯ ಟಾಸ್ಕ್‌ಗಳನ್ನು ನೀಡುತ್ತಾರೆ. ಅದರಲ್ಲಿ ಸ್ಪರ್ಧಿಗಳು ಯಾವ ರೀತಿ ಭಾಗವಹಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಅಲ್ಲದೆ ಸ್ಪರ್ಧಿಗಳ ವರ್ತನೆ, ಮನರಂಜನೆ ನೀಡುವ ರೀತಿ ಎಲ್ಲಕ್ಕಿಂತ ಮುಖ್ಯವಾಗಿ ವೀಕ್ಷಕರು ಮಾಡುವ ಓಟ್ ಸ್ಪರ್ಧಿಗಳ ಗೆಲವಿಗೆ ಮುಖ್ಯವಾಗುತ್ತದೆ. ಹಾಗಾಗಿ ಸ್ಪರ್ಧಿಗಳು ಓಟಿಗಾಗಿ ಎಲ್ಲ ರೀತಿಯ ಟಾಸ್ಕ್‌ಗಳನ್ನು, ವೀಕ್ಷಕರಿಗೆ ಮನರಂಜನೆಯನ್ನು ನೀಡಬೇಕಾಗುತ್ತದೆ. ಹೆಚ್ಚಿನದಾಗಿ ಕಲಾವಿದರನ್ನೇ ಆಯ್ಕೆ ಮಾಡಿ ಬಿಗ್ ಬಾಸ್ ಮನೆಯ ಒಳಗಡೆ ಕಳುಹಿಸಲಾಗುತ್ತದೆ.

Advertisement

Advertisement

ಬಿಗ್ ಬಾಸ್ ಕನ್ನಡದಲ್ಲಿ ಈಗಾಗಲೇ ೮ ಸೀಸನ್‌ಗಳನ್ನು ಮುಗಿಸಿದೆ. ೮ ಸೀಸನ್‌ಗಳನ್ನು ನಿರೂಪಿಸಿದ್ದು ನಮ್ಮ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರು. ಕಿಚ್ಚ ಸುದೀಪ್ ಅವರ ನಿರೂಪಣೆ ಸಹ ಈ ರಿಯಾಲಿಟಿ ಶೋಗೆ ಪ್ಲಸ್ ಪಾಯಿಂಟ್ ಎನ್ನುವದರಲ್ಲಿ ಎರಡನೇ ಮಾತಿಲ್ಲ. ಅವರು ಸ್ಪರ್ಧಿಗಳಿಗೆ ಕಿವಿಮಾತು ಹೇಳುವ ರೀತಿ, ಸ್ಪರ್ಧಿಗಳನ್ನು ಹುರಿದುಂಬಿಸುವ ರೀತಿ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.

Advertisement

ಪ್ರತಿವರ್ಷವೂ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗುತ್ತದೆ ಎಂಬ ಸುದ್ದಿ ಹೊರಬಿದ್ದಾಗ ವೀಕ್ಷಕರಲ್ಲಿ ಕುತೂಹಲ ಆರಂಭವಾಗುತ್ತದೆ. ಈ ಬಾರಿ ಬಿಗ್ ಬಾಸ್ ಮನೆಯ ಒಳಗೆ ಯಾರೆಲ್ಲ ಸ್ಪರ್ಧಿಗಳಾಗಿ ಹೋಗುತ್ತಿದ್ದಾರೆ ಎನ್ನುವುದು. ಈ ಬಾರಿ ಯಾವೆಲ್ಲ ಟಾಸ್ಕ್‌ಗಳನ್ನು ನೀಡಬಹುದು? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗುತ್ತದೆ. ಈ ಬಾರಿಯೂ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಲಿದ್ದಾರೆ. ಕಿರುತೆರೆ, ಬೆಳ್ಳಿತೆರೆ, ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆದವರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗುತ್ತದೆ.

ಈ ಬಾರಿ ಬಿಗ್ ಬಾಸ್ ಆಯೋಜಕರ ಲಿಸ್ಟ್‌ನಲ್ಲಿ ಇರುವ ಹೆಸರುಗಳೆಂದರೆ ಕನ್ನಡ ರ‍್ಯಾಪರ್ ಆಲ್ ಒಕೆ, ನಟ ಚೇತನ್, ಸಾಮಾಜಿಕ ಕಾರ್ಯಕರ್ತೆಯಾದ ನಜ್ಮಾ ಚಿಕ್ಕನೇರಳೆ, ನಿರೂಪಕಿ ದಿವ್ಯಾವಸಂತ್, ಸೋನು ಶ್ರೀನಿವಾಸ್ ಗೌಡ, ಮಜಾಭಾರತ ಖ್ಯಾತಿಯ ರಾಘವೇಂದ್ರ ಆಯ್ಕೆ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನುಳಿದಂತೆ ಲಾಯರ್ ಜಗದೀಶ್, ಅಲ್ಲದೆ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಯ ಕಲಾವಿದರಲ್ಲಿ ಒಬ್ಬಿಬ್ಬರು ಬಿಗ್ ಬಾಸ್ ಮನೆಯೊಳಗೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆ ಕಳೆದ ಸಿಸನ್‌ಗಿಂತ ಹೆಚ್ಚು ರಂಗುರಂಗಾಗಿಯೂ, ವಿವಾದಾತ್ಮಕವಾಗಿಯೂ ಕಾಣಿಸಿಕೊಳ್ಳಬಹುದು.

Advertisement
Share this on...