ಬಿಗ್ ಬಾಸ್ ಚೈತ್ರ ಕೊಟ್ಟೂರು ಈಗ ವಿ’ಲನ್ …!

in ಮನರಂಜನೆ/ಸಿನಿಮಾ 165 views

ಚೈತ್ರ ಕೊಟ್ಟೂರು ಎಲ್ಲರಿಗೂ ತಿಳಿದ ಹಾಗೆ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿ ಆಗಿ ಹೋಗಿದ್ದರು. ಇವರು ನವೆಂಬರ್ 09 1993 ರಲ್ಲಿ ಕರ್ನಾಟಕದ ಮಂಗಳೂರು ನಗರದ ಬಳಿಯ ಒಂದು ಹಳ್ಳಿಯಲ್ಲಿ ಹುಟ್ಟಿದರು. ಅಲ್ಲಿಂದ ಚೈತ್ರ ಕೊಟ್ಟೂರು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.ಅಲ್ಲಿಯ ತನಕ ಇವರು ಅಷ್ಟು ಜನರಿಗೆ ಗೊತ್ತಿರಲಿಲ್ಲ.ಇವರಿಗೆ ಚಿಕ್ಕ ವಯಸ್ಸಿನಲ್ಲೇ ಕಥೆಗಳನ್ನು ಬರೆಯುವ ಹವ್ಯಾಸ ಇತ್ತು.ಹಾಗಾಗಿ ಈ ಇವರು ಚಿಕ್ಕ ವಯಸ್ಸಿನಿಂದ ಆ ಹವ್ಯಾಸವನ್ನು ಮುಂದುವರೆಸುತ್ತಾ ಬಂದರು.ಇವರು ಒಂದು ಹಳ್ಳಿಯಲ್ಲಿ ಮದ್ಯಮ ವರ್ಗದ ಕುಟುಂಬದಲ್ಲಿ ಇವರ ಜನನವಾಯಿತು.ಇವರು ತಮ್ಮ ಪದವಿ ಸಮಯದಲ್ಲಿ ಕಾಲ್ಪನಿಕ ಕಥೆಗಳನ್ನು ಆರಿಸಿಕೊಂಡು ಮತ್ತು ಚಲನಚಿತ್ರ ಸ್ಕ್ರಿಪ್ಟನ್ನು ತಯಾರಿಸಿದರು ಮತ್ತು ಅದು ಕಾಲೇಜ್ ಅಲ್ಲಿ ತುಂಬಾ ಜನಪ್ರಿಯವಾಯಿತು.ನಂತರ ಇವರು ಪದವಿ ಮುಗಿದ ನಂತರ ಬೆಂಗಳೂರಿನಲ್ಲಿ ನೆಲಸಿದ ಅವರು ಕನ್ನಡ ಮೂಲದ ಕಥೆಗಾರರ ಅಡಿಯಲ್ಲಿ ಕೆಲಸ ಮಾಡಲು ಶುರಮಾಡಿದರು.2019 ರಲ್ಲಿ ಚೈತ್ರ ಕೊಟ್ಟೂರು ಕನ್ನಡ ಭಾಷೆಯ ಚಿತ್ರವೊಂದರಲ್ಲಿ ನಟಿಸಿದರು.

Advertisement


ಈಗ ಇವರು ಕಲರ್ಸ್ ಕನ್ನಡ ಚಾನಲ್ ಅಲ್ಲಿ ಪ್ರಸಾರ ಆಗುತ್ತಿರುವ ” ಲಗ್ನ ಪತ್ರಿಕೆ ” ಎಂಬ ಧಾರಾವಾಹಿಯಲ್ಲಿ ಪ್ರಸ್ತುತ ಪಾತ್ರವನ್ನು ಮಾಡುತ್ತಿದ್ದಾರೆ.ಇದೊಂದು ಡಿಫರೆಂಟ್ ಕಥೆ ಆಗಿದ್ದು.ಈ ಧಾರಾವಾಹಿಯ ಕಥಾನಾಯಕ ಹಾಗೂ ಕಥಾನಾಯಕಿ ಮದುವೆ ಮಾಡಲು ಮನೆಯವರು ತಯಾರಿ ಮಾಡಿಕೊಳ್ಳುತ್ತಿದ್ದರೆ, ಇವರು ಮದುವೆಯನ್ನು ಹೇಗೆ ಮುರಿಯಬೇಕೆಂದು ಯೋಚನೆ ಮಾಡುತ್ತಿರುತ್ತಾರೆ.ಈ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ರಾತ್ರಿ 10 ಗಂಟೆಗೆ ಪ್ರತಿದಿನ ಪ್ರಸಾರ ಆಗುತ್ತಿದೆ.ಇದರಲ್ಲಿ ಇವರದು ವಿಲ್ಲನ್ ಪಾತ್ರ.ಇದರಲ್ಲಿ ಇವರು ತೆರೆಯ ಮೇಲೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.ತನ್ನ ಕಾಲ ಮೇಲೆ ನಿಲ್ಲೋಕೆ ಬಯಸುವ ಹುಡುಗಿ ಮಯೂರಿ,ಎಲ್ಲರಿಗೂ ಸಹಾಯ ಮಾಡುವ ದೊಡ್ಡ ಮನಸಿನ ಹುಡುಗಿ.ಎಲ್ಲರಿಗೂ ಇಷ್ಟ ಆಗುವಂತೆ ಪಟ್ ಪಟ್ ಮಾತಾಡುವ ಮೃದು ಮನಸಿನ ಹುಡುಗಿ ಏನಾದರೂ ಕೆಲಸ ಮಾಡಿ ತನ್ನ ಕಾಲ ಮೇಲೆ ನಿಲ್ಲ ಬೇಕೆಂಬ ಆಸೆ ಪಡುವ ಹುಡುಗಿ.

Advertisement


ಆದರೆ ಇವಳಿಗೆ ಮತ್ತೆ ಶಶಾಂಕ್ ಜೊತೆ ಮನೆಯವರೆಲ್ಲ ಸೇರಿ ಮದುವೆ ಮಾಡಲು ಹೊರಟಿದ್ದಾರೆ.ಈ ಹಿಂದೆ ಕೂಡಾ ಕೆಲ ಧಾರವಾಹಿಯಲ್ಲಿ ಚೈತ್ರ ಕೊಟ್ಟೂರು ಅಭಿನಯಿಸಿದ್ದಾರೆ.ಹಾಗಾಗಿ ಕಿರುತೆರೆ ಅವರಿಗೆ ಹೊಸದೇನಲ್ಲ ಎನ್ನುತ್ತಾರೆ ಅವರು.ಒಟ್ಟಾರೆಯಾಗಿ ಚೈತ್ರ ಕೊಟ್ಟೂರು ಅವರು ಬಿಗ್ ಬಾಸ್ ನಂತರ ಫುಲ್ ಬ್ಯುಸಿ ಆಗಿರುವುದಂತು ನಿಜ. ಇಡೀ ಧಾರವಾಹಿಯಲ್ಲಿ ನಮಿತಾ ಎಂಬ ನೆಗಟಿವ್ ಶೇಡ್ ಅಲ್ಲಿ ಕಾಣಿಸಿಕೊಂಡಿದ್ದಾರೆ.ಮಾಡರ್ನ್ ಸಂಸ್ಕೃತಿ,ಆಚಾರ ವಿಚಾರಕ್ಕೆ ಬೆಲೆ ಕೊಡುವವಳಿಗೆ ತಾನಾಯ್ತು,ತನ್ನ ಸುಖ ಆಯ್ತು ಅಂತ ಇರುವ ಪಾತ್ರ ಇವರದು.ಬೇರೆಯವರ ಸಮಸ್ಯೆಗಳ ಬಗ್ಗೆ ಸ್ವಲ್ಪವೂ ಗಮನ ಕೊಡುವುದಿಲ್ಲ.ಇವರು ಇವರ ಅಭಿನಯವನ್ನು ಮತ್ತು ಇವರ ಸಾಮರ್ಥ್ಯವನ್ನು ಎಲ್ಲರಿಗೂ ತೋರಿಸಬೇಕೆಂಬ ಹಂಬಲ ಇವರದು.ಬೇರೆ ಧಾರಾವಾಹಿಗೆ ಹೋಲಿಸಿದರೆ ಈ ಧಾರಾವಾಹಿ ವಿಭಿನ್ನ ಆಗಿದೆ ಎನ್ನುತ್ತಾರೆ.ಸ್ವಲ್ಪ ನಿಜ ಜೀವನಕ್ಕೆ ಹತ್ತಿರವಾದ ಸಂಗತಿ ಎನ್ನುತ್ತಾರೆ.

Advertisement

ವಿಭಿನ್ನ ವಿಚಾರ ಧಾರೆ ಹೊಂದಿರುವ ಚೈತ್ರ ಕೊಟ್ಟೂರು ಅವರು  ಆದ “ಶಾಂತಂ ಪಾಪಂ” ಅಲ್ಲೂ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.ಬಿಗ್ ಬಾಸ್ ನಂತರ ಇವರಿಗೆ ಸಾಕಷ್ಟು ಅವಕಾಶಗಳು ಒದಗಿ ಬಂದಿದ್ದವು ಎಂದು ಇವರು ಹೇಳುತ್ತಾರೆ.ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕರೆ ಬೆಳ್ಳಿತೆರೆಗೆ ಹೋಗುವ ಆಸೆ ಇದೆ ಎನ್ನುತ್ತಾರೆ.

Advertisement

Advertisement
Share this on...