ಹಳ್ಳಿ ಮೇಷ್ಟ್ರು ಚಿತ್ರದ ನಟಿ ಈಗ ಹೇಗಿದ್ದಾರೆ ಗೊತ್ತಾ…? ರವಿಚಂದ್ರನ್ ಬಳಿ ಕ್ಷಮೆ ಕೇಳಿದ್ದುದ್ಯಾಕೆ ಗೊತ್ತಾ?

in ಮನರಂಜನೆ 816 views

ಜಾನ್ ತೇರೆ ನಾಮ್ ಎಂಬ ಬಾಲಿವುಡ್ ಚಿತ್ರದಿಂದ ಫೇಮಸ್ ಆದ ನಟಿ ಫರಿನ್. ಈ ನಟಿಯ ಇನ್ನೊಂದು ಕನ್ನಡದ ಹೆಸರು ಬಿಂದಿಯಾ. ನೋಡಲು ಸೇಮ್ ಟು ಸೇಮ್ ಬಾಲಿವುಡ್ ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅಂತೆಯೇ ಇದ್ದ ಇವರನ್ನು ಕ್ರೇಜಿ಼ ಸ್ಟಾರ್ ರವಿಚಂದ್ರನ್ ರವರು ತಮ್ಮ ಹಳ್ಳಿ ಮೇಷ್ಟ್ರು ಚಿತ್ರಕ್ಕೆ ಹೀರೋಯಿನ್ ಆಗಿ ಕರೆತಂದರು.
ತಮ್ಮ ಹಳ್ಳಿ ಮೇಷ್ಟ್ರು ಚಿತ್ರಕ್ಕೆ ಹೀರೋಯಿನ್ ಹುಡುಕಾಟದಲ್ಲಿದ್ದಾಗ ಫರಿನ್ ಅವರು ಕಣ್ಣಿಗೆ ಬಿದ್ದರು. ಫರಿನ್ ರವರು ನಟಿ ಮಾಧುರಿ ದೀಕ್ಷಿತ್ ರಂತೆಯೇ ಹೋಲುತ್ತಿದ್ದುದರಿಂದ ತಮ್ಮ ಹಳ್ಳಿ ಮೇಷ್ಟ್ರು ಚಿತ್ರಕ್ಕೆ ಆಯ್ಕೆ ಮಾಡಿದರು. ಹಳ್ಳಿ ಮೇಷ್ಟ್ರು ಚಿತ್ರಕ್ಕೆ ಈಕೆಯ ಹೆಸರನ್ನು ಕನ್ನಡದಲ್ಲಿ ಬಿಂದಿಯಾ ಎಂದು ಬದಲಾಯಿಸಿದರು. ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ತುಂಬಾ ನ್ಯಾಚುರಲ್ ಆಗಿ ನಟಿಸಿದ್ದರು ನಟಿ ಬಿಂದಿಯಾ. ಅಪ್ಪಟ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿ ಬಿಂದಿಯಾ ಮಿಂಚಿದ್ದರು. ರವಿಚಂದ್ರನ್ ರವರ ಆಯ್ಕೆಯೂ ಸೂಕ್ತವಾಗಿತ್ತು.

Advertisement

 

Advertisement


ಆದರೆ ಹಳ್ಳಿ ಮೇಷ್ಟ್ರು ಚಿತ್ರದ ಚಿತ್ರೀಕರಣದ ನಂತರ ನಟಿ ಬಿಂದ್ಯಾ ಶೂಟಿಂಗ್ ಸೆಟ್ ನಲ್ಲಿ ತುಂಬಾ ಕಿರಿಕ್ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದವು.  ನಟಿ ಬಿಂದಿಯಾರವರು ರವಿಚಂದ್ರನ್ ರವರ ಮೇಲು ಗಂಭೀರವಾದ ಆರೋಪವನ್ನು ಮಾಡಿ ಬಿಟ್ಟಿದ್ದರು. ರವಿಚಂದ್ರನ್ ರವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದರು ಎಂದು ದೊಡ್ಡ ಆರೋಪ ಮಾಡಿದ್ದರು. ಈಕೆಯ ಆರೋಪದಿಂದ ತಲೆಯೆತ್ತಿ ಓಡಾಡುವುದು ಹೇಗೆ ಎಂದು ಯೋಚನೆ ಮಾಡಿದ ರವಿಚಂದ್ರನ್ ನ್ಯಾಯಾಲಯದಲ್ಲಿ ಬಿಂದಿಯಾ ಮೇಲೆ ಒಂದು ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಂತರ ತೀರ್ಪು ರವಿಚಂದ್ರನ್ ರವರ ಪರವಾಗಿ ಬಂತು. ಇನ್ನು ಬಿಂದಿಯಾ ಕೋರ್ಟ್ ನಲ್ಲಿ ಎಲ್ಲರ ಮುಂದೆಯೇ ರವಿಚಂದ್ರನ್ ರವರ ಬಳಿ ಕ್ಷಮೆ ಕೇಳಿದರು.

Advertisement

 

Advertisement


ನಂತರದ ದಿನಗಳಲ್ಲಿ ಬಿಂದ್ಯಾರವರಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಲಭಿಸಲಿಲ್ಲ. ‘ರಾಯರು ಬಂದರು ಮಾವನ ಮನೆಗೆ’ ಚಿತ್ರದಲ್ಲಿ ವಿಷ್ಣುವರ್ಧನ್ ರವರ ಜೊತೆ ನಟಿಸಿದ್ದು ಬಿಟ್ಟರೆ ಮತ್ಯಾವ ಚಿತ್ರದಲ್ಲಿ ನಟಿ ಫರಿನ್ ನಟಿಸಲಿಲ್ಲ. ಅತ್ತ ಬಾಲಿವುಡ್ ನಲ್ಲೂ ಈ ನಟಿಗೆ ಅವಕಾಶಗಳು ಸಿಗಲಿಲ್ಲ. ಇನ್ನೂ ಇದೇ ವೇಳೆಯಲ್ಲಿ ಅದಾಗಲೇ ಮದುವೆಯಾಗಿದ್ದ ಭಾರತೀಯ ಖ್ಯಾತ ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನು ಪ್ರೀತಿಸಿದ್ದರು. ನಂತರ ಮನೋಜ್ ಪ್ರಭಾಕರ್ ರವರು ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿ ನಟಿ ಫರಿನ್ ರವರನ್ನು ಮದುವೆಯಾದರು. ಈಗ ಫರಿನ್ ರವರು ತಮ್ಮ ಪತಿ ಹಾಗೂ ಇಬ್ಬರು ಮಕ್ಕಳ ಜೊತೆ ದೆಹಲಿಯಲ್ಲಿ ವಾಸವಾಗಿದ್ದು ನೆಮ್ಮದಿ ಜೀವನ ನಡೆಸುತ್ತಿದ್ದಾರೆ.

– ಸುಷ್ಮಿತಾ

Advertisement
Share this on...