ಬಿಜೆಪಿ ಪಾಳಯದಲ್ಲೇ ಬಂಡಾಯ: ಯಡಿಯೂರಪ್ಪ ಬಹಳ ದಿನ ಅಧಿಕಾರದಲ್ಲಿ ಇರಲ್ಲ ಎಂದ ಬಿಎಸ್ ವೈ ಆಪ್ತ..! - Namma Kannada Suddi

ಬಿಜೆಪಿ ಪಾಳಯದಲ್ಲೇ ಬಂಡಾಯ: ಯಡಿಯೂರಪ್ಪ ಬಹಳ ದಿನ ಅಧಿಕಾರದಲ್ಲಿ ಇರಲ್ಲ ಎಂದ ಬಿಎಸ್ ವೈ ಆಪ್ತ..!

in ರಾಜಕೀಯ 156 views

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಮತ್ತೆ ಮತ್ತೆ ಸಾಭೀತಾಗ್ತಿದೆ.ಇದೀಗ ಉತ್ತರ ಕರ್ನಾಟಕ ಶಾಸಕ, ಬಿ ಎಸ್ ಯಡಿಯೂರಪ್ಪ ಆಪ್ತ ಯಡಿಯೂರಪ್ಪ ಕೇಂದ್ರಕ್ಕೂ ಸಾಕಾಗಿದ್ದಾರೆ, ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಉತ್ತರ ಕರ್ನಾಟಕ ಪ್ರವಾಹಕ್ಕೆ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡದ ಕುರಿತು ಸ್ವತಃ ಉತ್ತರ ಕರ್ನಾಟಕ ಶಾಸಕರೇ ಬಂಡಾಯ ಎದ್ದಿದ್ದಾರೆ. ಬಹಿರಂಗವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ನಗರದಲ್ಲಿ ಸೋಮವಾರ ರಾತ್ರಿ ಹಣಮಂತ ದೇವ್ಥಾನದ ಕಾಂಪೌಂಡ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ, ಶಾಸಕ ಯತ್ನಾಳ್, ಮಾಜಿ ಕಾರ್ಪೋರೇಟರ್ ಉಮೇಶ ವಂದಾಲ, ಭಾಗಿಯಾಗಿದ್ದರು.
ಈ ವೇಳೆ ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೋರೇಟರ್ ಉಮೇಶ ವಂದಾಲ ವಿಜಯಪುರಕ್ಕೆ ಬಂದಿದ್ದ ರೂ. 125 ಕೋ. ಅನುದಾನವನ್ನು ಸರಕಾರ ವಾಪಸ್ ಪಡೆದಿದ್ದನ್ನು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಉಮೇಶ ವಂದಾಲ ಆಡಿದ ಮಾತನ್ನು ಪ್ರಸ್ತಾಪಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್, ವಿಜಯಪುರಕ್ಕೆ ಬಂದಿದ್ದ ರೂ. 125 ಕೋ. ಅನುದಾನವನ್ನು ಸಿಎಂ ಹಿಂದಕ್ಕೆ ಪಡೆದಿದ್ದಾರೆ. ಸಿಎಂ ಅನುದಾನವನ್ನು ಬರೀ ಶಿವಮೊಗ್ಗಕ್ಕೆ ಒಯ್ಯುತ್ತಿದ್ದಾರೆ. ಇನ್ನೇನು ಅವರು ಬಹಳ ದಿವಸ ಅಧಿಕಾರದಲ್ಲಿ ಇರುವುದಿಲ್ಲ. ಮೇಲಿನವರಿಗೂ ಯಡಿಯೂರಪ್ಪ ಸಾಕಾಗಿದ್ದಾರೆ. ಎಂದು ಹೊಸ ಬಾಂ’ಬ್ ಸಿ’ಡಿ’ಸಿದ್ದಾರೆ.

Advertisement

Advertisement

ವಿಜಯಪುರ ಅನುದಾನವನ್ನು ಶಿವಮೊಗ್ಗಕ್ಕೆ ಒಯ್ಯುತ್ತಿದ್ದಾರೆ

Advertisement

ವಿಜಯಪುರಕ್ಕೆ ಬಂದಿದ್ದ ರೂ. 125 ಕೋ. ಅನುದಾನವನ್ನು ಸಿಎಂ ಹಿಂದಕ್ಕೆ ಪಡೆದಿದ್ದಾರೆ. ಸಿಎಂ ಅನುದಾನವನ್ನು ಬರೀ ಶಿವಮೊಗ್ಗಕ್ಕೆ ಒಯ್ಯುತ್ತಿದ್ದಾರೆ. ಇನ್ನೇನು ಅವರು ಬಹಳ ದಿವಸ ಅಧಿಕಾರದಲ್ಲಿ ಇರುವುದಿಲ್ಲ. ಅವರದೂ ಬಂದೈತಿ. ಏಕೆಂದ್ರೆ ಮೇಲಿನವರಿಗೂ ಅವರು ಸಾಕಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊನ್ನೆ ಉಮೇಶ ಕತ್ತಿ ಇವರು ಶಿವಮೊಗ್ಗ ಮುಖ್ಯಮಂತ್ರಿಯೋ? ಕರ್ನಾಟಕದ ಮುಖ್ಯಮಂತ್ರಿಯೋ ಎಂದು ಹೇಳಿಕೆ ನೀಡಿದ್ದರು ಎಂದು ಯತ್ನಾಳ ತಮ್ಮ ಭಾಷಣದಲ್ಲಿ ವಾಗ್ದಾಳಿ ನಡೆಸಿದ್ದಾರೆ.

Advertisement

ಉತ್ತರ ಕರ್ನಾಟಕದ ಶಾಸಕರೇ ಮುಂದಿನ ಮುಖ್ಯಮಂತ್ರಿ

ವಿಜಯಪುರಕ್ಕೆ ನೀಡಿದ್ದ ಅನುದಾನ ವಾಪಸ್ ಪಡೆದಿದ್ದರೂ ನಾನು ಬಿಡಲ್ಲ. ಹೇಗೆ ತರಬೇಕೋ ತರ್ತಿನಿ. ಬೆಂಗಳೂರಿನವರು ಬಂದು ವಿಜಯಪುರದ ನಮ್ಮ ಮನೆಯ ಮುಂದೆ ನಿಲ್ಲಬೇಕು. ಈಗ ನಾವು ಅವರ ಮನೆಯ ಮುಂದೆ ಹೋಗಿ ನಿಲ್ಲುತ್ತಿದ್ದೇವೆ. ಉತ್ತರ ಕರ್ನಾಟಕದ ಶಾಸಕರಿಂದಲೇ ಬಿಜೆಪಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಮಂಡ್ಯ, ಚಾಮರಾಜನಗರ ಮತ್ತು ಕೋಲಾರದಲ್ಲಿ ಯಾರಾದರೂ ಬಿಜೆಪಿಗೆ ಓಟ್ ಹಾಕ್ತಾರಾ? ಎಂದು ಪ್ರಶ್ನಿಸಿದ ಅವರು, ಉತ್ತರ ಕರ್ನಾಟಕದವರೇ 100 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ. ಆ ಮೇಲೆ ಆ ಕಡೆ 10 ರಿಂದ 15 ಶಾಸಕರು ಆಯ್ಕೆಯಾಗಿರುತ್ತಾರೆ. ಹೀಗಾಗಿ ಮೇಲಿನವರಿಗೂ ಇದು ಗೊತ್ತಾಗಿದೆ. ಮುಂದಿನ ಉತ್ತರಾಧಿಕಾರಿ ಉತ್ತರ ಕರ್ನಾಟಕದವರೇ ಆಗುತ್ತಾರೆ. ಪ್ರಧಾನ ಮಂತ್ರಿಗಳ ಮನಸ್ಸಿನಲ್ಲಿ ಈ ವಿಚಾರ ಬಂದಿದೆ. ಯಡಿಯೂರಪ್ಪ ಬಳಿಕ ಉತ್ತರ ಕರ್ನಾಟಕವದವರಿಗೆ ಸಿಎಂ ಮಾಡೋಣ ಎಂದಿದ್ದಾರೆ. ಅದೂ ಕೂಡ ಬಹುತೇಕ ಫೈನಲ್ ಆಗಿದೆ ಎಂದು ಯತ್ನಾಳ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ಈ ಮುಂಚೆ ಸಿಎಂ ಯಡಿಯೂರಪ್ಪ ಆಪ್ತ ವಲಯದಲ್ಲಿದ್ದ ಯತ್ನಾಳ, ಸಿಎಂ ವರಸೆಗೆ ಬೇಸತ್ತು ಆಗಾಗ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.  ಲಿಂಗಾಯತ ಮತ್ತು ಹಿರಿಯ ನಾಯಕ ಯತ್ನಾಳ್ ಆಗಿದ್ರೂ  ಸಚಿವ ಸ್ಥಾನ ನೀಡದೇ ಇರುವುದು. ಅವರ ಬದಲಿಗೆ ಸಿ. ಸಿ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಿದ್ದು. ವಿಜಯಪುರ ನಗರಕ್ಕೆ ನೀಡಲಾಗಿದ್ದ ಅನುದಾನವನ್ನು ವಾಪಸ್ ಪಡೆದಿದ್ದರಿಂದ ಯತ್ನಾಳ  ಸಿಎಂ ವಿರೋಧಿ ಪಾಳಯದಲ್ಲಿ ಪ್ರಮುಖ ನಾಯಕರಾಗಿ ಹೊರ ಹೊಮ್ಮಿದ್ದಾರೆ.

Advertisement
Share this on...

Latest from ರಾಜಕೀಯ

ಅಭಿಮಾನಿ ತಮ್ಮನ್ನು ಬೀಳಿಸಿದರೂ ಕೋಪಗೊಳ್ಳದ ಪವನ್ ಕಲ್ಯಾಣ್…ನಿಮ್ಮ ಸಹನೆಗೆ ಹ್ಯಾಟ್ಸಾಫ್ ಎಂದ ನೆಟಿಜನ್ಸ್​​​​​​..ವಿಡಿಯೋ

ಪವನ್ ಕಲ್ಯಾಣ್, ಆಂಧ್ರ ಹಾಗೂ ತೆಲಂಗಾಣದಲ್ಲಿ ಪವರ್ ಸ್ಟಾರ್ ಎಂದೇ ಫೇಮಸ್. ನಟನಾಗಿ, ರಾಜಕೀಯ ನಾಯಕನಾಗಿ…

ತಮಿಳುನಾಡು ಸಿಎಂ ಭೇಟಿ ಮಾಡಿದ ಶಿವರಾಜ್​​ ಕುಮಾರ್ ದಂಪತಿ….ಭೇಟಿ ಬಗ್ಗೆ ಶಿವಣ್ಣ ಹೇಳಿದ್ದೇನು..?

ಬ್ಯುಸಿ ಶೆಡ್ಯೂಲ್ ನಡುವೆಯೂ ನಟ ಶಿವರಾಜ್ ಕುಮಾರ್ ಇತ್ತೀಚೆಗೆ ಮೈಸೂರಿನಿಂದ ಶಕ್ತಿಧಾಮದ ಮಕ್ಕಳನ್ನು ಬೆಂಗಳೂರಿಗೆ ಕರೆತಂದು…

ನನ್ನ ಕೆನ್ನೆಗಳನ್ನು ಇನ್ಮುಂದೆ ಜೋಪಾನವಾಗಿರಿಸಿಕೊಳ್ಳಬೇಕು…ಸಂಸದೆ ಹೇಮಾ ಮಾಲಿನಿ ಹೀಗೆ ಹೇಳಿದ್ದೇಕೆ…?

ರಾಜಕೀಯ ಮುಖಂಡರು ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ನೀಡುವ ಕೆಲವೊಂದು ಹೇಳಿಕೆಗಳು ಇತರರ ಬೇಸರಕ್ಕೆ ಕಾರಣವಾಗುತ್ತದೆ. ಈ…

ಪಾಲಿಟಿಕ್ಸ್​​​​ ಬೇಡ ಎನ್ನುತ್ತಿದ್ದ ರಿಯಲ್ ಹೀರೋ, ಪ್ರಕಾಶ್ ರಾಜ್​ ವಿರುದ್ಧ ಮಾ ಚುನಾವಣೆಗೆ ಸ್ಪರ್ಧಿಸ್ತಾರಾ…?

ಕಳೆದ ಲೋಕಸಭೆ ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್, ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಅವರು…

Go to Top