ಸವಿಯಲು ಹುಳಿ ಆದರೆ ಆರೋಗ್ಯಕ್ಕೆ ಸಿಹಿ ಈ ಕಪ್ಪು ದ್ರಾಕ್ಷಿ

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 167 views

ಸವಿಯಲು ರುಚಿ ರುಚಿಯಾಗಿರುವ ದ್ರಾಕ್ಷಿ ಹಣ್ಣು ಯಾರಿಗಿಷ್ಟ ಇಲ್ಲ ಹೇಳಿ? ನೋಡಿದ ಕೂಡಲೇ ಬಾಯಿಗೆ ಹಾಕಿ ಚಪ್ಪರಿಸುವ ಎಂದೆನಿಸುವ ದ್ರಾಕ್ಷಿ ಸ್ವಲ್ಪ ಹುಳಿ ಎನಿಸಿದರೂ ಅದರಲ್ಲಿರುವ ಆರೋಗ್ಯಕರ ಅಂಶಗಳು ಹೊಟ್ಟೆಗೆ ಸಿಹಿಯೇ ಸರಿ. ಹೌದು, ದ್ರಾಕ್ಷಿಯಲ್ಲಿರುವ ಇದರಲ್ಲಿರುವ ಪೋಷಕಾಂಶಗಳು ಹಾಗೂ ಆಂಟಿ ಆಕ್ಸಿಡೆಂಟ್ ಗಳು ದೇಹಕ್ಕೆ ಉತ್ತಮ ಅಂಶಗಳನ್ನು ನೀಡುತ್ತವೆ. ಹುಳಿ ಮಿಶ್ರಿತ ಸಿಹಿಯಾದ ತಿರುಳನ್ನು ಹೊಂದಿರುವ ಕಪ್ಪು ದ್ರಾಕ್ಷಿಯನ್ನು ಒಣಗಿಸಿದರೆ ಒಣದ್ರಾಕ್ಷಿಯ ರೂಪದಲ್ಲಿ ತಿನ್ನಬಹುದು. ಇನ್ನು ಶರಬತ್ತು ಮಾಡಿಯೂ ಕುಡಿಯಬಹುದಾಗಿದೆ. ಒಮ್ಮೆ ತಿಂದರೆ ಮತ್ತೊಮ್ಮೆ ಮಗದೊಮ್ಮೆ ಸವಿಯಬೇಕೆನಿಸುವ ಕಪ್ಪು ದ್ರಾಕ್ಷಿಯನ್ನು ಮಧುಮೇಹಿಗಳಿಗೆ ಹೇಳಿ ಮಾಡಿಸಿದ್ದು. ಯಾಕೆಂದರೆ ಕಪ್ಪು ದ್ರಾಕ್ಷಿ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಇದರಲ್ಲಿರುವ ರೆಸ್ವರೆಟ್ರಾಲ್ ಅಂಶವು ದೇಹದಲ್ಲಿನ ಇನ್ಸುಲಿನ್ ಉತ್ಪನ್ನಕ್ಕೆ ಪ್ರಚೋದನೆ ನೀಡುವುದು. ಇನ್ನು ಉಳಿದಂತೆ ಕಪ್ಪು ದ್ರಾಕ್ಷಿಯ ನಿಯಮಿತ ಸೇವನೆ ಏಕಾಗ್ರತೆ ಹೆಚ್ಚಾಗುತ್ತದೆ ಮಾತ್ರವಲ್ಲದೇ ಸ್ಮರಣಶಕ್ತಿಯೂ ವೃದ್ಧಿಯಾಗುವುದು.ಸ್ಮರಣಶಕ್ತಿ ಕುಂದುವಿಕೆಯನ್ನು ಗುಣಪಡಿಸುವುದರ ಜೊತೆಗೆ ಕಪ್ಪು ದ್ರಾಕ್ಷಿಯು ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಸಹಕಾರಿ.

Advertisement

Advertisement

ಇನ್ನು ಹೃದಯಸಂಬಂಧಿ ರೋಗಗಳನ್ನು ನಿವಾರಿಸುವುದಕ್ಕೂ ಇದು ಉತ್ತಮ ಮದ್ದು ಹೌದು. ಇದರಲ್ಲಿರುವ ಫೈಟೋಕೆಮಿಕಲ್ ಅಂಶ ಹೃದಯದ ಸ್ನಾಯುಗಳನ್ನು ಬಲಪಡಿಸುವ ಶಕ್ತಿ ಹೊಂದಿದೆ. ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು ಮಾತ್ರವಲ್ಲದೇ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವುದಕ್ಕೂ ಇದು ಸಹಕಾರಿ. ಇದರ ಜೊತೆಗೆ ಹೃದಯ ಸಂಬಂಧಿ ತೊಂದರೆಗಳಿಂಲೂ ಕಪ್ಪು ದ್ರಾಕ್ಷಿ ರಕ್ಷಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಸಹಕರಿಸುತ್ತದೆ.  ಕಣ್ಣಿನ ಕುರುಡುತನ ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಕಪ್ಪು ದ್ರಾಕ್ಷಿಯಲ್ಲಿ ಅನುವಂಶಿಕ ಲಕ್ಷಣಗಳನ್ನೇ ಬದಲಿಸಬಲ್ಲ ಗುಣವನ್ನು ತಡೆಯುವ ಶಕ್ತಿಯಿದೆ. ಹಾಗೂ ಅಧಿಕ ಪ್ರಮಾಣದ ಆಂಟಿ ಆಕ್ಸಿ’ಡೆಂಟ್ ಗುಣಗಳಿದ್ದು ಉತ್ತಮ ಆರೋಗ್ಯಕ್ಕೆ ಇದು ಸಹಕಾರಿ.

Advertisement

Advertisement

ಕಪ್ಪು ದ್ರಾಕ್ಷಿಯಲ್ಲಿರುವ ರೆಸ್ವೆರಾಟ್ರೋಲ್ ಅಂಶ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ಶಕ್ತಿ ಹೊಂದಿದೆ. ಇದರ ಜೊತೆಗೆ ಕೂದಲು ಉದುರುವಿಕೆ , ಕೂದಲು ನೆರೆಯುವುದು ಮುಂತಾದವುಗಳಿಂದ ರಕ್ಷಣೆ ಒದಗಿಸುವ ಕಪ್ಪು ದ್ರಾಕ್ಷಿಯು ತಲೆ ತುರಿಕೆ ಮತ್ರು ಹೊಟ್ಟು ಆಗದಿರುವಂತೆ ತಡೆಗಟ್ಟುವ ಶಕ್ತಿ ಇದಕ್ಕಿದೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇದು ಮಲಬದ್ದತೆ ಮತ್ತು ಅಜೀರ್ಣತೆಯಿಂದ ಮುಕ್ತಿ ನೀಡುತ್ತದೆ. ಇನ್ನು ತೂಕ ಇಳಿಸುವಲ್ಲಿಯೂ ನೆರವಾಗುವ ಕಪ್ಪು ದ್ರಾಕ್ಷಿಯಲ್ಲಿ ಕಡಿಮೆ ಕ್ಯಾಲೋರಿಗಳಿವೆ. ತ್ವಚೆಯ ಆರೋಗ್ಯಕ್ಕೂ ಉತ್ತಮವಾಗಿರುವ ಕಪ್ಪುದ್ರಾಕ್ಷಿಯನ್ನು ಸೇವಿಸಿದರೆ ದೇಹಕ್ಕೆ ಒಳ್ಳೆಯದು.
– ಅಹಲ್ಯಾ

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...