ಚಿತ್ರಮಂದಿರದಲ್ಲಿ ಅತೀ ಹೆಚ್ಚು ಕಾಲ ಪ್ರದರ್ಶನಗೊಂಡ ಕನ್ನಡ ಚಿತ್ರಗಳು ಯಾವುವು ಗೊತ್ತಾ?

in ಸಿನಿಮಾ 319 views

* ಕಸ್ತೂರಿ ನಿವಾಸ
ಚಂದನವನದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಸಿನಿಮಾ ಎಂದರೆ ಡಾಕ್ಟರ ರಾಜ್ ಕುಮಾರ್ ಅಭಿನಯದ ಕಸ್ತೂರಿ ನಿವಾಸ. ಆಗಿನ ಮೈಸೂರು ರಾಜ್ಯದಲ್ಲಿ ಈ ಚಿತ್ರ ಸುಮಾರು ಹದಿನಾರು ಚಿತ್ರಮಂದಿರದಲ್ಲಿ ಏಳುನೂರಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡು ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು

Advertisement

 

Advertisement

Advertisement

 

Advertisement

*ಬಂಗಾರದ ಮನುಷ್ಯ
ಈ ಸಿನಿಮಾವನ್ನು ಯುಗ ಯುಗ ಕಳೆದರೂ ಕನ್ನಡ ಸಿನಿ ಪ್ರಿಯರು ಮರೆಯಲು ಸಾಧ್ಯವೇ ಇಲ್ಲ. ಕನ್ನಡ ಚಿತ್ರರಂಗದ ದಂತ ಕಥೆಯಲ್ಲಿ ಬಂಗಾರದ ಮನುಷ್ಯ ಬೆರೆತು ಹೋಗಿದೆ. ಈ ಚಿತ್ರದಲ್ಕಿ ಪಟ್ಟಣದಿಂದ ಹಳ್ಳಿಗೆ ಬಂದು ಬೇಸಾಯ ಮಾಡಿ ಬದುಕು ಕಟ್ಟಿಕೊಳ್ಳುವ ಒಬ್ಬ ಯುವ ರೈತನ ಪಾತ್ರದಲ್ಲಿ ಅಣ್ಣಾವ್ರು ಮಿಂಚಿದ್ದರು.ಸುಮಾರು ಎರಡು ವರ್ಷಗಳ ಕಾಲ ಪ್ರದರ್ಶನ ಕಂಡ ಬಂಗಾರದ ಮನುಷ್ಯ ಚಿತ್ರ ಫೋರ್ಬ್ಸ್ ಮ್ಯಾಗಜಿನ್ ನ ಇಪ್ಪತ್ತೈದು ಅತ್ಯುತ್ತಮ ಭಾರತ ಚಿತ್ರಗಳ ಪಟ್ಟಿಯಲ್ಲಿದೆ. ಅಲ್ಲದೇ ಅದೆಷ್ಟೋ ಯುವಕರು ಪಟ್ಟಣದಿಂದ ಹಳ್ಳಿಗೆ ಮರಳಿ ಕೃಷಿಗೆ ಮರಳುವಂತೆ ಈ ಸಿನಿಮಾ ಮಾಡಿತ್ತು .

 

 

*ನಾಗರಹಾವು
ಚಿತ್ರ ಬ್ರಹ್ಮ ಎಂದೇ ಖ್ಯಾತರಾದ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರವೆಂದರೆ ನಾಗರಹಾವು. ಈ ಸಿನಿಮಾ ತರಾಸು ಕಾದಂಬರಿ ಆಧಾರಿತ ಸಿನಿಮಾವಾಗಿದ್ದು, ಚಿತ್ರದ ಮೂಲಕ ಕನ್ನಡಕ್ಕೆ ಆಂಗ್ರಿ ಯಂಗ್ ಮ್ಯಾನ್ ವಿಷ್ಣುವರ್ಧನ್ ಪಾದಾರ್ಪಣೆ ಮಾಡಿದರು. ಇನ್ನು ಪ್ರಪ್ರಥಮ ಬಾರಿಗೆ ಮೂರು ಚಿತ್ರ ಮಂದಿರಗಳಲ್ಲಿ ಶತದಿನೋತ್ಸವವನ್ನು ಈ ಸಿನಿಮಾ ಕಂಡಿತು

 

 

*ಶಂಕರ್ ಗುರು
ಕನ್ನಡ ಕಂಠೀರವ ಡಾ ರಾಜ್ ಅವರು ತ್ರಿಪಾತ್ರದಲ್ಲಿ ಅಭಿನಯಿಸಿದ ಸಿನಿಮಾವೆಂದರೆ ಅದು ಶಂಕರ್ ಗುರು. ಈ ಚಿತ್ರ ಸುಮಾರು ಒಂದು ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದ್ದು, ಹಿಂದಿನ ಚಿತ್ರಗಳ ದಾಖಲೆಗಳನ್ನೆಲ್ಲ ಹಿಂದೆ ಹಾಕಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ದಾಖಲೆಯಾಗಿತ್ತು

 

 

*ಪ್ರೇಮಲೋಕ
ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿದ ಚಿತ್ರವೆಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಪ್ರೇಮಲೋಕ . ಕನ್ನಡದ ಎವರ್ ಗ್ರೀನ್ ರೊಮ್ಯಾಂಟಿಕ್ ಚಿತ್ರವಾಗಿ ಈ ಸಿನಿಮಾ ದಾಖಲೆಯಾಗಿದ್ದು ಕನ್ನಡ ಚಿತ್ರರಂಗದ ದಿಗ್ಗಜ ನಟರೆಲ್ಲ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅಲ್ಲದೆ ಈ ಸಿನಿಮಾ ಬರೋಬ್ಬರಿ ಒಂದು ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡು ದಾಖಲೆ ಬರೆದಿತ್ತು

 

 

*ನಂಜುಂಡಿ ಕಲ್ಯಾಣ
ರಾಘವೇಂದ್ರ ರಾಜ್ಕುಮಾರ್ ಹಾಗೂ ಮಾಲಾಶ್ರೀ ಅವರು ಅಭಿನಯಿಸಿದ್ದ ನಂಜುಂಡಿ ಕಲ್ಯಾಣ ಸಿನಿಮಾ ಸುಮಾರು ಐನೂರು ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದ್ದು, ಒಳಗೆ ಸೇರಿದರೆ ಗುಂಡು ಗೀತೆ ಸಿಕ್ಕಾಪಟ್ಟೆ ಪ್ರಸಿದ್ಧವಾಗಿತ್ತು.

 

 

*ಜೀವನ ಚೈತ್ರ
ನಟನೆಯಿಂದ ಕೆಲ ಕಾಲ ವಿರಾಮ ತೆಗೆದುಕೊಂಡಿದ್ದ ಡಾ ರಾಜ್ ಅವರು ಮೂರು ವರ್ಷಗಳ ನಂತರ ಅಭಿನಯಿಸಿದ್ದ ಚಿತ್ರವೆಂದರೆ ಜೀವನ ಚೈತ್ರ. ಈ ಸಿನಿಮಾ ಅಭೂತಪೂರ್ವ ಪ್ರತಿಕ್ರಿಯೆ ಪಡೆದು ಬರೋಬ್ಬರಿ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಅಲ್ಲದೆ ನಾದಮಯ ಗೀತೆಗೆ ಡಾ ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ ಕೂಡ ದೊರೆಯಿತು.

 

 

*ಓಂ
ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವೆಂದರೆ ಓಂ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ನಾಯಕನಾಗಿ ನಟಿಸಿದ್ದ ಈ ಸಿನಿಮಾ ಸುಮಾರು ಆರುನೂರಕ್ಕಿಂತ ಹೆಚ್ಚು ಬಾರಿ ಬಿಡುಗಡೆಯಾಗಿ ಲಿಮ್ಕಾ ದಾಖಲೆ ಮಾಡಿದೆ.ಇನ್ನು ಈ ಸಿನಿಮಾ ಬಿಡುಗಡೆಯಾದ ಇಪ್ಪತ್ತು ವರ್ಷಗಳ ನಂತರ ಚಿತ್ರದ ಸ್ಯಾಟಲೈಟ್ ರೈಟ್ ಅನ್ನು ಉದಯ ಟಿವಿ ಹತ್ತು ಕೋಟಿಗೆ ಪಡೆದಿದ್ದು ಈ ಹಿಂದೆ ಯಾವ ಸಿನಿಮಾ ಮಾಡಿದ ದಾಖಲೆಯನ್ನು ಈ ಸಿನಿಮಾ ಮಾಡಿದೆ.

 

*ಜನುಮದ ಜೋಡಿ
ಟಿಎಸ್ ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಎಂದರೆ ಜನುಮದ ಜೋಡಿ. ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಒಂದೂವರೆ ವರ್ಷ ಪ್ರದರ್ಶನ ಕಂಡು ಹತ್ತು ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾವಾಗಿ ದಾಖಲೆಯಾಗಿದೆ

 

 

*ಯಜಮಾನ
ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರು ದ್ವಿಪಾತ್ರದಲ್ಲಿ ನಟಿಸಿದ ಸಿನಿಮಾವೆಂದರೆ ಯಜಮಾನ .ಕನ್ನಡ ಚಿತ್ರರಂಗದ ಬಹು ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ಇದಾಗಿದ್ದು, ಒಂದು ವರ್ಷಗಳ ಕಾಲ ತುಂಬು ಪ್ರದರ್ಶನ ಕಂಡು ಈ ಹಿಂದೆ ಎಲ್ಲ ದಾಖಲೆಗಳನ್ನು ಮುರಿದು ಸುಮಾರು ನಲವತ್ತೈದು ಕೋಟಿ ಗಳಿಕೆ ಕಂಡಿತ್ತು.

 

 

*ಚಂದ್ರಚಕೋರಿ
ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಶ್ರೀ ಮುರಳಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಸಿನಿಮಾವೆಂದರೆ ಚಂದ್ರಚಕೋರಿ . ಈ ಸಿನಿಮಾ ಚಿತ್ರಮಂದಿರದಲ್ಲಿ ಐನೂರಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡು ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ.

 

 

*ಕರಿಯ
ಕನ್ನಡದ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಹಾಗೂ ದರ್ಶನ ದವರು ನಾಯಕನಾಗಿ ಅಭಿನಯಿಸಿದ್ದ ಕರಿಯ ಸಿನಿಮಾ ಭೂಗತ ಲೋಕದ ಚಿತ್ರವಾಗಿದೆ.ಈ ಸಿನಿಮಾ ಎಂಟು ನೂರು ದಿನಗಳ ಕಾಲ ಪ್ರದರ್ಶನ ಕಂಡು ದಾಖಲೆ ಬರೆದಿದೆ ಸುಮಾರು ಹದಿನೈದು ಕ್ಕಿಂತ ಹೆಚ್ಚು ಬಾರಿ ಮರು ಬಿಡುಗಡೆಯಾಗಿ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಲೇ ಇತ್ತು.

 

 

*ಆಪ್ತಮಿತ್ರ
ಸಾಹಸ ಸಿಂಹ ವಿಷ್ಣುವರ್ಧನ್ ರಮೇಶ್ ಪ್ರೇಮ ಹಾಗೂ ಸೌಂದರ್ಯ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಆಪ್ತಮಿತ್ರ ಸಿನಿಮಾ ಸುಮಾರು ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಈ ಸಿನಿಮಾದಲ್ಲಿ ಸೌಂದರ್ಯ ಅವರು ನಟಿಸಿದ ನಾಗವಲ್ಲಿ ಪಾತ್ರ ಕನ್ನಡ ಸಿನಿ ಜಗತ್ತಿನಲ್ಲಿ ಅವಿಸ್ಮರಣೀಯವಾಗಿದೆ

 

 

*ಜೋಗಿ
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವೆಂದರೆ ಜೋಗಿ. ಈ ಸಿನಿಮಾ ಅಪಾರ ಮಟ್ಟದ ಕ್ರೇಜ್ ಹುಟ್ಟುಹಾಕಿದ್ದಲ್ಲದೇ ಅರುವತ್ತು ಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಪೂರೈಸಿ ಒಂದು ಹೊಸ ಅರ್ಥ ನೀಡಿತ್ತು.

 

 

*ಮುಂಗಾರು ಮಳೆ
ಯೋಗರಾಜ್ ಭಟ್ ಹಾಗೂ ಗಣೇಶ್ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಮುಂಗಾರು ಮಳೆ ಸಿನಿಮಾ ಕನ್ನಡಕ್ಕೆ ಹೊಸ ಅಲೆಯನ್ನೆ ಎಬ್ಬಿಸಿತ್ತು. ಕೇವಲ ಎರಡು ಕೋಟಿ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ ಎಂಟನೂರು ಅರುವತ್ತೈದು ದಿನಕ್ಕಿಂತ ಹೆಚ್ಚು ಕಾಲ ಪ್ರದರ್ಶನ ಕಂಡು ಬರೋಬ್ಬರಿ ಎಪ್ಪತ್ತೈದು ಕೋಟಿ ಗಳಿಸಿತ್ತು

 

 

*ಮಿಲನ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಿ ಅಭಿನಯಿಸಿದ್ದ ಮಿಲನ ಸಿನಿಮಾ ಐವತ್ತು ಚಿತ್ರಮಂದಿರಗಳಲ್ಲಿ ಶತದಿನೋತ್ಸವ, ಹದಿನೈದು ಚಿತ್ರಮಂದಿರದಲ್ಲಿ ಇನ್ನೂರು ದಿನ ಪ್ರದರ್ಶನ, ಹಾಗೂ ಮಲ್ಟಿಪ್ಲೆಕ್ಸ್ ನಲ್ಲಿ ಆರ್ ನೂರು ದಿನ ಪ್ರದರ್ಶನ ಕಂಡ ಕನ್ನಡದ ಏಕೈಕ ಚಿತ್ರವಾಗಿದೆ

Advertisement
Share this on...