ಪೂಜೆಗಳಲ್ಲಿ ಬಾಳೆ ಎಲೆಯನ್ನು ಬಳಸುವುದು ಯಾವ ಕಾರಣಗಳಿಗಾಗಿ ಗೊತ್ತಾ ?

in ಕನ್ನಡ ಮಾಹಿತಿ 33 views

ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಬಾಳೆ ಎಲೆಗಳನ್ನು ಪೂಜೆಗೆ ಅಥವಾ ವಿವಾಹದಂತಹ ಶುಭ ಸಂದರ್ಭದಲ್ಲಿ ಬಳಸುವುದನ್ನು ನೀವು ನೋಡಿರಬೇಕು. ಅದರಲ್ಲೂ ನೀವು ದಕ್ಷಿಣ ಭಾರತೀಯರಾಗಿದ್ದರೆ ಆ ಬಾಳೆ ಎಲೆಗಳಲ್ಲಿ ಬಹಳಷ್ಟು ಸಾರಿ ಊಟವನ್ನು ಮಾಡಿರುತ್ತೀರಿ. ಆದರೆ ಜನರು ಬಾಳೆ ಎಲೆಗಳನ್ನು ಅಥವಾ ಬಾಳೆ ಮರವನ್ನು ಏಕೆ ಪೂಜಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?.

Advertisement

 

Advertisement


ಬಾಳೆ ಮರವು ಬಹಳ ಪವಿತ್ರವಾದುದು. ಅದರ ಪ್ರತಿಯೊಂದು ಭಾಗಗಳು ಅತ್ಯಂತ ಉಪಯುಕ್ತವಾಗಿವೆ. ಅದರ ಕಾಂಡವನ್ನು ಶುಭ ಕಾರ್ಯಕ್ರಮಗಳಲ್ಲಿ ದ್ವಾರಗಳಿಗೆ ಕಟ್ಟಿದರೆ, ಅದರ ಎಲೆಗಳನ್ನು ಊಟ ಮಾಡಲು ಬಳಸಲಾಗುತ್ತದೆ. ಪ್ರಾಚೀನ ಗ್ರಂಥಗಳ ಪ್ರಕಾರ, ಬಾಳೆ ಮರವನ್ನು ದೇವಗುರು ಬೃಹಸ್ಪತಿ ಅಥವಾ ಗುರು ಗ್ರಹ ಎಂದು ಪರಿಗಣಿಸಲಾಗುತ್ತದೆ. ಬಾಳೆ ಮರವು ವಿಷ್ಣುವಿನ ಸಂಕೇತವಾದ ಕಾರಣ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ.

Advertisement

 

Advertisement

ಪುರಾಣದ ಪ್ರಕಾರ ವ್ಯಕ್ತಿಯು ಮದುವೆ ವಿಳಂಬ ದೋಷ ಹೊಂದಿದ್ದರೆ, ಅವನು ಅಥವಾ ಅವಳು ಮೊದಲು ಬಾಳೆ ಮರವನ್ನು ಮದುವೆಯಾಗಬೇಕು, ನಂತರ ವ್ಯಕ್ತಿಯು ಯಾರನ್ನಾದರೂ ಮದುವೆಯಾಗಬಹುದು. ಪುರಾಣಗಳ ಪ್ರಕಾರ, ವಿಷ್ಣು ಸ್ವತಃ ಬಾಳೆ ಮರದಲ್ಲಿ ವಾಸಿಸುತ್ತಾನೆ. ಈ ಕಾರಣದಿಂದಾಗಿ ಇದನ್ನು ಗುರುವಾರ ಪೂಜಿಸಲಾಗುತ್ತದೆ. ಬಾಳೆ ಮರ ಪೂಜಿಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ, ಸಂಪತ್ತು ಬರುತ್ತದೆ. ಈ ಮರವನ್ನು ಶುಭ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಧಾರ್ಮಿಕ ಗ್ರಂಥಗಳ ಪ್ರಕಾರ ಬಾಳೆ ಮರವನ್ನು ಪೂಜಿಸುವುದರಿಂದ ಗುರು ದೋಷ ನಿವಾರಣೆಯಾಗುತ್ತದೆ. ನಿಮ್ಮ ಮನೆಯಲ್ಲಿ ನೀವು ಶುಭ ಫಲಿತಾಂಶಗಳನ್ನು ಕೇಳುತ್ತೀರಿ. ಇದನ್ನು ಮನೆಯ ಹೊರಗೆ ನೆಡಬೇಕು. ಆದರೆ ಅದನ್ನು ಎಂದಿಗೂ ಮನೆಯೊಳಗೆ ಇಡಬಾರದು ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಹೇಳಲಾಗುತ್ತದೆ. ಆದ್ದರಿಂದ ಅದನ್ನು ಅಂಗಳದಲ್ಲಿ ನೆಟ್ಟು ಪ್ರತಿದಿನ ಪೂಜೆ ಮಾಡಿ.

 


ಇದೇ ರೀತಿ ಬಾಳೆಹಣ್ಣು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನುಸಹ ಹೊಂದಿದೆ. ಇದು ತಲೆನೋವನ್ನು ಗುಣಪಡಿಸುವುದಲ್ಲದೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇದು ಅತ್ಯುತ್ತಮ ಆಹಾರವೆಂದು ಪರಿಗಣಿಸಲಾಗಿದೆ. ಬ್ರಾಂಕೈಟಿಸ್, ಭೇದಿ, ಹುಣ್ಣು, ಮಧುಮೇಹ, ಉನ್ಮಾದ, ಅಪಸ್ಮಾರ, ಕುಷ್ಠರೋಗ, ಜ್ವರ, ರಕ್ತಸ್ರಾವ, ತೀವ್ರವಾದ ಭೇದಿ ಮತ್ತು ಅತಿಸಾರದ ಕಾಯಿಲೆಗಳನ್ನು ಗುಣಪಡಿಸಲು ಬಾಳೆಹಣ್ಣನ್ನು ವಿವಿಧ ರೂಪಗಳಲ್ಲಿ ಬಳಸಲಾಗುತ್ತದೆ. ಇದನ್ನು ಆಂಟಿಫಂಗಲ್ ಮತ್ತು ಪ್ರತಿಜೀವಕ ಔಷಧವಾಗಿಯೂ ಬಳಸಲಾಗುತ್ತದೆ.

Advertisement
Share this on...