ಆನ್​​​ಲೈನ್​​​ನಲ್ಲಿ ಸಿನಿಮಾ ರಿಲೀಸ್ ಮಾಡುವ ಮೂಲಕ ಸಿನಿಕಾರ್ಮಿಕರ ನೆರವಿಗೆ ಬಾಲಿವುಡ್ ಮುನ್ನುಡಿ..!

in ಸಿನಿಮಾ 30 views

ಲಾಕ್​​ಡೌನ್​​​​ನಿಂದ ಜನರಿಗೆ ದೊಡ್ಡ ಮನರಂಜನೆ ತಾಣವಾದ ಸಿನಿಮಾ ಚಟುವಟಿಕೆಗಳು ಎಲ್ಲಾ ಬಂದ್ ಆಗಿವೆ. ಜನರು ನೆಟ್​​​ಫ್ಲಿಕ್ಸ್, ಅಮೆಜಾನ್ ಪ್ರೈಂ ನಂತ ಡಿಜಿಟಲ್ ಮೀಡಿಯಾ, ಖಾಸಗಿ ವಾಹಿನಿಗಳ ಮೂಲಕ , ಹಳೆಯ ಧಾರಾವಾಹಿಗಳನ್ನು ಮತ್ತೆ ನೋಡುವ ಮೂಲಕ ಕಾಲ ಕಳೆಯುತ್ತಿದ್ದಾರೆ. ಇನ್ನು ಸಿನಿಮಾ ಚಟುವಟಿಕೆಗಳು ಬಂದ್ ಆಗಿರುವುದರಿಂದ ಸಿನಿಮಾವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಎಷ್ಟೋ ಕಾರ್ಮಿಕರು ಈಗ ಒಂದು ಹೊತ್ತಿನ ಆಹಾರಕ್ಕೂ ಕಷ್ಟ ಪಡುವಂತಾಗಿದೆ.ಈಗಾಗಲೇ ಸ್ಟಾರ್ ನಟರು ಸಿನಿ ಕಾರ್ಮಿಕರ ನೆರವಿಗೆ ಬಂದಿದ್ದಾರೆ. ಆದರೂ ಪರಿಸ್ಥಿತಿ ದಿನೇ ದಿನೆ ಬಿಗಡಾಯಿಸುತ್ತಿದ್ದು, ಲಾಕ್​​ಡೌನ್ ಮತ್ತೆ ಮುಂದುವರೆಯುವ ಸಾಧ್ಯತೆ ಇದೆ. ಈ ಕಾರಣ ಬಾಲಿವುಡ್ ಮಂದಿ ಸಿನಿ ಕಾರ್ಮಿಕರ ನೆರವಿಗೆ ನಿರ್ಧರಿಸಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳನ್ನು ಆನ್​​​​ಲೈನ್​​ನಲ್ಲಿ ಬಿಡುಗಡೆ ಮಾಡುವ ಮೂಲಕ ಸಿನಿ ಕಾರ್ಮಿಕರಿಗೆ ನೆರವಾಗಲು ಬಾಲಿವುಡ್​​ ಗಣ್ಯರು ಮುಂದಾಗಿದ್ದಾರೆ. ಸದ್ಯಕ್ಕೆ ಥಿಯೇಟರ್​​​​​, ಮಲ್ಟಿಪ್ಲೆಕ್ಸ್​​​​​​ಗಳೆಲ್ಲಾ ಬಂದ್ ಆಗಿವೆ. ಲಾಕ್​​​ಡೌನ್​ ಮುಗಿದರೂ ಎಲ್ಲಾ ಸಹಜ ಸ್ಥಿತಿಯತ್ತ ಮರಳಿ ಥಿಯೇಟರ್​​​​​ಗಳು ಮತ್ತೆ ಓಪನ್ ಆಗಲು ಕನಿಷ್ಠ ಏನಿಲ್ಲವೆಂದರೂ 4-6 ತಿಂಗಳು ಸಮಯ ಬೇಕು.

Advertisement

 

Advertisement

 

Advertisement

Advertisement

 

ಈ ಕಾರಣದಿಂದ ಆನ್​​ಲೈನ್​​ನಲ್ಲಿ ಸಿನಿಮಾ ಬಿಡುಗಡೆ ಮಾಡಿ ಅದರಿಂದ ಬಂದ ಹಣವನ್ನು ಸಿನಿ ಕಾರ್ಮಿಕರಿಗೆ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಆನ್​​​ಲೈನ್​​ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಬಾಲಿವುಡ್​​​ನ ಅಕ್ಷಯ್ ಕುಮಾರ್ ಅಭಿನಯದ ‘ಲಕ್ಷ್ಮಿ ಬಾಂಬ್’. ಇದು ತಮಿಳಿನ ಸೂಪರ್ ಹಿಟ್ ಸಿನಿಮಾ ‘ಕಾಂಚನ’ ರೀಮೇಕ್ ಆಗಿದ್ದು ಕಾಂಚನ ಚಿತ್ರದ ನಾಯಕ, ನಿರ್ದೇಶಕ ರಾಘವ ಲಾರೆನ್ಸ್ ಅವರೇ ಲಕ್ಷ್ಮಿ ಬಾಂಬ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೇ 22 ರಂದು ಥಿಯೇಟರ್​​ನಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಲಾಕ್​​​​​ಡೌನ್​​​​​​​​​ ಘೋಷಣೆಯಾದ ಕಾರಣ ಈಗ ಸಿನಿಮಾವನ್ನು ಆನ್​​ಲೈನ್​​ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಸಿನಿಮಾ ಯಶಸ್ವಿಯಾದರೆ ಉಳಿದ ಸಿನಿಮಾಗಳನ್ನು ಹೀಗೆ ಆನ್​​ಲೈನ್​​ನಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತಿ ಮಾಹಿತಿ ಹೊರಬಿದ್ದಿಲ್ಲ.

 

ಮಹಾರಾಷ್ಟ್ರದಲ್ಲಿ ಈಗಾಗಲೇ 7 ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಮಹಾರಾಷ್ಟ್ರದಲ್ಲಿ ಥಿಯೇಟರ್, ಮಾಲ್​​ಗಳು ತೆರೆಯುವುದು ಇನ್ನೂ ಸಾಕಷ್ಟು ಸಮಯ ಬೇಕು.

Advertisement
Share this on...