ಕೊಡಗು ಮುಳುಗಿ ಹೋಗುತ್ತೆ ಎಂದು ಭವಿಷ್ಯ ನುಡಿದಿದ್ದ ಬ್ರಹ್ಮಾಂಡ ಗುರೂಜಿಗೆ ಜನರು ಮಾಡಿದ್ದೇನು ಗೊತ್ತಾ?

in ಜ್ಯೋತಿಷ್ಯ 58 views

ಬ್ರಹ್ಮಾಂಡ ಗುರೂಜಿ ಅವರು ಆಗಾಗ ನುಡಿಯುವ ಭವಿಷ್ಯಂದಿಂದ ತಾವೇ ಸಂಕಷ್ಟಕ್ಕೆ ಸಿಲುಕುತ್ತಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ಗುರೂಜಿ ಇದೀಗ ಪೋಲಿಸ್ ಠಾಣೆ ಮೆಟ್ಟಿಲೇರುವ ಸಂದರ್ಭ ಬಂದೊದಗಿದೆ. ಗುರೂಜಿ ವಿರುದ್ಧ ಗೋಣಿಕೊಪ್ಪಲು ಶ್ರೀಮಂಗಲ ಠಾಣೆಗೆ ದೂರು ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಕೊಡಗು ಭೂಕಂಪನದಿಂದಾಗಿ ಸಂಪೂರ್ಣ ಮುಳುಗಿ ಹೋಗಲಿದೆ ಎಂಬ ಭವಿಷ್ಯ ನುಡಿದಿದ್ದರು. ಈ ಹೇಳಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ.ಈ ಹೇಳಿಕೆಯ ವಿರುದ್ಧ ಸ್ಥಳಿಯ ಜನರು ಆಕ್ರೋಶ ವ್ಯಕ್ತ ಪಡಿಸಿದ್ದು, ದೇವರಿಗೆ ಪೂಜೆ ಮಾಡುವಂತಹ ಪವಿತ್ರವಾದ ಕೆಲಸ ಮಾಡುವ ಇವರು,ಯಾವ ಆಧಾರದ ಮೇಲೆ ಈ ರೀತಿಯಾದ ಭವಿಷ್ಯ ನುಡಿದಿದ್ದಾರೆ? ಇವರ ಭವಿಷ್ಯವನ್ನು ಸರ್ಕಾರ ನಂಬುವುದಾದರೆ ನಿಜವಾಗಿಯೂ ಕೊಡಗು ನೆಲಸಮವಾಗುವುದಾದರೆ,
ದಯವಿಟ್ಟು ವೈಜ್ಞಾನಿಕವಾಗಿ ಪರಿಶೀಲಿಸಿ,ಭೂಕಂಪನದ ಬಗ್ಗೆ ಕೊಡಗಿನ ಜನರಿಗೆ ಮಾಹಿತಿ ನೀಡಿ ನಿಜವಾದರೆ ಇಲ್ಲಿನ ಜನರನ್ನು ಬೇರೆ ಕಡೆಗೆ ಕಲಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

Advertisement

 

Advertisement

Advertisement

ಇನ್ನು ಬ್ರಹ್ಮಾಂಡ ಗುರೂಜಿ ವಿರುದ್ಧ ಕೊಡಗಿನ ಬೆಳೆಗಾರರ ಒಕ್ಕೂಟದ ವತಿಯಿಂದ ಅವರ ವಿರುದ್ಧ ದೂರು ದಾಖಲಾಗಿದ್ದು, ಗೂರೂಜಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲೆಬೇಕು ಎಂದು ಒತ್ತಾಯ ಮಾಡಿದ್ದಾರೆ.ಕಳೆದ ಎರಡು ವರ್ಷಗಳಿಂದ ಪ್ರವಾಹ ಸೇರಿದಂತೆ ಅನೇಕ ವಿಕೋಪದಿಂದಾಗಿ ಕೊಡಗು ಜಿಲ್ಲೆಯ ಜನ ಬಹಳ ತೊಂದರೆಯನ್ನು ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಈ ತರಹದ ಹೇಳಿಕೆ ನೀಡಿದಕ್ಕಾಗಿ ಬ್ರಹ್ಮಾಂಡ ಗುರೂಜಿ ವಿರುದ್ಧ ದೂರು ನೀಡಲಾಗಿದೆ.

Advertisement

Advertisement
Share this on...