ಕಂದು ಏಲಕ್ಕಿ ಮಸಾಲೆ ಅಡುಗೆಗೂ ಸೈ, ಆರೋಗ್ಯಕ್ಕೂ ಸೈ..!

in ಕನ್ನಡ ಆರೋಗ್ಯ 78 views

ಇಂದಿನ ಕಾಲಘಟ್ಟದಲ್ಲಿ ಆರೋಗ್ಯದ ಕಡೆ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಒಮ್ಮೆ ಆರೋಗ್ಯವು ಹದಗೆಟ್ಟರೆ ಜೀವನವು ಕೊನೆಗೊಳ್ಳುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ ಕೆಲವು ಆಹಾರ ಸೇವನೆಯ ಮೂಲಕ ನಮ್ಮ ಆರೋಗ್ಯವನ್ನು ಸುಧಾರಿಸಬಹುದು. ತಜ್ಞ ವೈದ್ಯರು ಸಹ ಇದೇ ರೀತಿ ಸಲಹೆ ಕೊಡುವುದನ್ನು ನೀವು ನೋಡಿರುತ್ತೀರಿ, ಕೇಳಿರುತ್ತೀರಿ. ಅಂದಹಾಗೆ ಏಲಕ್ಕಿ ಕೇವಲ ಮಸಾಲ ಪದಾರ್ಥವಾಗಿ ಮಾತ್ರವಲ್ಲ, ಆರೋಗ್ಯ ಹೆಚ್ಚಿಸಲು ಸಹಕಾರಿಯಾಗುವುದು ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಅವುಗಳಲ್ಲಿ ಕಂದು ಏಲಕ್ಕಿ ಅಂದರೆ ದೊಡ್ಡ ಏಲಕ್ಕಿಯೂ ಸೇರಿದೆ.

Advertisement

 

Advertisement

Advertisement

 

Advertisement

ಏಲಕ್ಕಿಯನ್ನು ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸಲು ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ ಕಂದು ಏಲಕ್ಕಿ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಅನೇಕ ಔಷಧೀಯ ಗುಣಗಳಿಂದ ಕೂಡಿದೆ ಎಂದು ಹೇಳಲಾಗುತ್ತದೆ. ಹೌದು, ಕಂದು ಏಲಕ್ಕಿ ಕೆಲವು ಪೋಷಕಾಂಶಗಳು, ಫೈಬರ್ ಮತ್ತು ಎಣ್ಣೆಯನ್ನು ಹೊಂದಿರುತ್ತದೆ. ಇದು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ನೀವು ಇದನ್ನು ನಿಯಮಿತವಾಗಿ ಸೇವಿಸಿದರೆ ಮಾತ್ರ ಅದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಆದ್ದರಿಂದ ಇಂದು ಕಂದು ಏಲಕ್ಕಿಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

 

 

ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಸಹಕಾರಿ
ಕಂದು ಏಲಕ್ಕಿಯಲ್ಲಿ ಸಾಕಷ್ಟು ಆಂಟಿ-ಆಕ್ಸಿಡೆಂಟ್, ವಿಟಮಿನ್ ಸಿ ಮತ್ತು ಪೊಟ್ಯಾಶಿಯಮ್ ಇರುತ್ತದೆ. ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಜೊತೆಗೆ ರಕ್ತ ಪರಿಚಲನೆ ಸುಧಾರಿಸಲು ಸಹ ಸಹಾಯ ಮಾಡುತ್ತದೆ.

 

 

ಉಸಿರಾಟದ ತೊಂದರೆಗಳನ್ನು ದೂರವಿಡುತ್ತದೆ
ಕಂದು ಏಲಕ್ಕಿ ಉಸಿರಾಟದ ತೊಂದರೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ನಿಮಗೆ ಅಸ್ತಮಾ, ಶ್ವಾಸಕೋಶದ ಸಂಕೋಚನದಂತಹ ಯಾವುದೇ ಸಮಸ್ಯೆ ಇದ್ದರೆ, ಕಂದು ಏಲಕ್ಕಿ ಸೇವನೆಯು ನಿಮಗೆ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ.

 

 

ಬಾಯಿಯ ದುರ್ವಾಸನೆ ತಡೆಯಲು
ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ನೀವು ದೊಡ್ಡ ಕಂದು ಏಲಕ್ಕಿಯನ್ನು ಅಗಿಯಬಹುದು. ಬಾಯಿಯ ನೋವನ್ನು ಗುಣಪಡಿಸಲು ಸಹ ಏಲಕ್ಕಿಯನ್ನು ಬಳಸಬಹುದು.

 

 

ತಲೆನೋವು ನಿವಾರಣೆಗೆ
ನಿಮಗೆ ಯಾವಾಗಲೂ ತಲೆನೋವು ಬರುತ್ತಿದ್ದರೆ ಏಲಕ್ಕಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ.

 

 

ಕ್ಯಾನ್ಸರ್ ಬರದಂತೆ ತಡೆಯುತ್ತದೆ
ಕಂದು ಏಲಕ್ಕಿಯಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ಗಳು ಕ್ಯಾನ್ಸರ್ ಕೋಶಗಳನ್ನು ಬೆಳೆಯದಂತೆ ತಡೆಗಟ್ಟುತ್ತದೆ

Advertisement
Share this on...