ಘಮಿಘಮಿಸುವ ಏಲಕ್ಕಿಯ ಆರೋಗ್ಯ ಪುರಾಣ

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 163 views

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದು ಗಾದೆ ಮಾತು. ಆದರೆ ಎಷ್ಟೊಂದು ಸಲ ನಮಗೆ ಅದು ಹೌದು ಎಂದೆನಿಸಿಬಿಡುತ್ತದೆ. ಈ ಏಲಕ್ಕಿಯ ವಿಚಾರದಲ್ಲಿಯೂ ಅಷ್ಟೇ. ಘಮಘಮ ಪರಿಮಳ ಬೀರುವ ಸಣ್ಣ ಸಾಂಬಾರ ಪದಾರ್ಥ ಏಲಕ್ಕಿಯ ಪ್ರಯೋಜನಗಳು ಹತ್ತು ಹಲವು! ಅಡುಗೆಗೆ ರುಚಿ ಹೆಚ್ಚಾಗಲು, ಘಮಿಘಮಿಸಲು ಬಳಸುವ ಏಲಕ್ಕಿ ಆರೋಗ್ಯವರ್ಧಕವೂ ಹೌದು. ಅದನ್ನು ತಿಳಿಯದ ಹಲವರು ತಾವು ಸೇವಿಸುವ ಆಹಾರದಲ್ಲಿ ಏಲಕ್ಕಿ ದೊರೆತರೆ ಅದಕ್ಕೆ ತಟ್ಟೆಯ ಬದಿಯ ಸ್ಥಾನ ಮೀಸಲು! ಕೇಳಿದರೆ ತನಗದು ಮೆಚ್ಚದು ಎಂಬ ಉತ್ತರ ರೆಡಿ ಇರುತ್ತದೆ. ಆದರೆ ಪುಟ್ಟ ಏಲಕ್ಕಿಯ ಆರೋಗ್ಯ ಲೀಲೆ ತಿಳಿದರೆ ನೀವು ತಿನ್ನದೇ ಇರಲಾರಿರಿ. ಕ್ಯಾಲ್ಸಿಯಂ, ಗಂಧಕ, ವಿಟಮಿನ್ ಗಳು ಹೇರಳವಾಗಿರುವ ಏಲಕ್ಕಿಗೆ ಆರೋಮಾಪಥಿಯಲ್ಲಿ ಸ್ಥಾನವಿದೆ. ಪರಿಮಳದ ಮೂಲಕ ರೋಗವನ್ನು ಮಾಯ ಮಾಡುವ ಆರೋಮಾಪಥಿಯಲ್ಲಿ ಏಲಕ್ಕಿ ಯನ್ನು ಉಪಯೋಗಿಸಲಾಗುತ್ತದೆ. ವಿಟಮಿನ್ ಸಿ ಇದರಲ್ಲಿ ಹೇರಳವಾಗಿದ್ದು ಇದು ಉತ್ತಮ ಆಂಟಿ ಆಕ್ಸಿಡೆಂಟ್ ನಂತೆ ಕಾರ್ಯ ನಿರ್ವಹಿಸುತ್ತದೆ. ದೇಹದಲ್ಲಿನ ರಕ್ತಸಂಚಾರವನ್ನು ಇದು ಸುಗಮಗೊಳಿಸುತ್ತದೆ. ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುವ ಶಕ್ತಿ ಇದಕ್ಕಿದೆ. ವಿಷಕಾರಿ ವಸ್ತುಗಳನ್ನು ನಿವಾರಣೆ ಮಾಡುವ ಏಲಕ್ಕಿಯು ಮೂತ್ರಪಿಂಡಗಳಲ್ಲಿ ಶೇಖರವಾಗಿರುವಂತಹ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

Advertisement

Advertisement

ಇದರಿಂದ ಮೂತ್ರಕೋಶದಲ್ಲಿ ಕಲ್ಲುಗಳಾಗುವ ಸಾಧ್ಯತೆ ತುಂಬಾ ಕಡಿಮೆ. ಬಿಸಿನೀರಿಗೆ ಏಲಕ್ಕಿ ಹಾಕಿ ಚೆನ್ನಾಗಿ ಕುದಿಸಿ, ಆ ನೀರು ಕುಡಿಯುವುದರಿಂದ ಕೆಮ್ಮು ಮತ್ತು ಗಂಟಲು ಬೇನೆಯಿಂದ ಮುಕ್ತಿ ಪಡೆಯಬಹುದು. ಇನ್ನು ಜೀರ್ಣಕ್ರಿಯೆಯನ್ನು ಸರಾಗವಾಗಿ ಸಾಗುವಂತೆ ಇದು ನೋಡಿಕೊಳ್ಳುತ್ತದೆ‌. ಅದೇ ಕಾರಣದಿಂದ ಊಟವಾದ ಬಳಿಕ ಏಲಕ್ಕಿ ಜಗಿದು ತಿಂದರೆ ಜೀರ್ಣಕ್ರಿಯೆಗೂ ಒಳ್ಳೆಯದು. ಜಠರದ ಉರಿಯನ್ನು ಶಮನ ಮಾಡುವ ಇದು ಅಜೀರ್ಣವನ್ನು ಕಡಿಮೆ ಮಾಡುತ್ತದೆ.

Advertisement

Advertisement

ಇಂತಿಪ್ಪ ಏಲಕ್ಕಿ ಕೇವಲ ಆರೋಗ್ಯವರ್ಧಕ ಮಾತ್ರವಲ್ಲ, ಬದಲಿಗೆ ಸೌಂದರ್ಯ ವರ್ಧಕವೂ ಹೌದೆನ್ನಿ! ತ್ವಚೆಗೆ ಹೊಳಪನ್ನು ನೀಡುವ ಏಲಕ್ಕಿಯನ್ನು ಪುಡಿ ಮಾಡಿ ಅದಕ್ಕೆ ಒಂದು ಚಿಟಿಕೆ ಅರಿಶಿನ ಹಾಕಿ ದಪ್ಪನೆಯ ಹಾಲಿಗೆ ಇವನ್ನು ಬೆರೆಸಿ ಪೇಸ್ಟ್ ತಯಾರಿ ಮಾಡಬೇಕು. ನಂತರ ಇದನ್ನು ಮುಖಕ್ಕೆ ಹಚ್ಚಿ ಒಂದು ಇಪ್ಪತ್ತು ನಿಮಿಷ ಹಾಗೇ ಬಿಡಬೇಕು. ನಂತರ ತೊಳೆದರೆ ಮುಖ ಕಾಂತಿಯುತವಾಗುತ್ತದೆ. ಇದರ ಜೊತೆಗೆ ಏಲಕ್ಕಿ ಪುಡಿಗೆ ಜೇನು ಬೆರೆಸಿ ಇದನ್ನು ಮುಖಕ್ಕೆ ಹಚ್ಚಬೇಕು. ಒಂದರ್ಥದಲ್ಲಿ ಇದು ಸ್ಕ್ರಬ್ ನ ಹಾಗೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ಹಚ್ಚಿದ ಹತ್ತು ನಿಮಿಷ ಹಾಗೇ ಬಿಡಬೇಕು. ನಂತರ ತೊಳೆದರೆ ಮುಖದ ಅಂದಕ್ಕೆ ಒಳ್ಳೆಯದು.
– ಅಹಲ್ಯಾ

ಕೊಲ್ಲೂರು ಮೂಕಾಂಬಿಕಾ ದೇವಿ ಜ್ಯೋತಿಷ್ಯ ಕೇಂದ್ರ
ಶ್ರೀ ಕಾಳಿಮಾತಾ ದೇವಿ ಉಪಾಸಕರಾದ ಪಂಡಿತ್ ಶ್ರೀ ವಾಸುದೇವ ಗುರೂಜಿ ಅವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಶತ್ರು ಕಾಟ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಮಾಟ ಮಂತ್ರ ನಿವಾರಣೆ ಆರೋಗ್ಯ ಹಣಕಾಸು ಮದುವೆ ಸಂತಾನ ಪ್ರೇಮ ವಿವಾಹ ಮನೆಯಲ್ಲಿ ಅಶಾಂತಿ ಗಂಡ ಹೆಂಡತಿ ಕಲಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ 3 ದಿನದಲ್ಲಿ  ಫೋನಿನ ಮೂಲಕ ಶಾಶ್ವತ ಪರಿಹಾರ. ph : 8970080017 ಇಂದೇ ಕರೆ ಮಾಡಿ.

Advertisement
Share this on...