ಮನೆಯಲ್ಲಿರುವ ಕ್ಯಾರೆಟ್‌ ನಿಂದಾಗಿಯೇ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು

in ಕನ್ನಡ ಆರೋಗ್ಯ 62 views

ನಾವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವುದರಿಂದ ಸೌಂದರ್ಯವರ್ಧಕವನ್ನು ಮನೆಯಲ್ಲಿಯೇ ಮಾಡಿಕೊಳ್ಳಬೇಕಿದೆ. ಅದರಲ್ಲೂ ವಿಟಮಿನ್ ಎ ಜೊತೆ ಪೋಷಕಾಂಶಗಳ ಆಗರ ಕ್ಯಾರೆಟ್ . ಇದನ್ನು ಬಳಸಿ ಚರ್ಮದ ಸೌಂದರ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದೆಂಬುದನ್ನು ತಿಳಿಸಲಾಗಿದೆ.

Advertisement

 

Advertisement

Advertisement

 

Advertisement

ಹೌದು ಕ್ಯಾರೆಟ್ ಪೇಸ್ಟ್‌ನೊಂದಿಗೆ ಹಾಲಿನ ಪುಡಿ ಎರಡು ಚಮಚ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ತ್ವಚೆಯ ಜೀವಕೋಶಗಳನ್ನು ಪೋಷಿಸುವುದರ ಜೊತೆಗೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

 

 

ಇನ್ನು ನಿಂಬೆ ಹಣ್ಣಿನ ಸಿಪ್ಪೆ ಪುಡಿಯನ್ನು ಕ್ಯಾರೆಟ್‌ ರಸದೊಂದಿಗೆ ಮಿಶ್ರಣ ಮಾಡಿ. ಇದನ್ನು ವಾರಕ್ಕೆ ಎರಡು ಬಾರಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ ಇದರಿಂದ ಮೊಡವೆ ಕಲೆ ನಿವಾರಣೆಯಾಗುತ್ತದೆ. ಚರ್ಮ ಎಣ್ಣೆಯಿಂದ ಕೂಡಿದ್ದರೆ, ಮುಲ್ತಾನಿ ಮಿಟ್ಟಿಗೆ ಕ್ಯಾರೆಟ್‌ ರಸವನ್ನು ಸೇರಿಸಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷದ ನಂತರ ಬಿಸಿ ನೀರಿನಿಂದ ತೊಳೆದರೆ ಕಾಂತಿ ವೃದ್ಧಿಯಾಗುತ್ತದೆ.

 

 

ಚರ್ಮ ಬಿಸಿಲಿನಿಂದ ಕಪ್ಪಾಗಿದ್ದರೆ ಕ್ಯಾರೆಟ್‌ ಜ್ಯೂಸ್‌ ಪ್ರತಿದಿನ ಸೇವಿಸಿ ಇದರಿಂದ ಚರ್ಮದ ಬಣ್ಣ ತಿಳಿಯಾಗುತ್ತದೆ. ಮಿಟಮಿನ್‌ ‘ಎ’ ಕಣ್ಣಿಗೂ ಒಳ್ಳೆಯದು. ತೆಂಗಿನಕಾಯಿ ತುರಿದು ಅದನ್ನು ರುಬ್ಬಿ ರಸ ತೆಗೆಯಿರಿ. ಇದಕ್ಕೆ ಕ್ಯಾರೆಟ್‌ ಪೇಸ್ಟ್‌ ಮಿಶ್ರಣ ಮಾಡಿ ರಸವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ 15 ನಿಮಿಷ ಬಿಟ್ಟು ತೊಳೆಯಿರಿ. ಇದು ಒಣ ಚರ್ಮಕ್ಕೆ ಕಾಂತಿ ನೀಡುತ್ತದೆ
ಕ್ಯಾರೆಟ್ ಸಿಪ್ಪೆಯನ್ನು ಬಳಸಿ ಪೆಡಿಕ್ಯೂರ್, ಮೆನಿಕ್ಯೂರ್ ಮಾಡಬಹುದು. ಕ್ಯಾರೆಟ್‌ ಸಿಪ್ಪೆ ಜೊತೆ ಕಲ್ಲುಪ್ಪು ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ ಇದನ್ನು ಪಾದ ಮತ್ತು ಹಸ್ತಕ್ಕೆ ಹಚ್ಚಿ ಮಸಾಜ್ ಮಾಡಿ. ನಂತರ ಬಿಸಿ ನೀರಿನಲ್ಲಿ ತೊಳೆಯಿರಿ. ನಿರಂತರವಾಗಿ ಲಿಪ್‌ಸ್ಟಿಕ್ ಬಳಸುವುದರಿಂದ ತುಟಿ ಕಪ್ಪಾಗುತ್ತದೆ. ಲಿಪ್‌ಸ್ಟಿಕ್‌ ಬದಲು ದಿನ ರಾತ್ರಿ ಕ್ಯಾರೆಟ್‌ ರಸದ ಜೊತೆ ಜೇನು ಸೇರಿಸಿ ಹಚ್ಚುವುದರಿಂದ ತುಟಿಯ ಬಣ್ಣ ತಿಳಿಯಾಗುತ್ತದೆ.

Advertisement
Share this on...