ಮ್ಯಾಂಗೋಸ್ಟೀನ್ ಹಣ್ಣಿನ ಹೇರಳವಾದ ಆರೋಗ್ಯ ಸಂಬಂಧಿ ಪ್ರಯೋಜನಗಳೇನು ಗೊತ್ತಾ!?
ಹಣ್ಣುಗಳ ರಾಣಿ ಮತ್ತು ದೇವರ ಆಹಾರ ಎಂದು ಕರೆಯಲ್ಪಡುವ ಹಣ್ಣೊಂದಿದೆ. ಅದೇ ಮ್ಯಾಂಗೋಸ್ಟೀನ್. ಇದು ಸಿಹಿಯಾದ ಹಣ್ಣು. ಹೆಸರು ಕೇಳಿದೊಡನೇ ಯಾವುದೋ ವಿದೇಶಿ ಹಣ್ಣು ಅಂದ್ಕೊಂಡ್ರಾ!? ಆದರೆ ತಪ್ಪು. ಇದನ್ನು ಭಾರತದಲ್ಲೂ ಬೆಳೆಯುತ್ತಾರೆ. ಇನ್ನೂ ವಿಶೇಷ ಏನಪ್ಪಾ ಅಂದ್ರೆ ಮ್ಯಾಂಗೋಸ್ಟೀನನ್ನು ಔಷಧೀಯ ಗುಣಗಳಿಗಾಗಿಯೂ ಹೆಚ್ಚು ಬಳಸುತ್ತಾರೆ. ಮ್ಯಾಂಗೋಸ್ಟೀನ್ ಹೆಚ್ಚಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುವ ಹಣ್ಣು. ಮೇಲ್ನೋಟಕ್ಕೆ ಪುನರ್ಪುಳಿಯ ರೀತಿಯೇ ಕಾಣುವ ಈ ಹಣ್ಣಿನ ರಸ, ಕೆತ್ತೆಯನ್ನೂ ಮದ್ದಿಗಾಗಿ ಉಪಯೋಗಿಸುತ್ತಾರೆ. ಇದನ್ನು ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಹೆಚ್ಚಾಗಿ ಕಾಣಬಹುದು.…