ಅಂದು ಊಟಕ್ಕೆ ಪರದಾಡುತ್ತಿದ್ದ ಆಟಗಾರ ಇಂದು ಕೊಟ್ಯಧಿಪತಿ; ಮೆಚ್ಚಲೇಬೇಕು ಈ ಕ್ರಿಕೆಟಿಗನ ಪರಿಶ್ರಮ!
ಯಾವ ಕ್ಷೇತ್ರದಲ್ಲಿಯೇ ಆಗಲಿ ಪರಿಶ್ರಮ, ತಾಳ್ಮೆ, ಪ್ರಾಮಾಣಿಕತೆ ಇದ್ದರೆ ಸನ್ಮಾನವು ಅವರನ್ನು ಅರಸಿ ಬರುತ್ತದೆ. ಅವರ ಕನಸು ಈಡೇರುತ್ತದೆ ಎಂಬ ಮಾತು ಸುಳ್ಳಲ್ಲ. ಇದಕ್ಕೆ ಅದೃಷ್ಟವೂ ಸೇರಿಕೊಂಡರೆ ಆ ಮಾತು ಮತ್ತೆ ಕೇಳುವುದೇ ಬೇಡ. ಹಾಗಾಗಿ ಸಾಧನೆ ಮಾಡಬೇಕು ಎನ್ನುವ ಉದ್ದೇಶ ಇರುವವನು ಮೊದಲು ಪ್ರಾಮಾಣಿಕವಾಗಿ ಪ್ರರಿಶ್ರಮ ಪಡಬೇಕು, ಅವಮಾನವಾಯಿತು ಎಂದು ಕುಗ್ಗಬಾರದು, ತಾಳ್ಮೆಯಿಂದ ತನ್ನ ಗುರಿಯತ್ತ ದೃಷ್ಟಿ ನೆಟ್ಟಿರಬೇಕು. ಆಗ ಒಂದು ದಿನ ಸನ್ಮಾನ ಅಂತಹವರನ್ನು ಹುಡುಕಿಕೊಂಡು ಬರುತ್ತದೆ. ಪ್ರತಿಭೆಗೆ ಬಡವ-ಶ್ರೀಮಂತ ಎನ್ನುವ ಭೇದಭಾವವಿಲ್ಲ. ಹಾಗಾಗಿ…