ಮಾಸ್ಕ್ನಂತೆ ಪಕ್ಷಿಗೂಡು ಧರಿಸಿ ಬಂದ ವೃದ್ಧ…ಇವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಅಂದ್ರು ನೆಟಿಜನ್ಸ್..!
ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು, ಬಿಸಿನೀರು ಕುಡಿಯುವುದು…ಹೀಗೆ ಇನ್ನಿತರ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕೊರೊನಾ ಸೋಂಕಿಗೆ ಒಳಗಾಗುವ ಯಾವುದೇ ಭಯವಿಲ್ಲ ಎಂದು ವೈದ್ಯರು ಹೇಳುತ್ತಾ ಬಂದಿದ್ದಾರೆ. ಆದರೆ ಬಹಳಷ್ಟು ಜನರು ಇದ್ಯಾವುದನ್ನೂ ಲೆಕ್ಕಿಸದೆ ಸೋಂಕಿಗೆ ಒಳಗಾಗಿ ಇತರರಿಗೂ ಸೋಂಕು ಹರಡಲು ಕಾರಣರಾಗುತ್ತಿದ್ದಾರೆ. ಕಳೆದ 2 ತಿಂಗಳಿಂದ ಮತ್ತೆ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು 2ನೇ ಅಲೆಗೆ ಬಹಳಷ್ಟು ಜನರು ಬಲಿಯಾಗುತ್ತಿದ್ದಾರೆ. ಬೆಂಗಳೂರು ರಣರಂಗವಾಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲ ಹೆಚ್ಚಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳದ ಸೆಲಬ್ರಿಟಿಗಳು…