ಲಾಕ್ ಡೌನ್ ಸಮಯದಲ್ಲಿ ಹೆಚ್ಚು ಸಂಭಾವನೆ ಪಡೆದ ನಟಿಮಣಿಯರು, ಅದು ಹೇಗೆ ಗೊತ್ತಾ?

in ಮನರಂಜನೆ/ಸಿನಿಮಾ 54 views

ಲಾಕ್ ಡೌನ್ ಪ್ರಪಂಚದಾದ್ಯಂತ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಈಗಾಗಲೇ ನಿರ್ಮಾಪಕರಿಗೂ ಇದರ ಬಿಸಿ ತಟ್ಟಿದೆ. ಇನ್ನು ಸೆಲೆಬ್ರಿಟಿಗಳ ವಿಚಾರಕ್ಕೆ ಬರುವುದಾದರೆ ಉದ್ಘಾಟನೆಗಳು ಮತ್ತು ಬ್ರಾಂಡ್ ಪ್ರಚಾರಕ್ಕೆ ಯಾವಾಗಲೂ ನಟ-ನಟಿಯರು ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು. ಆದರೆ ಕೊರೊನಾ ವೈರಸ್’ನಿಂದ ಲಾಕ್ ಡೌನ್ ಆದ ಪರಿಣಾಮ ಜಾಹೀರಾತುಗಳ ಚಿತ್ರೀಕರಣ ಸೇರಿದಂತೆ ಎಲ್ಲಾ ಶೂಟಿಂಗ್’ಗಳನ್ನು ಸದ್ಯ ಸ್ಥಗಿತಗೊಳಿಸಿದೆ. ಇದರಿಂದಾಗಿ ಅನೇಕ ನಟಿಯರು ಭಾರಿ ಮೊತ್ತದ ಹಣವನ್ನು ಕಳೆದುಕೊಂಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಸ್ಟಾರ್ ನಟಿಯರು ಅಧಿಕ ಹಣವನ್ನು ಜೇಬಿಗೆ ಹಾಕಿಕೊಳ್ಳಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಹೌದು, ಮೂಲಗಳ ಪ್ರಕಾರ ಸ್ಟಾರ್ ನಟಿಯರಾದ ಸಮಂತಾ, ಕಾಜಲ್, ರಾಕುಲ್ ಪ್ರೀತ್ ಸಿಂಗ್, ತಮನ್ನಾ ಮತ್ತು ರಶ್ಮಿಕಾ ಅವರು ಬ್ರಾಂಡ್ಗಳನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮವನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ.

Advertisement

 

Advertisement


ಈ ನಟಿಯರು ಬ್ರಾಂಡ್ಗಳನ್ನು ಉತ್ತೇಜಿಸಲು ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಮಿಂತ್ರಾ ಪ್ರಚಾರ ಮಾಡುತ್ತಿದ್ದರೆ, ಪೂಜಾ ಹೆಗ್ಡೆ ‘ಸ್ವಾಗ್ ಸೆ ಸೊಲೊ’ ಅಭಿಯಾನ ನಡೆಸುತ್ತಿದ್ದಾರೆ. ಇನ್ನು ಕಾಜಲ್, ತಮನ್ನಾ ಮತ್ತು ರಾಕುಲ್ ವಿವಿಧ ಅಂತರರಾಷ್ಟ್ರೀಯ ಬ್ರಾಂಡ್ಗಳನ್ನು ಪ್ರಚಾರ ಮಾಡುವಲ್ಲಿ ನಿರತರಾಗಿದ್ದಾರೆ. ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಬ್ರ್ಯಾಂಡ್ಗಳನ್ನು ಅನುಮೋದಿಸಲು ಈ ನಟಿಯರು ಭಾರಿ ಸಂಭಾವನೆ ಪಡೆಯುತ್ತಿದ್ದಾರೆ.

Advertisement


ಅಂದಹಾಗೆ ಕೆಲವು ರಾಜ್ಯ ಸರ್ಕಾರಗಳು ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿ, ಶೀಘ್ರದಲ್ಲೇ ಚಿತ್ರೀಕರಣ ಮುಂದುವರಿಸುವಂತೆ ಸ್ಪಷ್ಟಪಡಿಸಿವೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಇತ್ತೀಚಿನ ಮಾಹಿತಿಗಳ ಪ್ರಕಾರ ಟಾಲಿವುಡ್’ನಲ್ಲಿ ವಕೀಲ್ ಸಾಬ್, ಪುಷ್ಪಾ, ಸರ್ಕಾರ್ ವಾರಿ ಪಾಟಾ ಮುಂತಾದ ಅನೇಕ ಬಿಗ್ ಹೀರೋಗಳ ಚಿತ್ರಗಳು ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣ ನಡೆಸಲು ರೆಡಿ ಮಾಡಿಕೊಳ್ಳಲಾಗಿದೆ. ಕ್ರಾಕ್ನಂತಹ ಇತರ ಸಣ್ಣ ಮತ್ತು ಮಧ್ಯಮ ಚಿತ್ರಗಳು ಜುಲೈನಲ್ಲಿ ಚಿತ್ರೀಕರಣ ನಡೆಸಲು ಸಿದ್ಧತೆ ನಡೆಸುತ್ತಿವೆ.

Advertisement

 


ಮತ್ತೊಂದೆಡೆ ಸ್ಟಾರ್’ಗಳು ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಭಯಭೀತರಾಗಿದ್ದಾರೆಂದು ಹೇಳಲಾಗುತ್ತಿದೆ. ಏಕೆಂದರೆ ಅವರು ಮೇಕಪ್ ಮಾಡಿಸಿಕೊಳ್ಳುವಾಗ ಸಿಬ್ಬಂದಿಯೊಂದಿಗೆ ನಿಕಟವಾಗಿ ವ್ಯವಹರಿಸಬೇಕು ಮತ್ತು ನಿಕಟ ದೃಶ್ಯಗಳಲ್ಲಿಯೂ ಸಹ ಸಾಮಾಜಿಕ ಅಂತರವನ್ನು ಮತ್ತು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಸಾಂಕ್ರಾಮಿಕ ಪ್ರಕರಣಗಳು ಹೆಚ್ಚುತ್ತಿರುವಾಗ ಸ್ಟಾರ್’ಗಳು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಅಪಾಯಕ್ಕೆ ದೂಡಲು ಬಯಸುವುದಿಲ್ಲ. ಆದರೂ ಈ ಎಲ್ಲ ಕಳವಳಗಳ ಮಧ್ಯೆ, ಶೂಟಿಂಗ್ ಪ್ರಾರಂಭವಾಗುವುದೇ ಕಾದು ನೋಡೋಣ.

Advertisement
Share this on...