ಸೆಲೆಬ್ರಿಟಿಗಳೆಲ್ಲಾ ಈ ಮಗುವನ್ನು ಫಾಲೋ ಮಾಡುತ್ತಿದ್ದಾರೆ, ಯಾಕೆ ಗೊತ್ತಾ ?

in ಮನರಂಜನೆ 23 views

ಸಾಮಾನ್ಯವಾಗಿ ನಾವೆಲ್ಲಾ ವಯಸ್ಸಿಗೆ ಬಂದ ಮೇಲೆ ಅಡುಗೆ ಮಾಡುವುದಕ್ಕೆ ಪ್ರಯತ್ನಿಸುತ್ತೇವೆ ಅಲ್ಲವೇ, ಆದರೆ ಈ ವಿಡಿಯೋ ನೋಡಿದರೆ ಅಡುಗೆ ಮಾಡುವುದಕ್ಕೆ ವಯಸ್ಸು ಬೇಕಿಲ್ಲ, ಅದರ ಮೇಲೆ ಆಸಕ್ತಿ, ಪ್ರೀತಿ ಇದ್ದರೆ ಸಾಕು ಅನಿಸುತ್ತದೆ. ಅಂದಹಾಗೆ ನಾವಿಲ್ಲಿ ಹೇಳಲು ಹೊರಟಿರುವ ಬಾಣಸಿಗ ವಿಶ್ವದಾದ್ಯಂತ ಫೇಮಸ್. ಅವನ ಆಹಾರವನ್ನು ನೋಡಿ ಈಗ ಪ್ರಪಂಚದಾದ್ಯಂತ ಪ್ರಶಂಸಿಸಲಾಗುತ್ತದೆ. ಹೌದು, ಆ ಬಾಣಸಿಗನ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ, ಆಶ್ಚರ್ಯಕರ ಸಂಗತಿಯೆಂದರೆ, ಈ ಬಾಣಸಿಗ ಯುವಕನಲ್ಲ, ಮಗು.

Advertisement

 

Advertisement

Advertisement

ಲಾಕ್ ಡೌನ್ ಸಮಯದಲ್ಲಿ ಜನರು ಅಡುಗೆಮನೆಯಲ್ಲಿ ವಿಭಿನ್ನ ರೀತಿಯ ಅಡುಗೆಯನ್ನು ಹೇಗೆ ತಯಾರಿಸಬೇಕೆಂದು ಕಲಿಯುತ್ತಿದ್ದರೆ, ಈ ಚಿಕ್ಕ ಮಗು ಹೊಸ ಅಡುಗೆಯನ್ನು ಹೇಗೆ ತಯಾರಿಸಬೇಕೆಂದು ಜನರಿಗೆ ಕಲಿಸುತ್ತಿದೆ. ಇದೇ ಕಾರಣಕ್ಕಾಗಿ ಮಗುವಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದೆ.
ಈ ಮಗುವಿನ ಹೆಸರು ಕೋಬೆ. ಮೂಲತಃ ಅಮೆರಿಕ ನಿವಾಸಿ. ಜನರು ತುಂಬಾ ಇಷ್ಟಪಡುವ ಪಿಜ್ಜಾದಿಂದ ಹಿಡಿದು ಕೇಕ್ ಮತ್ತು ಚಿಕನ್ಗೆ ಹೇಗೆ ಬೇಯಿಸುವುದು ಎಂದು ತಮಾಷೆಯಾಗಿ ಜನರಿಗೆ ಕಲಿಸಿಕೊಡುತ್ತದೆ. ಇನ್ಸ್ಟಾಗ್ರಾಮ್’ನಿಂದ ಯೂಟ್ಯೂಬ್’ವರೆಗೆ, ಕೋಬೆ ಅಡುಗೆ ಮಾಡುವ ಕಲೆಯಿಂದಾಗಿ ಎಲ್ಲೆಡೆ ಪ್ರಸಿದ್ಧವಾಗಿದ್ದಾನೆ. ಇದೀಗ ಜನರು ಮಗುವನ್ನು ‘ದೇವರು ಕೊಟ್ಟ ವರ’ ಎಂದೇ ಕರೆಯುತ್ತಿದ್ದಾರೆ.

Advertisement

 


ಕೋಬೆಯೊಳಗೆ ಬಾಣಸಿಗನಾಗುವ ಈ ಕಲೆ ಎಲ್ಲಿಂದ ಬಂತು ?. ಅದರ ಹಿಂದೆಯೂ ಒಂದು ಕುತೂಹಲಕಾರಿ ಕಥೆ ಇದೆ. ಕೋಬೆಯ ತಾಯಿ ಆಶ್ಲೇ ಒಂದು ದಿನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಗ ಕೋಬೆ ಅವಳನ್ನು ಕಾಪಿ ಮಾಡುತ್ತಿದ್ದ. ಮೊದಲಿಗೆ ಆಶ್ಲೇ ಅದರ ಬಗ್ಗೆ ಅಷ್ಟು ಗಮನಹರಿಸಲಿಲ್ಲ, ಆದರೆ ಅದೇ ತರಹ ಅವನು ಪದೇ ಪದೇ ಮಾಡಲು ಯತ್ನಿಸಿದಾಗ ಕೋಬೆಗೆ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ಮುಕ್ತ ಅವಕಾಶ ಮಾಡಿಕೊಟ್ಟಳು. ಈ ರೀತಿಯಾಗಿ ಕೋಬೆ ಬಾಣಸಿಗನಾದ.
ನಿಜಕ್ಕೂ ಕೋಬೆ ವಿಶ್ವಾದ್ಯಂತ ಪ್ರಸಿದ್ಧನನ್ನಾಗಿ ಮಾಡಿದ ಶ್ರೇಯಸ್ಸು ಅವನ ಹೆತ್ತವರಿಗೆ ಸಲ್ಲುತ್ತದೆ.

 

 

View this post on Instagram

 

I LOVE @hormel.pepperoni and i’m so excited to team up with the brand to bring great pizza to all my new friends! Today I am demo’ing a cast iron skillet pizza recipe created special for me! You can find the recipe at @hormel.pepperoni or in my story! – Not only that, I’ll be giving away a Hormel Pepperoni pizza-making kit and a six-month supply of pepperoni to one of you today. No reposting or tagging friends necessary, simply follow the instructions below! – 1. Follow @kobe_yn & @hormel.pepperoni – 2. Comment below with your favorite pizza toppings, starting with #hormelpepperoni of course! – This contest is in no way sponsored by, administered, or associated with Instagram, Inc. By entering, entrants confirm they are 13+ years of age, release Instagram of responsibility, and agree to Instagram’s term of use. Entries close 11:59PM Central Time on Wednesday 5/20/2020. Winner will be chosen at random by Pickerist and posted here by EOD Thursday 5/21/2020. #sponsored #ad

A post shared by KOBE EATS (@kobe_yn) on

ಕೋಬೆ ಪಾಲಕರು ತಮ್ಮ ಮಗುವಿನ ಅಡುಗೆಯ ವೀಡಿಯೊಗಳನ್ನು ಚಿತ್ರೀಕರಿಸುತ್ತಾ ಇರುತ್ತಾರೆ. ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾನೆ. ಇನ್ಸ್ಟಾಗ್ರಾಮ್ನಲ್ಲಿ ಕೋಬೆಗೆ 9 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದು, ಬಾಲಿವುಡ್ ಸೆಲೆಬ್ರಿಟಿಗಳಾದ ಕರಣ್ ಜೋಹರ್, ಅಥಿಯಾ ಶೆಟ್ಟಿ, ಪ್ರಾಚಿ ದೇಸಾಯಿ, ರಿತ್ವಿಕ್ ಧಂಜನಿ ಮತ್ತು ಕವಿತಾ ಕೌಶಿಕ್ ಕೂಡ ಕೋಬೆಯನ್ನು ಫಾಲೋ ಮಾಡುತ್ತಾರೆ. ಕೋಬೆ ಎಷ್ಟು ಪ್ರಸಿದ್ಧರಾಗಿದ್ದಾನೆಂದರೆ, ಅವನ ಪ್ರತಿಯೊಂದು ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ.

Advertisement
Share this on...