ಬಾಲಿವುಡ್’ನ ಈ ಹಾಟ್ ನಟಿಯರು ಸ್ಕೂಲ್ ಡೇಸ್ ನಲ್ಲಿ ಹೇಗಿದ್ರು ಗೊತ್ತಾ ?

in ಮನರಂಜನೆ 124 views

ಬಾಲಿವುಡ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಮತ್ತು ದಿಶಾ ಪಟಾನಿ ತಮ್ಮ ವಿಶೇಷ ನಟನೆ, ಸೌಂದರ್ಯದಿಂದಾಗಿ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಭಾರತ ಚಿತ್ರರಂಗದ ಸ್ಟಾರ್ ನಟಿಯರ ಪಟ್ಟಿಯಲ್ಲಿ ಇವರುಗಳ ಹೆಸರೂ ಇದೆ. ಅದರಲ್ಲೂ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ನಾವು ಈ ಮೂವರು ನಟಿಯರ ಶಾಲಾ ದಿನಗಳ ಬಗ್ಗೆ ಹೇಳಲಿದ್ದೇವೆ. ಹೌದು, ಈ ನಟಿಯರು ತಮ್ಮ ಸ್ಕೂಲ್ ಡೇಸ್ ನಲ್ಲಿ ಹೇಗೆ ಕಾಣಿಸುತ್ತಿದ್ದರು ಎಂಬುದನ್ನು ನಾವು ಫೋಟೋಗಳ ಮೂಲಕ ತೋರಿಸುತ್ತಿದ್ದೇವೆ.

Advertisement

 

Advertisement

Advertisement

ಬಾಲಿವುಡ್  ನ ದೇಸಿ ಗರ್ಲ್ ಎಂದೇ ಖ್ಯಾತಿ ಪಡೆದ ಪ್ರಿಯಾಂಕಾ ಚೋಪ್ರಾ ಬಾಲ್ಯದಲ್ಲಿ ತುಂಬಾ ಸರಳವಾಗಿ ಕಾಣುತ್ತಿದ್ದರು. ವೈದ್ಯ-ದಂಪತಿಗಳಾದ ಅಶೋಕ್ ಚೋಪ್ರಾ ಮತ್ತು ಮಧು ಅಖೌರಿ ಅವರ ಮಗಳಾದ ಪ್ರಿಯಾಂಕಾ, ತಮ್ಮ ಬಾಲ್ಯದ ಜೀವನವನ್ನು ಉತ್ತರ ಪ್ರದೇಶದ ಬರೇಲಿ, ಮೆಸಾಚುಸೆಟ್ಸ್ನ ನ್ಯೂಟನ್ ಮತ್ತು ಅಯೊವಾದ ಸಿಡಾರ್ ರಾಪಿಡ್ಸ್ನಲ್ಲಿ ಕಳೆದರು. ಆಕೆಯ ತಂದೆ ಭೂಸೇನೆಯಲ್ಲಿದ್ದ ಕಾರಣ ಅವರ ಕುಟುಂಬ ಆಗಿಂದಾಗ್ಗೆ ಸ್ಥಳಾಂತರಗೊಳ್ಳುತ್ತಿತ್ತು.ಪ್ರಿಯಾಂಕ ಆರಂಭದಲ್ಲಿ ಎಂಜಿನಿಯರಿಂಗ್ ಅಥವಾ ಮನೋವೈದ್ಯಶಾಸ್ತ್ರದ ಅಧ್ಯಯನ ಮಾಡಲು ಆಸಕ್ತಿ ಹೊಂದಿದ್ದರು. ನಂತರ ಕಾಲೇಜು ವ್ಯಾಸಂಗ ಮುಂಬಯಿಯ ಜೈ ಹಿಂದ್ ಕಾಲೇಜ್ನಲ್ಲಿ ಆರಂಭವಾಯಿತು. ಆದರೆ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದಾಗ ಕಾಲೇಜು ವ್ಯಾಸಂಗವನ್ನು ಮೊಟಕುಗೊಳಿಸಿದರು.

Advertisement

 

ಮತ್ತೊಬ್ಬ ಬಾಲಿವುಡ್ ನಟಿ ಕತ್ರಿನಾ ಕೈಫ್ ಹೆಚ್ಚಾಗಿ ಶಿಕ್ಷಣ ಪಡೆದದ್ದು ಟ್ಯೂಷನ್ ಟೀಚರ್ ಮೂಲಕ. ಹಾಂಗ್ ಕಾಂಗ್ನಲ್ಲಿ ಜನಿಸಿದ ಕತ್ರಿನಾ, ಬೆಳೆದದ್ದು ಇಂಗ್ಲೆಂಡ್ ನಲ್ಲಿ. ಕತ್ರೀನಾರ ತಂದೆ, ‘ಕೈಫ್’ ಅಪ್ಪಟ ಕಾಶ್ಮೀರದ ಮುಸಲ್ಮಾನರು. ತಾಯಿ, ‘ಸುಸಾನ್,’ ಬ್ರಿಟಿಷ್ ಮೂಲದ ಕ್ರಿಶ್ಚಿಯನ್ನರು. ಈಗ ಭಾರತದಲ್ಲಿ ಕತ್ರೀನಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿರುವ ಕತ್ರಿನಾ, 14 ನೇ ವಯಸ್ಸಿನಲ್ಲೇ ‘ಮಾಡೆಲಿಂಗ್,’ ಮಾಡಲು ಶುರು ಮಾಡಿದರು. ಮನೆಯ ಪರಿಸ್ಥಿತಿ ಮತ್ತು ಬಿಡುವಿಲ್ಲದ ವಾತಾವರಣದಿಂದಾಗಿ ಸ್ಕೂಲ್ ನಂತರ ಕತ್ರೀನಾ ಕಾಲೇಜು ಮೆಟ್ಟಿಲು ಹತ್ತಲೇ ಇಲ್ಲ.

 

 


ಟೈಗರ್ ಶ್ರಾಫ್ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿರುವ ದಿಶಾ ಪಟಾನಿ, ಉತ್ತರ ಪ್ರದೇಶದ ಬರೇಲಿಯಲ್ಲಿ ಶಿಕ್ಷಣ ಪಡೆದರು. ಬಾಲಿವುಡ್ನ ಅತ್ಯಂತ ಸುಂದರ ನಟಿಯರಲ್ಲಿ ದಿಶಾ ಕೂಡ ಒಬ್ಬರು. ದಿಶಾ 2015 ರಲ್ಲಿ ವರುಣ್ ತೇಜ್ ಅವರೊಂದಿಗೆ ತೆಲುಗು ಚಿತ್ರ ಲೋಫರ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

Advertisement
Share this on...