ದೊಡ್ಡ ಹಿನ್ನೆಲೆ ಇದ್ದರೂ ಇನ್ನೂ ಸ್ಟಾರ್​ಪಟ್ಟಕ್ಕಾಗಿ ಸ್ಯಾಂಡಲ್​​​ವುಡ್​​​ನಲ್ಲಿ ಹೋರಾಡುತ್ತಿರುವ ನಟರು ಇವರು !

in ಸಿನಿಮಾ 62 views

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಬಹಳ ಕಷ್ಟಪಟ್ಟು ಮುಂದೆ ಬಂದಿದ್ದಾರೆ. ಬಾಡಿಗೆ ಮನೆಯಲ್ಲಿ ಉಳಿದುಕೊಂಡು ಮನೆ ಬಾಡಿಗೆ ಕಟ್ಟಲು ಆಗದವರು, ಊಟಕ್ಕೂ ಕಷ್ಟ ಪಟ್ಟವರಿದ್ದಾರೆ. ತಮ್ಮ ಶ್ರಮ ಹಾಗೂ ಅದೃಷ್ಟದಿಂದ ಸಾಕಷ್ಟು ಮಂದಿ ಸಕ್ಸಸ್​ ಪಡೆದಿದ್ದಾರೆ. ಚಿತ್ರರಂಗದಲ್ಲಿ ಕೀರ್ತಿ, ಹಣ ಗಳಿಸಿದ್ದಾರೆ. ಕೆಲವರು ಸ್ಟಾರ್​​​​ಗಳಾಗಿಯೂ ಮಿಂಚಿದ್ದಾರೆ.ಹೀಗೆ ಒಂದು ಕಾಲದಲ್ಲಿ ಚಿತ್ರರಂಗಲ್ಲಿ ಮಿಂಚಿದ ಕೆಲವೊಂದು ನಟರ ಕುಟುಂಬದ ಕುಡಿಗಳು ಬಹಳ ಸುಲಭವಾಗಿ ಚಿತ್ರರಂಗಕ್ಕೇನೋ ಎಂಟ್ರಿ ಕೊಟ್ರು. ಆದರೆ ಅವರಲ್ಲಿ ಒಬ್ಬರು, ಇಬ್ಬರಿಗೆ ಸ್ಟಾರ್ ಪಟ್ಟ ಸಿಕ್ಕಿದ್ದು ಬಿಟ್ಟರೆ ಉಳಿದವರು ಇನ್ನೂ ಒಂದು ಬ್ರೇಕ್​​​ಗಾಗಿ ಕಾಯುತ್ತಿದ್ದಾರೆ.

Advertisement

 

Advertisement

Advertisement

ವಿನಯ್ ರಾಜ್​​ಕುಮಾರ್

Advertisement

ವಿನಯ್ ರಾಜ್​​ಕುಮಾರ್, ವರನಟ ಡಾ. ರಾಜ್​​ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್​​ಕುಮಾರ್ ಅವರ ಮಗ. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿನಯ್ ರಾಜ್​ಕುಮಾರ್ ‘ಸಿದ್ದಾರ್ಥ್’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾದರು. ನಂತರ ‘ರನ್​​​​ ಆ್ಯಂಟೋನಿ’, ‘ಅನಂತು ವರ್ಸಸ್ ನುಸ್ರತ್’​​​​​​​​​​​​​​​​​​​​​ ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ಬ್ರೇಕ್ ಸಿಕ್ಕಿಲ್ಲ. ಈಗ ಅವರ ಕೈಯಲ್ಲಿ ‘ಗ್ರಾಮಾಯಣ’, ‘ಟೆನ್​’ ಎಂಬ ಚಿತ್ರವಿದೆ. ಈಗಲಾದರೂ ಅವರಿಗೆ ಸಕ್ಸಸ್ ದೊರೆಯುತ್ತಾ ಕಾದು ನೋಡಬೇಕು. ವಿನಯ್ ರಾಜ್​ಕುಮಾರ್ ಸಹೋದರ ಯುವರಾಜ್​​ಕುಮಾರ್ ಕೂಡಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಜನರು ಅವರನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

 

ಪ್ರಜ್ವಲ್ ದೇವರಾಜ್

ತಮ್ಮ ವಿಭಿನ್ನ ಮ್ಯಾನರಿಸಂನಿಂದ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ಮಿಂಚಿದ ದೇವರಾಜ್​​​​ ನಂತರ ನಾಯಕನಾಗಿಯೂ ಹೆಸರು ಮಾಡಿದವರು. ದೇವರಾಜ್​ ಪುತ್ರ ಪ್ರಜ್ವಲ್ ದೇವರಾಜ್ ‘ಸಿಕ್ಸರ್’​ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಅಪ್ಪ ಡೈನಾಮಿಕ್ ಸ್ಟಾರ್ ಎಂದು ಹೆಸರು ಗಳಿಸಿದ್ದಾರೆ. ಪುತ್ರನಿಗೆ ಡೈನಾಮಿಕ್ ಪ್ರಿನ್ಸ್ ಎಂದು ಅಭಿಮಾನಿಗಳು ಹೆಸರು ನೀಡಿದ್ದಾರೆ. ಆದರೆ ಪ್ರಜ್ವಲ್ ದೇವರಾಜ್​​​​​​ಗೆ ಅಪ್ಪನಂತೆ ಇದುವರೆಗೂ ಸ್ಟಾರ್ ಪಟ್ಟ ದೊರೆತಿಲ್ಲ.

 

ವಿನೋದ್ ಪ್ರಭಾಕರ್​​​​​​​​​​​​​​​​​​

ಮರಿ ಟೈಗರ್ ಎಂದೇ ಹೆಸರಾದ ವಿನೋದ್ ಪ್ರಭಾಕರ್ ಅವರು ಖಳನಟ, ನಾಯಕನಟರಾಗಿ ಚಿತ್ರರಂಗದಲ್ಲಿ ಮಿಚಿದ ಟೈಗರ್ ಪ್ರಭಾಕರ್ ಅವರ ಪುತ್ರ. ‘ಗಡಿಪಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಮರಿ ಟೈಗರ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿನೋದ್​​ಗೆ ಸಾಕಷ್ಟು ಅಭಿಮಾನಿಗಳಿದ್ದರೂ ಅವರಿಗೆ ಇನ್ನೂ ತಂದೆಯಂತೆ ಸ್ಟಾರ್​ಡಮ್​ ಸಿಕ್ಕಿಲ್ಲ. ಅವರೂ ಕೂಡಾ ಬ್ರೇಕ್​​​ಗಾಗಿ ಕಾಯುತ್ತಿದ್ದಾರೆ.

 

ಧರ್ಮ ಕೀರ್ತಿರಾಜ್​

ಖಳನಟ ಕೀರ್ತಿರಾಜ್​​​​​​​​​​​ ಪುತ್ರ ಧರ್ಮ ಕೀರ್ತಿರಾಜ್​ ನೋಡಲು ಚಾಕೊಲೇಟ್​​​​​​​​​​​​​ ಬಾಯ್​​ನಂತೆ ಇದ್ದಾರೆ. 80-90 ದಶಕದಲ್ಲಿ ಚಿತ್ರರಂಗದಲ್ಲಿ ಭಾರೀ ಬೇಡಿಕೆಯಿದ್ದ ನಟ ಕೀರ್ತಿರಾಜ್​​​​​​ ಪುತ್ರ ಧರ್ಮ ‘ನವಗ್ರಹ’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ನವಗ್ರಹ ಸಿನಿಮಾಗೆ ಒಳ್ಳೆ ಹೆಸರು ದೊರೆಯಿತಾದರೂ ಧರ್ಮ ಅವರಿಗೆ ಇದರಿಂದ ಹೆಸರು ಬರಲಿಲ್ಲ. ಧರ್ಮ ಇನ್ನೂ ಯಶಸ್ಸಿಗಾಗಿ ಹೋರಾಡುತ್ತಿದ್ದಾರೆ.

 

ಅಭಿಮನ್ಯು

ಉಪೇಂದ್ರ, ಸುನಿಲ್​ ಕುಮಾರ್ ದೇಸಾಯಿ ಅವರಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಕೀರ್ತಿ ಕಾಶೀನಾಥ್ ಅವರಿಗೆ ಸಲ್ಲುತ್ತದೆ. ‘ಬಾಜಿ’ ಚಿತ್ರದ ಮೂಲಕ ಕಾಶೀನಾಥ್ ತಮ್ಮ ಪುತ್ರ ಅಭಿಮನ್ಯು ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಆದರೆ ಆ ಸಿನಿಮಾ ಅಂದುಕೊಂಡಂತೆ ಯಶಸ್ವಿಯಾಗಲಿಲ್ಲ. ಇದಾದ ನಂತರ ಕೆಲವು ದಿನಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಅಭಿಮನ್ಯು ಈಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

 

ಮನುರಂಜನ್​​

ಮನುರಂಜನ್ ಅವರಿಗೆ ತಾತ ವೀರಾಸ್ವಾಮಿ ಹಾಗೂ ತಂದೆ ರವಿಚಂದ್ರನ್ ಅವರಂತ ದೊಡ್ಡ ನಿರ್ಮಾಪಕ, ನಟರ ಹಿನ್ನೆಲೆ ಇದೆ. ‘ಸಾಹೇಬ’ ಚಿತ್ರದಿಂದ ಮನು ಚಿತ್ರರಂಗಕ್ಕೆ ಬಂದರು ನಂತರ ‘ಬೃಹಸ್ಪತಿ’ ಚಿತ್ರದಲ್ಲಿ ಅವರು ನಟಿಸಿದರು. ಆದರೆ ಎರಡೂ ಸಿನಿಮಾಗಳು ಅವರಿಗೆ ಅದೃಷ್ಟನೀಡಲಿಲ್ಲ. ಸದ್ಯಕ್ಕೆ ಮನುರಂಜನ್ ‘ಮುಗಿಲುಪೇಟೆ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

 

ಸೃಜನ್ ಲೋಕೇಶ್

ಟಾಕಿಂಗ್ ಸ್ಟಾರ್ ಎಂದೇ ಹೆಸರಾಗಿರುವ ಸೃಜನ್ ಲೋಕೇಶ್​​​​​​ಗೆ ಕೂಡಾ ತಾತ ಸುಬ್ಬಯ್ಯ ನಾಯ್ಡು ಹಾಗೂ ತಂದೆ ಲೋಕೇಶ್​​​ ಅವರಂತ ದೊಡ್ಡ ಕಲಾವಿದರ ಹಿನ್ನೆಲೆ ಇದೆ. ಆದರೆ ಸೃಜನ್ ಕಿರುತೆರೆಯಲ್ಲಿ ಸಕ್ಸಸ್ ಕಂಡಿದ್ದಾರೆ. ಬೆಳ್ಳಿತೆರೆಯಲ್ಲಿ ಯಶಸ್ಸಿಗಾಗಿ ಇಂದಿಗೂ ಸೃಜನ್ ಹೋರಾಡುತ್ತಿದ್ದಾರೆ. ‘ನೀಲಮೇಘಶ್ಯಾಮ’ ಸೃಜನ್​ ಅವರ ಮೊದಲ ಚಿತ್ರ. ಈ ಚಿತ್ರದ ಮೂಲಕ ರಾಧಿಕಾ ಕುಮಾರಸ್ವಾಮಿ ಕೂಡಾ ಚಿತ್ರರಂಗಕ್ಕೆ ಬಂದರು. ಆದರೆ ರಾಧಿಕಾ ಅವರಿಗೆ ಚಿತ್ರರಂಗದಲ್ಲಿ ಬ್ರೇಕ್ ದೊರೆಯಿತೇ ವಿನ: ಸೃಜನ್​​ಗೆ ಇನ್ನೂ ದೊರೆತಿಲ್ಲ.

 

ಅಭಿಷೇಕ್​​

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ‘ಅಮರ್’ ಚಿತ್ರದ ಮೂಲಕ ಹೀರೋ ಆಗಿ ಸ್ಯಾಂಡಲ್​​​ವುಡ್​​​ಗೆ ಎಂಟ್ರಿ ಕೊಟ್ಟರು. ಅವರ ಆ್ಯಕ್ಟಿಂಗ್​​​​ಗೆ ಎಲ್ಲಾ ಕಡೆ ಪ್ರಶಂಸೆ ದೊರೆಯಿತು. ಆದರೆ ಚಿತ್ರ ಅಂದುಕೊಂಡಂತೆ ಯಶಸ್ಸು ನೀಡಲಿಲ್ಲ. ಇದೀಗ ಅಭಿಷೇಕ್ ಎರಡನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ.

 

ರಾಜವರ್ಧನ್
ಹಾಸ್ಯನಟ ಡಿಂಗ್ರಿ ನಾಗರಾಜ್ ಪುತರ ರಾಜವರ್ಧನ್. 2016 ರಲ್ಲಿ ‘ಫ್ಲೈ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಜವರ್ಧನ್ ನಂತರ ನೂರೊಂದು ನೆನಪು ಚಿತ್ರದಲ್ಲಿ ನಟಿಸಿದರು. ಆದರೆ ಅವರನ್ನು ಜನರು ಗುರುತಿಸಲಿಲ್ಲ. ಕೆಲವು ದಿನಗಳ ಬ್ರೇಕ್​​ನ ನಂತರ ರಾಜವರ್ಧನ್ ‘ಬಿಚ್ಚುಗತ್ತಿ’ ಚಿತ್ರದ ಮೂಲಕ ತಮ್ಮ ಲುಕ್ ಬದಲಿಸಿಕೊಂಡು ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಸಿನಿಮಾಗೆ ಒಳ್ಳೆ ಪ್ರಶಂಸೆ ದೊರೆಯಿತು. ಥಿಯೇಟರ್​​​ನಲ್ಲಿ ನಾಲ್ಕು ವಾರಗಳು ಪ್ರದರ್ಶನವಾಯ್ತು. ಇದೀಗ ರಾಜವರ್ಧನ್ ಮುಂದಿನ ಸಿನಿಮಾಗೆ ಹೋಂವರ್ಕ್​ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ತಾತ, ಅಪ್ಪನಂತೆ ಸ್ಟಾರ್​ಡಮ್ ಪಡೆಯಲು ಈ ಎಲ್ಲರೂ ಸತತ ಶ್ರಮ ಪಡುತ್ತಿದ್ದಾರೆ. ಇವರೆಲ್ಲರಿಗೂ ಆದಷ್ಟು ಬೇಗ ಯಶಸ್ಸು ದೊರೆಯಲಿ ಎಂದು ಹಾರೈಸೋಣ.

 

Advertisement
Share this on...