22 ನೇ ವಯಸ್ಸಿಗೆ ಕೋಟ್ಯಾಧಿಪತಿಯಾದ ಖ್ಯಾತ ಕಿರುತೆರೆ ನಟಿ !

in ಮನರಂಜನೆ 19 views

ಸ್ಟಾರ್ ಪ್ಲಸ್’ನ ‘ಏಕ್ ವೀರ್ ಕಿ ಅರ್ದಾಸ್’ ಸೀರಿಯಲ್ ನೋಡುವವರಿಗೆ ಖಂಡಿತ ಈ ನಟಿಯ ಪರಿಚಯವಿರುತ್ತದೆ. ಇಷ್ಟು ಹೇಳಿದ ಮೇಲೆ ನೀವು ಮನಸ್ಸಿನಲ್ಲಿ ಈಕೆ ದಿಗಂಗನ ಸೂರ್ಯವಂಶಿ ಅಲ್ಲವೇ ಎಂದು ಊಹೆ ಮಾಡುತ್ತಿದ್ದರೆ, ನಿಮ್ಮ ಊಹೆ ಸರಿಯಾಗಿಯೇ ಇದೆ. ಈ ಧಾರವಾಹಿಯಲ್ಲಿ ವೀರಾ ಕೌರ್ ಸಂಪೂರನ್ ಸಿಂಗ್ ಪಾತ್ರವನ್ನು ನಿರ್ವಹಿಸಿರುವ ಸೂರ್ಯವಂಶಿ ನಟಿಯಾಗಿ ಮಾತ್ರವಲ್ಲದೆ, ಗಾಯಕಿ ಮತ್ತು ಲೇಖಕಿಯಾಗಿಯೂ ಖ್ಯಾತಿ ಪಡೆದಿದ್ದಾರೆ. 7 ನೇ ವಯಸ್ಸಿಗೆ ಬಾಲ ಕಲಾವಿದೆಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಸೂರ್ಯವಂಶಿ, 2002 ರಲ್ಲಿ ಕ್ಯಾ ಹಾಡ್ಸಾ ಕ್ಯಾ ಹಕೀಕತ್ ಎಂಬ ಟಿವಿ ಸರಣಿಯೊಂದಿಗೆ ಕಿರುತೆರೆಗೆ ಪಾದಾರ್ಪಣೆ ಮಾಡಿದರು.

Advertisement

 

Advertisement

Advertisement

 

Advertisement

ಅಲ್ಲದೇ ಶಕುಂತಲಾ (2009), ಕೃಷ್ಣ ಅರ್ಜುನ್ ಮತ್ತು ರುಕ್ ಜಾನಾ ನಹಿನ್ (2011–12) ಕಾರ್ಯಕ್ರಮಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು ಸೂರ್ಯವಂಶಿ. ನಂತರ ಸ್ಟಾರ್ ಪ್ಲಸ್ ‘ನಲ್ಲಿ ‘ಏಕ್ ವೀರ್ ಕಿ ಅರ್ದಾಸ್’…ವೀರಾದಲ್ಲಿ (2012–15) ಪ್ರಮುಖ ಪಾತ್ರದಲ್ಲಿ ನಟಿಸಿದ ಮೇಲೆ ಹೆಚ್ಚು ಖ್ಯಾತಿಯನ್ನು ಗಳಿಸಿದರು.ಕಲರ್ಸ್ ಟಿವಿಯಲ್ಲಿ ಮೂಡಿಬಂದ ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋನಲ್ಲಿಯೂ ಸ್ಪರ್ಧಿಯಾಗಿದ್ದ ಸೂರ್ಯವಂಶಿ ಈಗ ಹೊಂದಿರುವ ಸಂಪತ್ತು ಎಷ್ಟಿದೆ ಎಂದು ಕೇಳಿದರೆ ಖಂಡಿತ ಬೆರಗಾಗುತ್ತೀರಾ. ಹೌದು, ಇಷ್ಟು ಚಿಕ್ಕ ವಯಸ್ಸಿಗೆ ಅಂದರೆ ತಮ್ಮ 22 ನೇ ವಯಸ್ಸಿಗೆ ಸೂರ್ಯವಂಶಿ ಸುಮಾರು 55 ಕೋಟಿ ರೂ. ಮೌಲ್ಯವುಳ್ಳ ಮನೆಯನ್ನು ಖರೀದಿಸಿದ್ದಾರೆ.

 

ಅವರು ತಮ್ಮ ಮನೆಯ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ನೀವೂ ನೋಡಬಹುದು.ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅನೇಕ ನಟಿಯರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸಿನ ಮೆಟ್ಟಿಲುಗಳನ್ನು ತಲುಪಿರುತ್ತಾರೆ. ಅವರಲ್ಲಿ ದಿಗಂಗನ ಸೂರ್ಯವಂಶಿ ಕೂಡ ಒಬ್ಬರು. ಕಿರುತೆರೆಯಲ್ಲಿ ಮಾತ್ರವಲ್ಲದೆ, ಹಿರಿತೆರೆಯಲ್ಲೂ ಕಾಣಿಸಿಕೊಂಡಿರುವ ಸೂರ್ಯವಂಶಿ, ಮುಖೇಶ್ ಭಟ್ ಮತ್ತು ಮಹೇಶ್ ಭಟ್ ಅವರ ವಿಶೇಶ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಜಲೇಬಿ ಹಾಗೂ ನಟ ಗೋವಿಂದ ಅವರೊಂದಿಗೆ ಫ್ರೈಡೇ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಾಕತಾಳೀಯವಾಗಿ, ಸೂರ್ಯವಂಶಿ ಎರಡೂ ಚಿತ್ರಗಳ ಬಿಡುಗಡೆಯ ದಿನಾಂಕ ಅಕ್ಟೋಬರ್ 12, 2018 ಆಗಿತ್ತು. 18 ಜನವರಿ 2019 ರಂದು ಬಿಡುಗಡೆಯಾದ ರಂಗೀಲಾ ರಾಜ ಚಿತ್ರದಲ್ಲಿಯೂ ಗೋವಿಂದ ಅವರೊಂದಿಗೆ ಸೂರ್ಯವಂಶಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

Advertisement
Share this on...