Kannada News ಈ ಕನ್ನಡದ ನಟಿ ಪ್ರತಿ ದಿನ ತನ್ಮ ಗಂಡನಿಂದ ಹೊಡೆಸಿಕೊಂಡು ಬೇಸತ್ತಿದ್ದಾರಂತೆ !

in News/ಸಿನಿಮಾ 112 views

2003 ರಲ್ಲಿ ತೆರೆಕಂಡು ಸೂಪರ್ ಹಿಟ್ ಆದಂತಹ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಅಭಿನಯದ ಖುಷಿ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿ ಭರವಸೆ ನಾಯಕಿ ಎಂದೇ ಪ್ರಶಂಸೆ ಗಿಟ್ಟಿಸಿಕೊಂಡವರು ನಟಿ ಚೈತ್ರ. ಆದರೆ ಆದೇನಾಯ್ತೋ ಏನೋ ಚಿತ್ರರಂಗದಲ್ಲಿ ಹೆಸರು ಮಾಡುವ ಸಮಯದಲ್ಲೇ ಪ್ರೀತಿಸಿ ವಿವಾಹವಾಗಿ ಚಿತ್ರರಂಗದಿಂದ ದೂರ ಉಳಿದು ಬಿಡುತ್ತಾರೆ. ಅಭಿನಯಿಸಿದ್ದು ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಷ್ಟೆ, ಆದರೆ ತಮ್ಮ ಅಮೋಘ ಅಭಿನಯದಿಂದ ಒಂದಿಷ್ಟು ಅಭಿಮಾನಿಗಳನ್ನು ಸಂಪಾಧಿಸಿದ್ದ ನಟಿ ಚೈತ್ರ, ನಂತರ ಲಿಕ್ಕರ್ ಬ್ಯುಸಿನೆಸ್ ಮ್ಯಾನ್ ಅವರನ್ನು ವಿವಾಹವಾಗುತ್ತಾರೆ.ವಿವಾಹದ ಬಳಿಕ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ ಸುಖ ಸಂಸಾರದತ್ತ ಮುಖ ಮಾಡಿ ಜೀವನದ ಸೆಕೆಂಡ್ ಆಫ್ ಅನ್ನು ಸುಂದರವಾಗಿ ಕಟ್ಟಿಕೊಳ್ಳಲು ಮುಂದಾದರು ನಟಿ ಚೈತ್ರಾ.ಈ ದಂಪತಿಗಳ ಪ್ರೀತಿಯ ಫಲವಾಗಿ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಜನಿಸುತ್ತವೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಚೈತ್ರಾ ಅವರು ಮತ್ತೆ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ. ಕಿರುತರೆಯಲ್ಲಿ ನಿರೂಪಣೆಗೆ  ಮುಂದಾಗುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಡದಿಯ ನಿರ್ಮಾಣ ಸಂಸ್ಥೆಯಲ್ಲಿ ಅಡುಗೆ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ಚೈತ್ರಾ ಹೊತ್ತುಕೊಳ್ಳುತ್ತಾರೆ. ಎಲ್ಲವೂ ಚೆನ್ನಾಗಿದೆ ಎನ್ನುವಾಗ ಒಮ್ಮೆಲೇ ಚೈತ್ರಾ ನನಗೆ ವಿಚ್ಛೇದನ ಬೇಕು ಎಂದು ಕೋರ್ಟ್ ಮೆಟ್ಟಿಲು ಏರಿಯೇ ಬಿಡುತ್ತಾರೆ…

Advertisement


“ಖುಷಿ” ಹಾಗೂ “ಶಿಷ್ಯ” ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಸಿನಿಮಾ ಪ್ರೇಕ್ಷಕರ ಮಧ್ಯೆ ಗುರುತಿಸಿಕೊಂಡಿದ್ದ ಚೈತ್ರಾ ತಮ್ಮ ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಡಲು ಮುಂದಾಗಿದ್ದರು. ಖುಷಿ ಚಿತ್ರದ ನಾಯಕಿಯ ಬಾಳಲ್ಲಿ ಖುಷಿಯೇ ಇಲ್ಲದ್ದಂತೆ ಆಗುತ್ತದೆ. ಪತಿ  ವಿರುದ್ಧ ಬೆಂಗಳೂರು ನಗರದ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಾರೆ ನಟಿ ಚೈತ್ರಾ. 2006 ರಲ್ಲಿ ಚೈತ್ರಾ ಲಿಕ್ಕರ್ ಬ್ಯುಸಿನೆಸ್ ಮ್ಯಾನ್ ರನ್ನು ಪ್ರೀತಿಸಿ ವಿವಾಹವಾಗಿರುತ್ತಾರೆ. ಆದರೆ ಚೈತ್ರಾ ಸಿನಿಮಾ ನಟಿಯಾಗಿದ್ದ ಕಾರಣ ಆಕೆಯ ಮೇಲೆ ಸಿಕ್ಕಾಪಟ್ಟೆ ಅನುಮಾನವಿತ್ತಂತೆ.

Advertisement

ಚೈತ್ರಾ ಎಲ್ಲಿಗೆ ಹೋದರೂ ಅವರೊಂದಿಗೆ ಗನ್ ಮ್ಯಾನ್ ಅನ್ನು ಕಳುಹಿಸುತ್ತಿದ್ದರಂತೆ, ಹೀಗಾಗಿ ಪತಿಯ ಕಾಟದಿಂದ ಚೈತ್ರಾ ಬೇಸತ್ತಿದ್ದರು. ಇಷ್ಟು ಮಾತ್ರವಲ್ಲದೆ ಅಮೂಲ್ಯ ಅನ್ನೋ ಯುವತಿಯೊಂದಿಗೆ ಪತಿ ಬಾಲಾಜಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತಿ ನನ್ನ ಸಂಪಾದನೆಯ ಹಣವನ್ನು ಪಡೆದು ಅಕ್ರಮ ಸಂಬಂಧ ಇರುವ ಯುವತಿಗೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Advertisement

ಚೈತ್ರಾ ಅವರನ್ನು ವಿವಾಹವಾಗುವ ಸಂಧರ್ಭದಲ್ಲಿ ಸಿನಿಮಾಗಳಲ್ಲಿ ಅಭಿನಯಿಸಬಾರದು ಎಂದು ಅಕ್ಷೇಪಣೆ ಮಾಡಿದ್ದರಂತೆ. ಇದರಂತೆ ಚೈತ್ರಾ ವಿವಾಹವಾಗುತ್ತಿದ್ದಂತೆ ಅಭಿನಯಕ್ಕೆ ವಿದಾಯ ಹೇಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತವರು ಮನೆಯವರ ಸಹಾಯದಿಂದ ಧಾರಾವಾಹಿ ಒಂದನ್ನ ನಿರ್ಮಾಣ ಮಾಡಿದ್ದರು. ಹೀಗೆ ಮತ್ತೇ ಬಣ್ಣದ ಬದುಕಿನತ್ತ ತನ್ನ ಪತ್ನಿ ಮೂಖ ಮಾಡುತ್ತಿದ್ದಂತೆ, ಬಾಲಾಜಿ ಮಾನಸಿಕ ಹಾಗೂ ದೈಹಿಕವಾಗಿ ಚೈತ್ರಾ ಅವರಿಗೆ ಹಿಂಸೆ ನೀಡಲು ಪ್ರಾರಂಭಿಸಿದನಂತೆ. ಅಲ್ಲದೇ ಸಾಕಷ್ಟು ಸಲ ಚೈತ್ರಾ ಅವರ ಮೇಲೆ ಕೈ ಮಾಡಿದ್ದು ಹಲವು ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಸಹ ಪಡೆದಿದ್ದಾರೆ. ಈ ಕಾರಣಕ್ಕಾಗಿ ತಮ್ಮ ಸಂಸಾರವನ್ನು ಹೊಡೆದುಕೊಳ್ಳಲು
ಚೈತ್ರಾ ನಿಶ್ಚಯಿಸಿದ್ದಾರೆ.
All Rights Reserved Namma Kannada Entertainment.

Advertisement
Share this on...