ಪರಭಾಷೆಯ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ಕನ್ನಡತಿ ಚೈತ್ರಾ ರೈ

in ಮನರಂಜನೆ/ಸಿನಿಮಾ 480 views

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆಶು ಬೆದ್ರ ನಿರ್ದೇಶನದ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ವಿಲನ್ ವಿಶಾಖ ಆಗಿ ಅಭಿನಯಿಸಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಕರಾವಳಿ ಕುವರಿ ಚೈತ್ರಾ ರೈ ಅವರು ಇಂದು ಪರಭಾಷೆಯ ಕಿರುತೆರೆಯಲ್ಲಿ ಫುಲ್ ಬ್ಯುಸಿ. ರಾಧಾ ಕಲ್ಯಾಣ ಧಾರಾವಾಹಿಯ ನಂತರ ತೆಲುಗು ಕಿರುತೆರೆಯತ್ತ ಮುಖ ಮಾಡಿರುವ ಚೈತ್ರಾ ರೈ ಬರೋಬ್ಬರಿ ಏಳು ವರ್ಷಗಳಿಂದ ತೆಲುಗು ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇದರ ಜೊತೆಗೆ ಇದೀಗ ಕನ್ನಡ ಕಿರುತೆರೆಯಿಂದ ಚೈತ್ರಾ ರೈ ದೂರವಿದ್ದರೂ ಇಂದಿಗೂ ಆಕೆ ವಿಶಾಖಾ ಎಂದೇ ಫೇಮಸ್ಸು! ಜನ ಇಂದಿಗೂ ಆಕೆಯನ್ನು ವಿಶಾಖಾ ಎಂದೇ ಗುರುತಿಸುವುದು. ಅಷ್ಟರ ಮಟ್ಟಿಗೆ ಚೈತ್ರಾ ಅವರ ಪಾತ್ರ ಸೀರಿಯಲ್ ಪ್ರಿಯರ ಮನದಲ್ಲಿ ಅಚ್ಚೊತ್ತಿದೆ. ಹೋಟೆಲ್ ಮ್ಯಾನೆಜ್ ಮೆಂಟ್ ಕೋರ್ಸ್ ಮಾಡುತ್ತಿದ್ದ ಚೈತ್ರಾಗೆ ನಟನೆ ಬಯಸದೇ ಬಂದ ಅವಕಾಶ ಎಂದರೆ ಸುಳ್ಳಲ್ಲ. ನಟಿಸುವ ಆಫರ್ ದೊರೆತಾಗ ಓದಿಗೆ ತಿಲಾಂಜಲಿ ಹಾಕಿದ ಚೈತ್ರಾ ನಟನಾ ಲೋಕದಲ್ಲಿ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿದರು. ಕುಸುಮಾಂಜಲಿ, ಗೆಜ್ಜೆಪೂಜೆ, ನಾಗಮಣಿ, ಪೌರ್ಣಮಿ, ಯುಗಾದಿ, ಬೊಂಬೆಯಾಟವಯ್ಯಾ, ಬಣ್ಣದ ಬುಗುರಿ ಧಾರಾವಾಹಿಯಲ್ಲಿ ನಟಿಸಿರುವ ಚೈತ್ರಾ ಗೆ ಹೆಸರು ತಂದುಕೊಟ್ಟಿದ್ದು ರಾಧಾ ಕಲ್ಯಾಣದ ವಿಶಾಖಾ ಪಾತ್ರ.

Advertisement

Advertisement

ರಾಧಾ ಕಲ್ಯಾಣ ಧಾರಾವಾಹಿಯ ನಂತರ ತೆಲುಗು ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ಚೈತ್ರಾ ರೈ ಅಲ್ಲೂ ತಮ್ಮ ಅಭಿನಯದ ಮೂಲಕ ಮನೆ ಮಾತಾದವರು. ಸದ್ಯ ತೆಲುಗು ಕಿರುತೆರೆಯ ಬೇಡಿಕೆಯ ನಟಿಯ ಪೈಕಿ ಒಬ್ಬರಾಗಿರುವ ಚೈತ್ರಾ ಅಕ್ಕ ಚೆಲ್ಲುಲು ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

“ನಟನೆ ಎಂಬುದು ಒಂದೆರಡು ದಿನಗಳಲ್ಲಿ ಕಲಿತು ಮುಗಿಯುವಂತಹುದಲ್ಲ. ಬದಲಿಗೆ ಈ ರಂಗದಲ್ಲಿ ಪ್ರತಿನಿತ್ಯವೂ ಕಲಿಯುವುದಿರುತ್ತದೆ” ಎಂದು ಹೇಳುವ ಚೈತ್ರಾ ರೈ ” ಇಂದು ನಾನು ಕನ್ನಡ ಕಿರುತೆರೆಯಲ್ಲಿ ಅಭಿನಯಿಸುತ್ತಿಲ್ಲ ನಿಜ. ಆದರೆ ಕನ್ನಡ ಕಿರುತೆರೆ ವೀಕ್ಷಕರು ನನ್ನನ್ನು ಇಂದಿಗೂ ಮರೆತಿಲ್ಲ ಎಂಬುದಕ್ಕೆ ವಿಶಾಖಾ ಪಾತ್ರವೇ ಸಾಕ್ಷಿ. ಧಾರಾವಾಹಿ ಮುಗಿದು ಇಷ್ಟು ವರ್ಷಗಳಾದರೂ ಜನ ನನ್ನನ್ನು ಅದೇ ಪಾತ್ರದಲ್ಲಿ ಗುರುತಿಸುತ್ತಿದ್ದಾರೆ. ಕಲಾವಿದೆಗೆ ಇದಕ್ಕಿಂತ ಸಂತಸದ ವಿಚಾರ ಬೇರೇನಿದೆ” ಎಂದು ಸಂತಸದಿಂದ ಹೇಳುತ್ತಾರೆ ಚೈತ್ರಾ ರೈ.

Advertisement

ಸದ್ಯ ತೆಲುಗು ಕಿರುತೆರೆಯಲ್ಲಿ ಕೆರಿಯರ್ ರೂಪಿಸಿಕೊಂಡಿರುವ ಚೈತ್ರಾ ಅವರು ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರೂ ಕನ್ನಡ ಭಾಷೆಯಲ್ಲಿ ಸಿಕ್ಕಷ್ಟು ಸಂತಸ ಅಲ್ಲಿ ಸಿಕ್ಕಿಲ್ಲ.
– ಅಹಲ್ಯಾ

Advertisement
Share this on...