ರೈತರನ್ನು ಉಳಿಸೋಣ, ಅವರಿಗೆ ಧಕ್ಕಬೇಕಾದ ಪಾಲು ಸಿಗಲಿ…!

in News/ಕನ್ನಡ ಮಾಹಿತಿ 51 views

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರದ್ದು ಕಷ್ಟಕ್ಕೆ ಮಿಡಿಯುವ ಹೃದಯ ಅನ್ನುವುದು ತಿಳಿದೆ ಇದೆ. ಅವರ ಪ್ರಾಣಿ ಪ್ರೀತಿ, ಸಹಾಯ, ರೈತರ ಬಗೆಗಿನ ಕಾಳಜಿಯನ್ನ ಮತ್ತೆ ಹೇಳಬೇಕಿಲ್ಲ, ಸದಾ ಒಂದಲ್ಲಾ ಒಂದು ಸಹಾಯ ಮಾಡುತ್ತಲೇ ಇರುತ್ತಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಸಾರ್ವಜನಿಕರಲ್ಲಿ ಮನವಿಯೊಂದನ್ನ ಮಾಡಿದ್ದಾರೆ. ಅದು ತಮ್ಮಗಾಗಿ ಅಲ್ಲ ರೈತರಿಗಾಗಿ.

Advertisement

 

Advertisement

Advertisement

 

Advertisement

ಲಾಕ್ ಡೌನ್ ಹಿನ್ನಲೆ ಬಡವರು ಹಾಗೂ ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಬಡಜನತೆ ಸರಿಯಾಗಿ ಊಟ ಸಿಗದೆ ಪರದಾಡಿದರೆ ಅನ್ನದಾತ ತಾನು ತಿಂಗಳುಗಟ್ಟಲೆ, ವರ್ಷಗಟ್ಟಲೆ ಬೆಳೆದ ಬೆಳೆ ಮಾರಾಟವಾಗುತ್ತಿಲ್ಲ, ಕೊಳೆಯುತ್ತಿದೆ, ಬೀದಿ ಪಾಲಾಗುತ್ತಿದೆ ಅಂತ ಮರುಗುತ್ತಿದ್ದಾರೆ. ಸರ್ಕಾರ ಬಡಜನತೆಗೆ ಹೇಗೋ ಧಾನ್ಯ, ಆಹಾರ ಒದಗಿಸಲು ಮುಂದಾಗಿದೆ. ಆದರೆ ರೈತರ ಪಾಡು ಹೇಳತೀರದಾಗಿದೆ.

 

 

ಲಕ್ಷಾಂತರ ರೂಪಾಯಿಯ ಕರ್ಬುಜ, ಕಲ್ಲಂಗಡಿ ವಿವಿಧ ರೀತಿಯ ತರಕಾರಿ ಹಲವು ಬಗೆಯ ಹೂವು ಹೀಗೆ ಅನೇಕ ರೀತಿಯ ಬೆಳೆಗಳನ್ನ ಕೊಳ್ಳುವವರಿಲ್ಲದೆ ಅನಿವಾರ್ಯವಾಗಿ ಬೀದಿಗೆ ಚೆಲ್ಲುತ್ತಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಅವುಗಳನ್ನ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ರೈತರಿಗೆ ಕಷ್ಟವಾಗಲು ಬಿಡುವುದಿಲ್ಲ ಅಂತ ಸರ್ಕಾರ ಹೇಳಿದರೂ ಕೊಳ್ಳುವವರೇ ಇಲ್ಲದಂತಾಗಿದೆ. ಇದೆಲ್ಲದರ ಮಧ್ಯೆ ತರಕಾರಿ ಹಣ್ಣು ಕೊಳ್ಳಲು ಅವಕಾಶವಿದ್ದು ಈ ಅವಕಾಶವನ್ನಾದರೂ ಬಳಸಿಕೊಂಡು ಮಾರಬೇಕು ಅಂತ ಯಾವುದೇ ಮಧ್ಯವರ್ತಿಗಳು ಇಲ್ಲದೆ ಹಲವು ರೈತರು ನೇರವಾಗಿ ಮಾರಾಟ ಮಾಡಲು ಇಳಿದಿದ್ದಾರೆ.

 

 

ಸೂಕ್ತ ಬೆಲೆ ನೀಡಿ ಜನ ಕೊಂಡುಕೊಳ್ಳಬೇಕು ಅಷ್ಟೇ ಈ ಪರಿಸ್ಥಿತಿಯನ್ನು ಅರಿತಿರುವ ದಾಸ ರೈತರಿಗೆ ನೆರವಾಗುವಂತೆ ಅವರೊಂದಿಗೆ ಇರುವಂತೆ ಕರೆ ನೀಡಿದ್ದಾರೆ. ಈ ಕುರಿತು ಟ್ಟೀಟ್ ಮಾಡಿರುವ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿರುವ ಕಾರಣ ರಾಜ್ಯದೆಲ್ಲೆಡೆ ಬೇಡಿಕೆ ಇಲ್ಲದೆ ರೈತರು ತಾವು ಬೆಳೆದ ತರಕಾರಿಯನ್ನ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತರುತ್ತಿದ್ದಾರೆ. ಯಾವುದೇ ಮಧ್ಯವರ್ತಿಗಳಿಲ್ಲದೆ ಮಾರಾಟ ಮಾಡಲು ಮುಂದಾಗಿದ್ದು ಅವರ ಬಳಿ ತರಕಾರಿ ಖರೀದಿಸುವ ಮೂಲಕ ರೈತರನ್ನು ಉಳಿಸೋಣ, ಅವರಿಗೆ ಧಕ್ಕಬೇಕಾದ ಹಣವು ಅವರ ಪಾಲಾಗಲಿ ಎಂಬುದು ನನ್ನ ಆಶಯ, ಧನ್ಯವಾದಗಳು ಅಂತ ಬರೆದುಕೊಂಡಿದ್ದಾರೆ.

 

 

 

ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಿದ್ದು ನಾವೆಲ್ಲರೂ ಕೈಜೋಡಿಸಿ ದೇಶದ ಬೆನ್ನೆಲುಬಾದ ರೈತರನ್ನ ರಕ್ಷಿಸೋಣ ಅಂತ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಮತ್ತೊಬ್ಬರು ಕಮೆಂಟ್ ಮಾಡಿ ರೈತರ ವಿಷಯ ಬಂದಾಗ ಬಾಸ್ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ರೈತರ ಮೇಲಿರುವ ಅಭಿಮಾನ ನೋಡಿದರೆ ತುಂಬಾ ಇಷ್ಟವಾಯಿತು. ನಿಮ್ಮ ಅಭಿಮಾನಿಯಾಗಲು ತುಂಬಾ ಪುಣ್ಯ ಮಾಡಿದ್ದೇನೆ ಎಂದು ಅವರ ಅಭಿಮಾನಿ ಹೇಳಿಕೊಂಡಿದ್ದಾರೆ.

– ಸುಷ್ಮಿತಾ

Advertisement
Share this on...