ಕೊರೋನಾ ನಡುವೆಯೇ ಚಾಮುಂಡಿ ತಾಯಿಯ ಮೊರೆ ಹೋದ ಡಿಬಾಸ್ !

in ಕನ್ನಡ ಮಾಹಿತಿ/ಸಿನಿಮಾ 163 views

ನಮ್ಮ ರಾಜ್ಯದಲ್ಲಿ ಸಾಂಸ್ಕೃತಿಕ  ಮತ್ತು ಭಾವೈಕ್ಯತೆಗೆ ಹೆಸರುವಾಸಿಯಾದ ಸ್ಥಳ ಎಂದರೆ ಅದು  ನಮ್ಮ ಮೈಸೂರು. ಕೋಟ್ಯಾಂತರ ಪ್ರವಾಸಿಗರನ್ನು ಕೈ ಬೀಸಿ ಕರೆದು ತನ್ನತ್ತ ಸೆಳೆಯುತ್ತಿದೆ.  ಈ ಅರಮನೆ ನಗರಿಯೂ  ನಮ್ಮ ರಾಜ್ಯ ದಲ್ಲಿರುವುದೆ ನಮ್ಮ ಪುಣ್ಯ ಎಂದೆನಿಸುತ್ತದೆ.  ಭವ್ಯವಾದ ಅರಮನೆಗಳು, ಸುಂದರವಾದ ಉದ್ಯಾನವನಗಳು ಮತ್ತು ಶ್ರೀಮಂತ ಸಾಂಸ್ಕೃತಿಕ  ಪರಂಪರೆಯೊಂದಿಗೆ ಪ್ರವಾಸಿಗರನ್ನು ಮೋಡಿ ಮಾಡಿ ಬಿಟ್ಟಿದೆ. ಮೈಸೂರು ನಗರವು ರೇಷ್ಮೆಗೆ ಹೆಸರುವಾಸಿಯಾಗಿದ್ದು  ಶ್ರೀಗಂಧ ಮತ್ತು ಧೂಪದ್ರವ್ಯದ ಕೇಂದ್ರವಾಗಿದೆ.  ಮೈಸೂರಿನಲ್ಲಿ ಪ್ರೇಕ್ಷಕರ ಕಣ್ಮನ ಸೆಳೆಯಲು ಹಲಾವಾರು ಪ್ರವಾಸಿ ತಾಣಗಳಿದ್ದು, ಅದರಲ್ಲಿ  ಚಾಮುಂಡಿ ಬೆಟ್ಟವು ಕೂಡ ಒಂದು. ಚಾಮುಂಡಿ ಬೆಟ್ಟ ನಗರದಿಂದ 13 ಕಿ. ಮೀ ದೂರದಲ್ಲಿದ್ದು,  ತಾಯಿ ಚಾಮುಂಡೇಶ್ವರಿಯನ್ನು ಕರುನಾಡ ಜನರು ನಾಡ ದೇವತೆ ಎಂದು ಪೂಜಿಸುತ್ತಾರೆ. ಚಾಮುಂಡೇಶ್ವರಿ ದೇವಸ್ಥಾನವು ಮೈಸೂರಿನ ದೊಡ್ಡ ಆಕರ್ಷಣೆಯಾಗಿದೆ. ಈ ದೇವಾಲಯವು ಮುಖ್ಯ ಬೆಟ್ಟದ ತುದಿಯಲ್ಲಿದ್ದು, 1008 ಕಲ್ಲಿನ ಮಟ್ಟಿಲುಗಳ ಮೂಲಕ ತಲುಪಬೇಕು.  ಅಷಾಡ ಮಾಸದಲ್ಲಂತೂ ವಿಶೇಷ ಪೂಜೆ ಹಾಗೂ ತಾಯಿಯ ಅಲಂಕಾರ ನೋಡುವುದೇ ಒಂದು ಪುಣ್ಯ.

Advertisement

Advertisement

ಇನ್ನು ವಿಶ್ವವಿಖ್ಯಾತಿ ಗಳಿಸಿರುವ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಆಷಾಢದ ಕಳೆಯೇ ಇಲ್ಲದಂತಾಗಿದೆ. ಪ್ರತಿ ವರ್ಷದಂತೆ ವಿಜೃಂಭಣೆಯಿಂದ ನಡೆಯುತ್ತಿದ್ದ ಆಷಾಢ ಮಾಸದ ವಿಶೇಷ ಶುಕ್ರವಾರದ ಪೂಜೆಗಳು ಯಾವುದು  ನಡೆಯುತ್ತಿಲ್ಲ. ಲಕ್ಷಾಂತರ ಭಕ್ತರೂ ಇರದೆ ಇಡೀ ಬೆಟ್ಟ ಬಣಗುತ್ತಿದೆ. ಕೇವಲ ನಾಡದೇವಿಗೆ ಆಷಾಢ ಮಾಸದ ಪೂಜೆ ಸಾಂಪ್ರದಾಯಿಕ ಪೂಜೆ ನೇರವೇರಿಸಿ ಬೆಳಗ್ಗೆಯೇ ದೇವಾಲಯದ ಬಾಗಿಲನ್ನು  ಮುಚ್ಚಲಾಯಿತ್ತು.  ಮೊಟ್ಟ ಮೊದಲ ಬಾರಿಗೆ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದಲ್ಲಿ ಸಾರ್ವಜನಿಕರೇ ಇಲ್ಲದ  ಆಷಾಢ ಪೂಜೆ ನೇರವೇರಿದೆ. ಮನೆಯಲ್ಲೇ ಕುಳಿತು ಕೊರೋನಾ ವಿರುದ್ಧ ಹೋರಾಡಬೇಕಾದಂತಹ ಅನಿರ್ವಾಯತೆ ಒದಗಿ ಬಂದಿದೆ.

Advertisement

 

Advertisement

ಇಂದು ಆಷಾಢ ಮಾಸದ ಮೂರನೇ ಶುಕ್ರವಾರದ ಹಿನ್ನೆಲೆಯ ಕಾರಣ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಆಷಾಢ ಶುಕ್ರವಾರದಂದು ಕೇವಲ ನಿತ್ಯ ಪೂಜೆಗೆ ಸೀಮಿತವಾಗಿರುವ ಕಾರಣದಿಂದ ‌ಮೂರನೇ ಶುಕ್ರವಾರವು ಸಹ ದೇವರಿಗೆ ಅಭಿಷೇಕ ನಂತರ ವಿಶೇಷ ಪೂಜೆ ನಡೆಯಿತು. ಎಲ್ಲರಿಗೂ ತಿಳಿದಿರುವ ಹಾಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಾಯಿಯ ಅಪ್ಪಟ ಭಕ್ತ. ಬಿಡುವಿನ ಸಮಯದಲ್ಲಿ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿರುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೆಳಂ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿದ ಅವರು, ಕೊರೋನಾ ಭೀತಿಯ ನಡುವೆಯೂ ತಾಯಿಯ ದರ್ಶನವನ್ನು ಪಡೆದಿದ್ದಾರೆ.

ಅವರ ಜೊತೆ  ಸ್ನೇಹಿತ ಉಪಮೇಯರ್ ಸಿ.ಶ್ರೀಧರ್  ಮತ್ತು ನಿರ್ಮಾಪಕ ಸಂದೇಶ್ ಅವರು ಕೂಡ ಸಾತ್ ನೀಡಿದರು. ಕೊರೊನಾ ಭೀತಿ ಇದ್ದರು ಕೆಲವು  ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದು ಧನ್ಯಾರಾಗುತ್ತಿದ್ದಾರೆ.   ಭಕ್ತರ ನಡುವೆಯೇ  ನಿಂತು  ದರ್ಶನ್ ಮಾಸ್ಕ್ ಧರಿಸಿ ದೇವರ ಆಶೀರ್ವಾದ ಪಡೆದಿದ್ದಾರೆ.

Advertisement
Share this on...