ಚಂದನ್ ಆಚಾರ್ ಅವರ ನೆಚ್ಚಿನ ಪುಸ್ತಕ ಯಾವುದು ಗೊತ್ತಾ?

in ಮನರಂಜನೆ 38 views

ಪ್ರತಿ ವರ್ಷ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನ (ಇದನ್ನು ಅಂತರಾಷ್ಟ್ರೀಯ ಪುಸ್ತಕ ದಿನ ಎಂದೂ ಕರೆಯುತ್ತಾರೆ) ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (ಯುನೆಸ್ಕೋ) 1995ರಲ್ಲಿ ಮೊದಲ ಬಾರಿಗೆ ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯಗಳ ಬಗ್ಗೆ ಅರಿವು ಮತ್ತು ಪ್ರಚಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿತು. ಈ ದಿನದಂದು ವಿಲಿಯಮ್ ಶೆಕ್ಸ್ ಪಿಯರ್ ಅವರ ಪುಣ್ಯತಿಥಿಯನ್ನೂ ಸಹ ಆಚರಿಸುವರು.

Advertisement

 

Advertisement

Advertisement

 

Advertisement

ಅಂದಹಾಗೆ ನಿಮಗೆ ಕನ್ನಡ ಬಿಗ್ ಬಾಸ್ ಸೀಸನ್ 7 ಸ್ಪರ್ಧಿ ಚಂದನ್ ಆಚಾರ್ ಗೊತ್ತಿರಲೇಬೇಕು. ಮೈಸೂರಿನಲ್ಲಿ ಹುಟ್ಟಿ ಬೆಳೆದ ಚಂದನ್, ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ರಂಗಭೂಮಿಯೆಡೆಗೆ ಆಕರ್ಷಿತರಾಗಿ `ನಟನಾ’ ರಂಗತಂಡ ಸೇರಿದರು. ಇಲ್ಲಿ `ಸಂಕ್ರಾತಿ’,`ಮಲೆಗಳಲ್ಲಿ ಮದುಮಗಳು’, ಮುಂತಾದ ನಾಟಕಗಳಿಗೆ ಬಣ್ಣ ಹಚ್ಚಿದ್ದಾರೆ. ಇವರು ಪತ್ರಿಕೋದ್ಯಮ ವಿಧ್ಯಾರ್ಥಿ. ನಟನೆ ಮಾತ್ರವಲ್ಲದೇ ಮಿಮಿಕ್ರಿ ಕೂಡ ಮಾಡುತ್ತಾರೆ.

 

 

`ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಇವರ ಹಾಸ್ಯ ಪಾತ್ರ ಚಂದನ್’ಗೆ ಮೊದಲ ಬಾರಿಗೆ ಖ್ಯಾತಿ ತಂದು ಕೊಟ್ಟಿತು. ನಂತರ `ಮುಗುಳು ನಗೆ’,`ದಯವಿಟ್ಟು ಗಮನಿಸಿ’ ಮುಂತಾದ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿದರು. 2019 ರಲ್ಲಿ ತೆರೆಕಂಡ `ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.

 

 

ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 7 ರಲ್ಲಿ 12 ನೇ ಸ್ಪರ್ಧಿಯಾಗಿ ಭಾಗವಹಿಸಿದ್ದ ಚಂದನ್, 98 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, 14 ನೇ ವಾರ ಮನೆಯಿಂದ ಹೊರಬಂದರು.
ಇದೀಗ ಚಂದನ್ ಅವರು ವಿಶ್ವ ಪುಸ್ತಕ ದಿನದ ಪ್ರಯುಕ್ತ ತಮ್ಮ ನೆಚ್ಚಿನ ಪುಸ್ತಕ ಮತ್ತು ಕವಿ ಯಾರೆಂದು ತಿಳಿಸಿದ್ದಾರೆ. ಚಂದನ್’ಗೆ ಮೈಸೂರಿ ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಎಂದರೆ ಬಹಳ ಇಷ್ಟವಂತೆ. ಕೆ.ಎಸ್.ನರಸಿಂಹಸ್ವಾಮಿ ಕನ್ನಡಿಗರ ಅತ್ಯಂತ ಪ್ರೀತಿಯ ಕವನಸಂಕಲನಗಳಲ್ಲೊಂದಾದ ಮೈಸೂರು ಮಲ್ಲಿಗೆಯ ಕರ್ತೃ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ.

 

ಇದುವರೆಗೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮುದ್ರಣ ಭಾಗ್ಯ ಪಡೆದಿದೆ. ಆದರೆ ಚಂದನ್’ಗೆ ಇವರ ಕಣ್ಣೆತ್ತಿ ನೋಡಿದಳು/ಚಂದಿರನ ತನಕ ಬಹಳ ಇಷ್ಟವಾದ ಕವಿತೆಯಂತೆ. ಕಲರ್ಸ್ ಕನ್ನಡದ ಫೇಸ್ ಬುಕ್ ಖಾತೆಯಲ್ಲಿ ಅಧಿಕೃತವಾಗಿ ಚಂದನ್ ಈ ಕವಿತೆಯನ್ನು ವಾಚಿಸಿರುವುದನ್ನು ನೀವೂ ನೋಡಬಹುದು.

Advertisement
Share this on...